ನಾಲ್ಕು ಗೋಡೆ ನಡುವಿನ ನವಿರಾದಕಥನ
ಮದುವೆ ವಯಸ್ಸಿಗೆ ಬಂದ ಮೂವರು ಹೆಣ್ಣು ಮಕ್ಕಳ ಬಗ್ಗೆ ಯೋಚಿಸಬೇಕಿದ್ದ, ತಂದೆತನಗೂ ಸಂಬಂದವಿಲ್ಲದಂತೆಇರುತ್ತಾನೆ. ಅವನು ಅಷ್ಟೋಂದುಕೇರ್‌ಲೆಸ್‌ಆಗಿರುವುದುಎಲ್ಲರಿಗೂ ಸೋಜಿಗ ಅನಿಸುತ್ತದೆ. ಹೊರಗಿನವರು ಮಾತಾಡಿಕೊಳ್ಳುವುದು ಅಲ್ಲದೆ ಪುತ್ರನುಅಪ್ಪನಿಗೆ ನಿನ್ನಜವಬ್ದಾರಿಯನ್ನು ಸರಿಯಾಗಿ ನಿಭಾಯಿಸುಎಂದು ಜಗಳ ಆಡುತ್ತಿರುತ್ತಾನೆ. ಪುತ್ರಿಯರುಕೂಡಅಪ್ಪನು ಹೇಳಿದಂತೆ ನಡೆಯುತ್ತೇವೆಎನ್ನುತ್ತಿರುತ್ತಾರೆ. ಮಕ್ಕಳನ್ನು ಪ್ರೀತಿಯಿಂದ ಬೆಳಸಿದ ಆತ ಮದುವೆಯಾಕೆ ಮಾಡುವುದಿಲ್ಲ. ಒಡೆಯನಾದವನು ದಿವ್ಯಮೌನ ತಾಳಿದ್ದಕ್ಕೆ ಉತ್ತರ ಪೂರ್ತಿಚಿತ್ರ ನೋಡಬೇಕು.ಕಥೆಯು ಸರಳ ಅನಿಸಿದರೂ ನಿರ್ದೇಶಕ ಎಸ್.ಎಸ್.ಸಜ್ಜನ್‌ಚಿತ್ರವನ್ನು ಮನಮುಟ್ಟುವಂತೆ ಭಾವನಾತ್ಮಕವಾಗಿ ಪೋಣಿಸಿದ್ದಾರೆ. ಹೆಣ್ಣು ಮಕ್ಕಳ ಮೇಲೆ ತುಂಬ ಪ್ರೀತಿಇಟ್ಟುಕೊಂಡಿರುವತಂದೆ, ಅದರಂತೆಅಪ್ಪನನ್ನುಅತಿಯಾಗಿ ಹಚ್ಚಿಕೊಂಡಿರುವರುಕಣ್ಣುಒದ್ದೆ ಮಾಡದೆ ಹೊರಗೆ ಬರುವುದಕ್ಕೆ ಆಗುವುದಿಲ್ಲ.
ಅಪ್ಪನ ಪಾತ್ರದಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿರುವ ಅಚ್ಯುತಕುಮಾರ್, ಇದರಲ್ಲಿತಂದೆಯಾದರೂಅವರ ನಟನೆಗೆ ಶೇಕಡ ೧೦೦ ಅಂಕಗಳನ್ನು ಕೊಡಲೇ ಬೇಕು. ಯುವ ಪ್ರೇಮಿಯಾಗಿ, ಗೃಹಸ್ಥ, ಹೆಣ್ಣು ಮಕ್ಕಳ ತಂದೆಯಾಗಿಅವರು ತೋರಿಸಿರುವ ಅಭಿನಯ ಸೂಪರ್.ದತ್ತಣ್ಣತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಡಾ.ಜಾನ್ವಿ, ಶ್ರೇಯಾಶೆಟ್ಟಿ, ಆಂಚಲ್ ಮಕ್ಕಳಂತೆ ಕಾಣಿಸುತ್ತಾರೆ.ಪುತ್ರನಾಗಿ ಭಾಸ್ಕರ್‌ತಮ್ಮಧ್ವನಿ, ನಟನೆಎರಡರಿಂದಲೂ ಗಮನ ಸೆಳೆಯುತ್ತಾರೆ.ಅಚ್ಯುತ್ ಸ್ನೇಹಿತರಾಗಿ ವಿಶ್ವನಾಥ್‌ನಾಯ್ಕ, ಡಾ.ಪವಿತ್ರ, ಸುಜಯ್‌ಶಾಸ್ತ್ರೀ ಸಿಕ್ಕಿದ ಅವಕಾಶವನ್ನುಚೆನ್ನಾಗಿ ಬಳಸಿಕೊಂಡಿದ್ದಾರೆ. ಆನಂದ್‌ರಾಜ್‌ವಿಕ್ರಂ ಸಂಗೀತದಲ್ಲಿ ಹಾಡುಗಳು ಪರವಾಗಿಲ್ಲ. ದೇವವಡ್ಡೆಛಾಯಾಗ್ರಹಣಚಿತ್ರಕ್ಕೆ ಕೆಲಸ ಮಾಡಿದೆ.ವಿಶ್ವನಾಥನಾಯ್ಕ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.
***