ನೋಡುಗರ ಮನಸೆಳೆಯುವ ಗಂಡುಲಿ
ಶುಕ್ರವಾರ ಬಿಡುಗಡೆಗೊಂಡು ಯಶಸ್ವಿಯಾಗಿ ಪ್ರದರ್ಶನಕಾಣುತ್ತಿರುವ ‘ಗಂಡುಲಿ’ ಚಿತ್ರವನ್ನುಅಂದುಕೊಂಡಂತೆ ಪ್ರೇಕ್ಷಕಇಷ್ಟಪಟ್ಟಿದ್ದಾನೆ. ಕಥೆಯಕುರಿತು ಹೇಳುವುದಾದರೆ ಊರಿನದೇವಸ್ಥಾನಕುರಿತು ಪುರಾತತ್ವಇಲಾಖೆಯಿಂದ ಸರ್ವೆ ಮಾಡಲು ಬಂದವರು ಹಾಗೆ ಮರ್ಡರ್‌ಆಗುತ್ತಾರೆ. ಅವರುಏತಕ್ಕೆಕೊಲೆಯಾದರು.ಅದರಹಿಂದಿರುವಕಾರಣವೇನುಎಂಬುದನ್ನುಥ್ರಿಲ್ಲರ್ ಮೂಲಕ ತೋರಿಸಲಾಗಿದೆ.ಅದನ್ನು ತಿಳಿಯಲು ಚಿತ್ರ ನೋಡಬೇಕು.ನಾಯಕ ಮತ್ತು ನಿರ್ದೇಶಕನಾಗಿಎರಡುಜವಬ್ದಾರಿಯನ್ನು ಹೊತ್ತುಕೊಂಡಿರುವ ವಿನಯ್‌ರತ್ನಸಿದ್ದಿ ಗಂಡುಲಿಯಂತೆ ಅಭಿನಯಿಸಿ, ಪ್ರತಿಭೆತೋರಿಸುವಜತೆಗೆ ಕೆಲಸದಲ್ಲೂ ಸೈ ಅನಿಸಿಕೊಂಡಿದ್ದಾರೆ.
ನಾಯಕಿಛಾಯಾದೇವಿ ನಟನೆಯಲ್ಲಿ ಪರವಾಗಿಲ್ಲ.
ನಾಯಕನತಾಯಿಯಾಗಿ ಸುಧಾನರಸಿಂಹರಾಜು ಚಿತ್ರಕ್ಕೆಕಣ್ಣಾಗಿದ್ದಾರೆ.ಇವರೊಂದಿಗೆಧಮೇಂದ್ರಅರಸ್ ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಉಳಿದಂತೆ ಶಿವಮೊಗ್ಗರಾಮಣ್ಣ, ಸುಬ್ಬೆಗೌಡ, ಶಿವು, ವಿಜಯ್‌ತಮ್ಮ ಪಾತ್ರವನ್ನುಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಅಜಯ್ ಮತ್ತುರವಿದೇವ್ ಸಂಗೀತದಲ್ಲಿಎರಡು ಹಾಡುಗಳು ಕೇಳಬಲ್. ರಾಜುಶಿವಶಂಕರ್-ಶ್ಯಾಮ್‌ಛಾಯಾಗ್ರಹಣ, ಸತೀಶ್‌ಚಂದ್ರಯ್ಯ ಸಂಕಲನ, ಸುರೇಶ್ ಸಾಹಸವಿದೆ. ವಿ.ಆರ್.ಫಿಲ್ಮ್‌ಅಡಿಯಲ್ಲಿಅಮರೇಂದ್ರ, ಪುನೀತ್, ಚಂದನ ಹಾಗೂ ಲೋಕೇಶ್‌ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.ಒಟ್ಟಾರೆ ಪೈಸಾ ವಸೂಲ್ ಸಿನಿಮಾ ಎನ್ನಬಹುದು.
****