Manasagide.Film Reviews

Friday, February 25, 2022

549

ಮನಸಾಗಿದೆಇದೊಂದು ಪ್ರೀತಿಕಥೆ

‘ಮನಸಾಗಿದೆ’ ಚಿತ್ರದ ಹೆಸರು ಕೇಳಿದೊಡನೆ ಇದೊಂದು ಪ್ರೀತಿಕಥೆಇರಲಿದೆಎಂದು ಸುಲಭವಾಗಿ ಹೇಳಿಬಿಡಬಹುದು.ಕಥೆಯಲ್ಲಿ ನಾಯಕ(ಅಭಯ್) ಅಂಕಿತ (ಮೇಘಶ್ರೀ)ಳನ್ನು ಮನಸಾರೆ ಪ್ರೀತಿಸುತ್ತಾನೆ. ಆದರೆಅರಿಯದ ಮನಸಿನಲ್ಲಿ ಲವ್ ಎನ್ನುವುದು ಕೇವಲ ಆಕರ್ಷಣೆಎಂದುಕೊಂಡಿದ್ದ ಅವಳು ಅವನ ಪ್ರೀತಿಯ ನಿವೇದನೆಯನ್ನು ತಿರಸ್ಕರಿಸುತ್ತಾಳೆ. ಆದರೂತನ್ನನ್ನುಗೆಲ್ಲಲುಒಂದು ಅವಕಾಶ ನೀಡುತ್ತಾಳೆ. ನಂತರ ಸ್ನೇಹಿತನಎಸ್ಟೇಟಿಗೆ ಹೋಗುವ ಅವನಿಗೆ ಸಿಂಚನಾ (ಅಧಿರಾ)ಳ ಭೇಟಿಯಾಗುತ್ತದೆ. ತಾನು ಚಿಕ್ಕವಯಸ್ಸಿನಲ್ಲಿ ಪ್ರೀತಿಸುತ್ತಿದ್ದ ವಿಕ್ಕಿಯೇ ಇವನು ಎಂದುಕೊಂಡುಅಭಯ್‌ನನ್ನುತನ್ನ ಹೃದಯದಲ್ಲಿಟ್ಟುಕೊಂಡು ಆರಾಧಿಸುತ್ತಾಳೆ. ಅಷ್ಟು ಇಷ್ಟಪಡುವ ಆಕೆಗೆ ತಾನು ವಿಕ್ಕಿ ಅಲ್ಲಎಂದು ಹೇಗೆ ಹೇಳುವುದೆಂದು ಪರಿತಪಿಸುತ್ತಾನೆ. 

ಅಭಯ್ ವಿಕ್ಕಿ ಅಲ್ಲವೆಂದು ಅವಳ ಅಪ್ಪನಿಗೆ ತಿಳಿದಿರುತ್ತದೆ.ನೀನು ಸಿಂಚನಾಳನ್ನು ಉಳಿಸಿಕೊಳ್ಳಬೇಕಾದರೆ ವಿದೇಶದಿಂದ ನಾಳೆ ಬರುತ್ತಿರುವ ವಿಕ್ಕಿಯನ್ನು ಮುಗಿಸಬೇಕು.ಇಲ್ಲದಿದ್ರೆ ಅವಳನ್ನು ಮರೆತುಬಿಡುಎಂದುಎರಡುಆಯ್ಕೆಕೊಡುತ್ತಾನೆ. ಅಲ್ಲಿಂದಯಾವರೀತಿ ಸಿನಿಮಾ ಸಾಗುತ್ತದೆಎಂಬುದನ್ನುಚಿತ್ರಮಂದಿರ ಒಳಹೊಕ್ಕರೆ ತಿಳಿಯುತ್ತದೆ.

ಹೂ ಮೊಳದಂತೆ ಚಿತ್ರಕಥೆಯನ್ನು ಸುಂದರವಾಗಿ ಬರೆದಿರುವ ನಿರ್ದೇಶಕ ಶ್ರೀನಿವಾಸಶಿಡ್ಲಘಟ್ಟ ಅವರ ಕೆಲಸವನ್ನು ಮೆಚ್ಚಬಹುದು. ರಚಿಸಿ ನಿರ್ಮಾಣ ಮಾಡಿರುವಎಸ್.ಚಂದ್ರಶೇಖರ್‌ಅಪ್ಪನಾಗಿ ಗಮನ ಸೆಳೆಯುತ್ತಾರೆ.ನಾಯಕಿಯರಾದ ಮೇಘಶ್ರೀ ಮತ್ತು ಸಿಂಚನಾ ತಮಗೆ ನೀಡಿದಅವಕಾಶವನ್ನುಚೆನ್ನಾಗಿ ಬಳಸಿಕೊಂಡಿದ್ದಾರೆ.ಮಾನಸಹೊಳ್ಳ ಸಂಗೀತದಲ್ಲಿ ಹಾಡುಗಳು ಇಂಪಾಗಿರುವಂತೆ, ಸುಂದರ ತಾಣಗಳನ್ನು ಸೆರೆಹಿಡಿದಿರುವ ಶಂಕರ್ ಮತ್ತುಜಬರ್‌ದಸ್ತ್‌ಆಕ್ಷನ್ ಮಾಡಿಸಿರುವ ಡಾ.ಥ್ರಿಲ್ಲರ್‌ಮಂಜುಇವರೆಲ್ಲರ ಕೆಲಸಗಳು ಸಿನಿಮಾಕ್ಕೆ ಪೂರಕವಾಗಿದೆ. ಹಸಿರಿನ ವೈಭವ ನೋಡುವ ಪರಿಸರ ಪ್ರೇಮಿಗಳಿಗೆ ಚಿತ್ರವುಕಣ್ಣಿಗೆರಸದೌತಣ ನೀಡುತ್ತದೆ.

***

 

Copyright@2018 Chitralahari | All Rights Reserved. Photo Journalist K.S. Mokshendra,