ಸಂಬಂಧಗಳ ಸುತ್ತ ಸಾರುವಡಿಎನ್‌ಎ
ಒಂದು ಸುಂದರಕುಟುಂಬದಲ್ಲಿ ನಾವು ಬಯಸುವ ಹಾಸ್ಯ, ಭಾವನಾತ್ಮಕ ಸನ್ನಿವೇಶ, ಚಿಕ್ಕಚಿಕ್ಕ ಬೇಸರ, ಕೊನೆಗೆ ಎಲ್ಲವನ್ನು ಮರೆಸುವಂತಹಘಟನೆ. ಇವಿಷ್ಟನ್ನುಅಚ್ಚುಕಟ್ಟಾಗಿಕಟ್ಟಿಕೊಟ್ಟಿರುವ ಸಿನಿಮಾಅಂದರೆಅದು ‘ಡಿಎನ್‌ಎ’. ಡಿಎನ್‌ಎ ಬದಲಾದ್ದರಿಂದ ಆಗುವ ಪರಿಣಾಮದ ಸುತ್ತ ಸಾಗುವ ಕಥೆಯಾಗಿದೆ. ಒಂದುಕಡೆ ಶ್ರೀಮಂತ ಕುಟುಂಬ, ಮತ್ತೋಂದುಕಡೆಕಿರಾಣಿಅಂಗಡಿ ಮಾಲೀಕನಕುಟುಂಬದ ನಡೆವೆ ಬರುವಟೆಸ್ಟ್‌ನಿಂದ ಸಂಬಂಧಗಳು ಹೇಗೆ ಬದಲಾಗುತ್ತದೆಎಂಬುದುಕಥೆಯ ಸಾರಾಂಶ. ಪ್ರಾರಂಭದಲ್ಲಿ ಪಾತ್ರಗಳ ಪರಿಚಯ ಮಾಡಿಸುವುದರಿಂದ ಸನ್ನಿವೇಶಗಳು ಆಮೆಯಂತೆ ಸಾಗುತ್ತದೆ.ಮಧ್ಯಂತರದಲ್ಲಿ ಹೊಸ ಪಾತ್ರಗಳ ಆಗಮನದಿಂದ ಕೊಂಚ ಬದಲಾವಣೆ ನೀಡುವುದರಜೊತೆಘಟನೆಯ ಸತ್ಯಾಂಶವನ್ನು ತಿಳಿಸುತ್ತದೆ.
ಸೆಂಟಿಮೆಂಟ್ ದೃಶ್ಯಗಳ ಮೂಲಕ ಸಾಗುವುದರಿಂದ, ಹುಟ್ಟಿದ ಮಕ್ಕಳು ಅದಲು ಬದಲಾಗಿಒಂದು ಹಂತದ ಬಳಿಕ ತಿಳಿದಾಗ ಆಗುವ ಅವಾಂತರಗಳ ಡ್ರಾಮಾ ತೆರೆದುಕೊಳ್ಳುತ್ತದೆ.
ಲವಲವಿಕೆಯಿಂದ ನಟಿಸಿರುವ ಅಚ್ಯುತಕುಮಾರ್‌ಅಭಿನಯಇಡೀಚಿತ್ರಕ್ಕೆ ಪ್ಲಸ್ ಪಾಯಿಂಟ್‌ಆಗಿದೆ.ರೋಜರ್‌ನಾರಾಯಣ್ ದ್ವಿತೀಯ ಸ್ಥಾನದಲ್ಲಿ ಬಂದು ನಿಲ್ಲುತ್ತಾರೆ. ಎಸ್ತರ್‌ನರೋನ ಮತ್ತುಯಮುನಾತಾಯಂದರಾಗಿ ಗಮನ ಸೆಳೆಯುತ್ತಾರೆ.ಮಾಸ್ಟರ್‌ಕೃಷ್ಣಚೈತನ್ಯ ಹಾಗೂ ಮಾಸ್ಟರ್‌ಧ್ರುವಮೇಹು ಪಾತ್ರಗಳಿಗೆ ಜೀವತುಂಬಿದ್ದಾರೆ.ರಚಿಸಿ ನಿರ್ದೇಶನ ಮಾಡಿರುವ ಪ್ರಕಾಶ್‌ರಾಜು ಮೇಹು ಮೊದಲ ಪ್ರಯತ್ನದಲ್ಲೆ ಗೆಲುವು ಸಾಧಿಸಿದ್ದಾರೆ ಎನ್ನಬಹುದು.ಎಂ.ಮೈಲಾರಿ ನಿರ್ಮಾಣದಲ್ಲಿಚಿತ್ರವು ಮೂಡಿಬಂದಿದೆ.ಫ್ಯಾಮಿಲಿ ಆಡಿಯನ್ಸ್‌ಗೆ ಹೇಳಿ ಮಾಡಿಸಿದಂತ ಚಿತ್ರ.
***