James.Film Reviews

Thursday, March 17, 2022

477

ಅಪ್ಪುಕ್ಲಾಸ್ ಮಾಸ್ಅದುವೇಜೇಮ್ಸ್

‘ಜೇಮ್ಸ್’ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ ಭರ್ಜರಿಎಂಟ್ರಿಎಂಥವರಿಗೂ ಪುಳಕಿತವಾದರೆ, ಕೊನೆಯಲ್ಲಿಒಂದುಕಡೆಅವರ ಸಾಧನೆಗಳು, ಮತ್ತೋಂದುಕಡೆ ಮೇಕಿಂಗ್ ದೃಶ್ಯಗಳು ಬರುತ್ತಿರುವಾಗ ನಮಗೆ ಗೊತ್ತಿಲ್ಲದಂತೆ ಕಣ್ಣುಗಳು ಒದ್ದೆಯಾಗುತ್ತದೆ.ಸಿನಿಮಾದದೃಶ್ಯದಲ್ಲಿ ಪುನೀತ್‌ರವರುಕೋಮಾಗೆ ಹೋಗಿ ಆಸ್ಪತ್ರೆಯಲ್ಲಿ ಮಲಗಿರುತ್ತಾರೆ.ಸ್ವಲ್ಪ ಹೋರಾಟದ ನಂತರ ಚೇತರಿಸಿಕೊಳ್ಳುತ್ತಾರೆ.ಇದು ನಿಜ ಜೀವನದಲ್ಲಿ ನಡೆದಿದ್ದರೆ ಎಷ್ಟು ಚೆನ್ನಾಗಿರುತ್ತಿತತುಅನ್ನಿಸುವಂತೆ ನೋಡಗರು ಮಾತನಾಡಿಕೊಳ್ಳುತ್ತಾರೆ.ಮೊದಲ ಚೇಸಿಂಗ್ ಆಕ್ಷನ್‌ದೃಶ್ಯವು ಮೈ ಜುಂ ಅನಿಸುತ್ತದೆ, ಐ ಯಾಮ್‌ಜೇಮ್ಸ್ ಎಂಬ ಧ್ವನಿ ಶಿವಣ್ಣರಿಂದ ಬಂದಾಗ ನಿಜಕ್ಕೂ ಪವರ್‌ಸ್ಟಾರ್‌ಕಾಡುತ್ತಾರೆ.ಕಥೆಯಲ್ಲಿ ಸಂತೋಷ್‌ಕುಮಾರ್ ಆಗಿ ಪುಟ್ಟತಂಡದೊಂದಿಗೆ ಖಾಸಗಿ ಸೆಕ್ಯುರಿಟಿಏಜೆನ್ಸಿ ನಡೆಸುತ್ತಿರುತ್ತಾರೆ.ಶ್ರೀಮಂತ ಉದ್ಯಮಿಗಾಯಕ್ವಾಡ್‌ಗೆಅಂಗರಕ್ಷಕನಾಗಿಇರಲು ಒಪ್ಪಿಕೊಳ್ಳುತ್ತಾನೆ. ಆತನ ಕೆಲಸ ನೋಡಿಖುಷಿಯಾಗಿತಂಗಿಯನ್ನುಕೊಟ್ಟು ಮದುವೆ ಮಾಡಬೇಕುಎನ್ನುವಷ್ಟರಲ್ಲಿ ಸಂತೋಷ್ ಉಲ್ಟಾ ಹೊಡೆಯುತ್ತಾನೆ. 

ತಾನೆಕಾಪಾಡಿದವರಎದೆಗೆಇಂದು ಮುಗಿಸೋಕೆ ಹೊರಡುವುದುಯಾತಕ್ಕೆಎಂದು ತಿಳಿದುಕೊಳ್ಳುವ ಹಂಬಲ ಇದ್ದರೆಚಿತ್ರಮಂದಿರಕ್ಕೆ ಬರುವುದು ಒಳಿತು. ವಿರಾಮದ ನಂತರತಿರುವಕೊಡುವ ಸನ್ನಿವೇಶಗಳು ನೋಡಲುಚೆನ್ನಾಗಿದೆ.

ಮೂರುಆಕ್ಷನ್ ಚಿತ್ರಗಳನ್ನು ನಿರ್ದೇಶನ ಮಾಡಿರುವಚೇತನ್‌ಕುಮಾರ್ ಈ ಬಾರಿಅದಕ್ಕಿಂತಲೂ ಹೆಚ್ಚು ಸೌಂಡ್ ಮಾಡಿದ್ದಾರೆ.ಪ್ರತಿಯೊಂದು ದೃಶ್ಯಗಳು ಶ್ರೀಮಂತವಾಗಿದ್ದು, ಕಣ್ಣಿಗೆತಂಪುಕೊಡುತ್ತದೆ.ಅದರಲ್ಲೂ ವಿದೇಶಿ ಸುಂದರ ಕಟ್ಟಡಗಳು, ಸಮುದ್ರದಲ್ಲಿ ಬೋಟುಗಳು ಬರುವುದುಇನ್ನು ಮುಂತಾದವನ್ನುನೋಡುವುದೇಚೆಂದ.ಇನ್ನುಜೇಮ್ಸ್‌ಅಲಿಯಾಸ್ ಸಂತೋಷ್‌ಕುಮಾರ್ ಬಗ್ಗೆ ಎಷ್ಟು ಮಾತನಾಡಿದರೂಕಡಿಮೆ.ಮಾತುಕಮ್ಮಿಆದರೂ ಕೆಲಸ ಜಾಸ್ತಿ.ಪುನೀತ್ ಈ ತರಹದ್ದೊಂದು ಪಾತ್ರಇಲ್ಲಿಯವರೆಗೂ ಮಾಡಿಲ್ಲಎನ್ನಬಹುದು. ಹೊಡೆದಾಟ, ಡ್ಯಾನ್ಸ್‌ದಲ್ಲಿಅವರಚುರುಕುತನ ನೋಡಿಯೇ ಖುಷಿ ಪಡಬೇಕು. ನಾಯಕಿ ಪ್ರಿಯಾಆನಂದ್‌ತನಗೆ ನೀಡಿದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.ಮಾಫಿಯಾ ದೊರೆಗಳಾಗಿ ಶರತ್‌ಕುಮಾರ್, ಶ್ರೀಕಾಂತ್, ಮಧುಸೂಧನ್, ಮುಖೇಶ್‌ಖನ್ನ ಉಳಿದಂತೆ ಯಶಸ್‌ಶೆಟ್ಟಿ, ರಂಗಾಯಣರಘು, ಸಾಧುಕೋಕಿಲ, ಚಿಕ್ಕಣ್ಣ, ಅನುಪ್ರಭಾಕರ್, ಅಮಿತ್, ಬೇಬಿ ಆರಾಧ್ಯ ಮುಂತಾದವರು ಕಾಣಿಸಿಕೊಂಡಿದ್ದಾರೆ.ಚರಣ್‌ರಾಜ್ ಸಂಗೀತ, ಸ್ವಾಮಿಗೌಡಕ್ಯಾಮೆರಾ, ದೀಪು.ಎಸ್.ಕುಮಾರ್ ಸಂಕಲನಇವೆಲ್ಲವೂ ಪೂರಕವಾಗಿದೆ.ಪುನೀತ್ ಅನುಪಸ್ಥಿತಿಯಲ್ಲಿ ಕೆಲವೊಂದು ದೃಶ್ಯಗಳು ಗೊತ್ತಾಗದಂತೆ ಚಿತ್ರೀಕರಿಸಿರವುದು ಛಾಯಾಗ್ರಾಹಕ ಮತ್ತು ಸಂಕಲನಕಾರನ ಕೈಚಳಕಕ್ಕೆ ಒಂದು ಸಲಾಂ.ಎಂದಿಗೂ ಮಾಸದ ಪವರ್‌ಸ್ಟಾರ್ ನಗುಮುಖವೆ ಚಿತ್ರಕ್ಕೆ ಜೀವಾಳ ಎನ್ನಬಹುದು.ಎಲ್ಲರ ಪರಿಶ್ರಮಕ್ಕೆ ನಿರ್ಮಾಪಕಕಿಶೋರ್‌ಪತ್ತಿಕೊಂಡ ಪ್ರತಿಯೊಂದು ದೃಶ್ಯಗಳಿಗೂ ನೀರಿನಂತೆಖರ್ಚು ಮಾಡಿರುವುದುಎದ್ದುಕಾಣಿಸುತ್ತದೆ.ಒಟ್ಟಾರೆಅಭಿಮಾನಿಗಳಿಗೆ ಖಂಡಿತ ನಿರಾಸೆ ಮಾಡದಚಿತ್ರವಾಗಿ ಮೂಡಿಬಂದಿದೆ.

****

 

Copyright@2018 Chitralahari | All Rights Reserved. Photo Journalist K.S. Mokshendra,