ಮಧ್ಯಮವರ್ಗದ ಪ್ರತಿನಿಧಿ ಬಡವರಾಸ್ಕಲ್
ಆತನು ಮಧ್ಯಮವರ್ಗದ ಹುಡುಗ, ಕಾಸಿಲ್ಲದಿದ್ದರೂ ಮುಂದೆತಾನು ಸ್ವಂತ ಕಾಲ ಮೇಲೆ ನಿಲ್ಲುತ್ತೇನೆ ಎಂಬ ಅಚಲ ನಂಬಿಕೆ.ಇಂತಹ ಹುಡುಗನಿಗೆಒಂದಷ್ಟು ಗೆಳೆಯರು, ಜತೆಗೆ ಲವ್ ಸ್ಟೋರಿ.ಇಷ್ಟು ಹೇಳಿದ ಮೇಲೆ ಇದೊಂದು ಗೆಳೆಯರ ಮತ್ತುಕುಟುಂಬ ನಾಟಕಎಂದು ಊಹಿಸಬಹುದಾಗಿದೆ.ಆಟೋಚಾಲಕನ ಪುತ್ರನಾದ ಶಂಕರ್‌ರಾಜಕಾರಣಿಯ ಪುತ್ರಿಯನ್ನು ಪ್ರೀತಿಸುತ್ತಾನೆ. ಮುಂದೆ ಮದುವೆಆಗುತ್ತಾನೋಇಲ್ಲವೋಎಂಬುದುಒಂದು ಏಳೆಯ ಸಾರಾಂಶವಾಗಿದೆ. ನವ ನಿರ್ದೇಶಕ ಶಂಕರ್‌ಗುರು ಸರಳವಾದ ಕಥೆಯನ್ನು ಹೇಳಲು ಭಾವನೆಗಳ ಗುಚ್ಚಗಳನ್ನು ಕಟ್ಟಿದ್ದಾರೆ.ಮಧ್ಯಮ ವರ್ಗದ ದಂಪತಿಗಳಾದ ರಂಗಾಯಣರಘು ಮತ್ತುತಾರಾ ನಡುವೆ ನಡೆಯುವ ಜಗಳದ ದೃಶ್ಯಗಳು ನಮ್ಮ ಮನೆಯಲ್ಲಿಆದಂತೆ ಅನಿಸುತ್ತದೆ.ಜನ ಖುಷಿಪಟ್ಟುಕೊಂಡು ನೋಡುವಚಿತ್ರಕಥೇಇರುವುದು ವಿಶೇಷ. ಮೊದಲೇ ಹೇಳಿದಂತೆ ಫ್ರೆಂಡ್ಸ್‌ಗ್ಯಾಂಗ್ ಸಿನಿಮಾದ ಹೈಲೈಟ್‌ಆಗಿದೆ.
ಶುರುವಿನಿಂದಕೊನೆವರೆಗೂ ನಾಯಕ ಗೆಳಯರನ್ನು ಬಿಟ್ಟುಇರೋದೇಇಲ್ಲ. ಲವ್‌ಸ್ಟೋರಿಗಳಲ್ಲಿ ಸಾಮಾನ್ಯವಾಗಿ ಬರುವಟ್ವಿಸ್ಟ್ ಟರ್ನ್‌ಗಳು ಇದೆ.ಇಂತಹ ಸಂದರ್ಭದಲ್ಲಿ ಆಗುವ ಒಂದಷ್ಟು ನಿರೀಕ್ಷಿತ ಮತ್ತುಅನಿರೀಕ್ಷಿತ ಘಟನೆಗಳನ್ನು ಸೇರಿಸಿಕೊಂಡು ‘ಬಡವರಾಸ್ಕಲ್’ ಚಿತ್ರವನ್ನುಕಟ್ಟಿಕೊಟ್ಟಿದ್ದಾರೆ.
ನಟನೆಜತೆಗೆ ನಿರ್ಮಾಣ ಮಾಡಿರುವಧನಂಜಯ್ ಮಧ್ಯಮವರ್ಗದ ವಿದ್ಯಾವಂತ ಹುಡುಗನ ಪಾತ್ರವನ್ನುಚೆನ್ನಾಗಿ ನಿಭಾಯಿಸಿದ್ದಾರೆ.ನಾಯಕಿಅಮೃತಅಯ್ಯಂಗಾರ್ ಹಾಗೆ ಬಂದು ಹೀಗೆ ಹೋದರೂತಮ್ಮ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ.ತಂದೆಯಕಷ್ಟವನ್ನುರಂಗಾಯಣರಘು, ತಾಯಿಯ ಸಹನೆ ಮತ್ತುಅಸಹನೆಯನ್ನುತಾರಾಜನರಿಗೆಅದ್ಬುತವಾಗಿ ತಲುಪಿಸಿದ್ದಾರೆ. ಗೆಳೆಯನಾಗಿ ನಾಗಭೂಷಣ್‌ಇವರೊಂದಿಗೆ ಪೂರ್ಣಚಂದ್ರಮೈಸೂರು, ನಿರಂಜನ್, ಮಹಾದೇವ್, ಹರ್ಷ, ಚಂದ್ರು, ಶಮಂತ್, ಲಲ್ಲು ಹಾಗೂ ಸ್ವರ್ಶಾರೇಖಾಎಲ್ಲರೂಚೆನ್ನಾಗಿತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.ವಾಸುಕಿವೈಭವ್ ಸಂಗೀತದಲ್ಲಿಎರಡು ಹಾಡುಗಳು ಕೇಳಬಲ್. ಪ್ರೀತಾಜಯರಾಮನ್‌ಛಾಯಾಗ್ರಹಣಕಣ್ಣಿಗೆತಂಪುಕೊಡುತ್ತದೆ.ವೀಕೆಂಡ್‌ಗೆತಾವೇನಾದರೂಯೋಜನೆ ಹಾಕಿಕೊಂಡಿದ್ದರೆ ಮೊದಲು ‘ಬಡವರಾಸ್ಕಲ್’ ಸಿನಿಮಾವನ್ನು ನೋಡಿರೆಂದು ಹೇಳಬಹುದು.