Prarambha.Film Reviews

Friday, May 20, 2022

326

ಭಗ್ನ ಪ್ರೇಮಿಯಕಥೆ ವ್ಯಥೆ

ಎಲ್ಲಾಸಿನಿಮಾಗಳಲ್ಲಿ ಕಾಣದಂತ ಸನ್ನಿವೇಶಗಳು ‘ಪ್ರಾರಂಭ’ ಚಿತ್ರದಲ್ಲಿಕಂಡು ಬರುತ್ತದೆ.ಕಥೆಯಲ್ಲಿ ಸಂದರ್ಭವೇ ಪ್ರೇಮಿಗಳಿಬ್ಬರನ್ನು ಬೇರ್ಪಡಿಸುತ್ತದೆ.ತಾವು ಬೇರೆಯಾದಾಗ ಆ ಎರಡು ಹೃದಯಗಳು ಅನುಭವಿಸುವ ಪರಿತಾಪ, ವೇದನೆಯೇ ಸಿನಿಮಾ ಸಾರಾಂಶಎನ್ನಬಹುದು.ಅವನು ಒಬ್ಬಚಿತ್ರಕಾರ, ತಾನು ಬರೆದ ಚಿತ್ರಗಳಿಂದ ಅವಳು ಪರಿಚಯಗೊಂಡುಅದು ಪ್ರೇಮಕ್ಕೆತಿರುಗುತ್ತದೆ.ಅನಾಥನಾಗಿರುವ ಅವನಿಗೆ ತಾತನೇಎಲ್ಲಾ.ಮುಂದೆಅಪ್ಪನ ಆಸ್ತಿ ಅವನ ಪಾಲಾಗುತ್ತದೆ.ಅಷ್ಟೋಂದು ಹಣ ಬಂದರೂ ಮಾನವೀಯ ಮೌಲ್ಯಗಳು, ಪ್ರೀತಿಎಂದರೆ ಏನು?ಅನುಕಂಪ ಒಂದೂ ತಿಳಿದಿರುವುದಿಲ್ಲ. 

ಅದರಅರಿನ್ನು ಅವಳು ತಿಳಿಯಪಡಿಸುವಲ್ಲಿ ಯಶಸ್ವಿ ಆಗುತ್ತಾಳೆ.ಆದರೆಆಕೆಯತಂದೆಯೇ ಪ್ರೀತಿಗೆ ಖಳನಾಗುತ್ತಾನೆ. ಅವನಿಗೆ ಯಾವುದೇ ಕೆಲಸವಿಲ್ಲವೆಂದು ಬೇರೋಬ್ಬನಿಗೆಕೊಟ್ಟು ಮದುವೆ ಮಾಡಲು ನಿರ್ಣಯ ತೆಗೆದುಕೊಳ್ಳುತ್ತಾನೆ. ಆಕೆಯ ಹಠಕ್ಕೆ ಮದುವೆಯನ್ನು ತಪ್ಪಿಸಿ ಬೈಕ್‌ದಲ್ಲಿ ಹೋಗುವಾಗ ಅಪಘಾತವಾಗುತ್ತದೆ.ಇತ್ತ ಅವಳು ಒಲ್ಲದಗಂಡನೊಂದಿಗೆ ತಾಳಿ ಕಟ್ಟಿಸಿಕೊಳ್ಳಲು ಇಷ್ಟವಾಗದೆ ನಿದ್ದೆ ಮಾತ್ರೆ ಸೇವಿಸಿ ಆಸ್ಪತ್ರ್ರೆಗೆ ಸೇರುತ್ತಾಳೆ.ನಂತರಏನಾಗುತ್ತದೆ ಎಂಬ ಉತ್ತರಕ್ಕೆ ಸಿನಿಮಾ ನೋಡಬೇಕು.

ಹೀಗೂ ಕಥೆಯನ್ನು ಹೇಳಬಹುದೆಂದು ಮೊದಲ ಬಾರಿ ನಿರ್ದೇಶನ ಮಾಡಿರುವ ಮನುಕಲ್ಯಾಡಿ ಶ್ರಮ ನಿಜಕ್ಕೂ ಸಾರ್ಥಕವಾಗಿದೆ.ನಾಯಕನಾಗಿ ಮನುರಂಜನ್‌ರವಿಚಂದ್ರನ್ ನಟನೆಗಿಂತಅಭಿನಯದಲ್ಲಿ ಮಿಂಚಿದ್ದಾರೆ.ನವನಾಯಕಿಕೀರ್ತಿಕಲ್ಕರೆ ಪರವಾಗಿಲ್ಲ. ಸುಂದರವಾದ ದೃಶ್ಯಗಳನ್ನು ಸುರೇಶ್‌ಬಾಬು ಸೆರೆಹಿಡಿದರೆ, ಇದಕ್ಕೆ ಪೂರಕವಾಗಿ ಪ್ರಜ್ವಲ್‌ಪೈ ಸಂಗೀತವಿದೆ.

***

 

Copyright@2018 Chitralahari | All Rights Reserved. Photo Journalist K.S. Mokshendra,