ಮನುಷ್ಯ ಮತ್ತು ಶ್ವಾನದ ಸಂಬಂದಗಳು
ನಾಯಿಗೆ ನಿಯತ್ತು ಇದೆ, ಒಬ್ಬರನ್ನು ನಂಬಿದರೆ ಅದು ಬಿಟ್ಟು ಹೋಗಲಾರದು ಎನ್ನುತ್ತಾರೆ. ಅಂತಹ ಮನುಷ್ಯ ಮತ್ತು ನಾಯಿ ಸಂಬಂದ ಹೇಗಿರುತ್ತದೆಂದು ‘೭೭೭ ಚಾರ್ಲಿ’ ಚಿತ್ರದಲ್ಲಿ ಸುಂದರವಾಗಿ ತೋರಿಸಲಾಗಿದೆ. ಕಥೆಯಲ್ಲಿ ಆತನೊಬ್ಬ ಫ್ಯಾಕ್ಟರಿ ಕೆಲಸ ಮಾಡುವ ವ್ಯವಸ್ಥಾಪಕ. ಯಾರೊಂದಿಗೂ ಮಾತನಾಡದೆ ತನ್ನ ಕೆಲಸವಾಯಿತು ಎಂದು ಮೇಲಾಧಿಕಾರಿಗಳಿಂದ ಶಹಬ್ಬಾಸ್ ಗಿಟ್ಟಿಸಿಕೊಂಡಿರುತ್ತಾನೆ. ಇದರಿಂದ ಸಹದ್ಯೋಗಿಗಳಿಗೂ ಇವನ ಕಂಡರೆ ಅಸೂಯು ಬಂದಿರುತ್ತದೆ. ಅದೇ ರೀತಿ ಅಕ್ಕಪಕ್ಕದ ಮನೆಯವರಿಗೂ ಬೇಡವಾಗಿರುತ್ತಾನೆ. ಒಂದ ಘಟ್ಟದಲ್ಲಿ ನಾಯಯೊಂದು ಮನೆ ಸೇರಿಕೊಳ್ಳುತ್ತದೆ. ಅದರಿಂದ ಕಿರಿಕಿರಿ ಅನುಭವಿಸುತ್ತಾ ಸಾಕಷ್ಟು ಬಾರಿ ದೂರ ಬಿಟ್ಟು ಬಂದರೂ ಅದು ಇವನನ್ನು ಬಿಟ್ಟು ಬಿಡದೆ ಮತ್ತೆ ಬರುತ್ತಿರುತ್ತದೆ.
. ಮುಂದೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡಾಗ ನಾಯಿ ಹೊರತುಪಡಿಸಿ ಬೇರೆ ಯಾರೂ ಆಸ್ಪತ್ರೆಗೆ ಬರುವುದಿಲ್ಲ. ಇದನ್ನು ಅರಿತು, ಅದರ ಮೇಲೆ ಹುಟ್ಟುತ್ತದೆ. ಮುಂದೆ ಇಬ್ಬರ ಸಂಬಂದಗಳು ಗಟ್ಟಿಯಾಗುತ್ತಾ ಹೋಗುತ್ತದೆ. ಮಂಜಿನ ಗಡ್ಡಯಲ್ಲಿ ಆಟ ಆಡುವುದನ್ನು ಕಂಡು ಅದರ ಆಸೆ ನೆರವೇರಿಸಲು ಕಾಶ್ಮೀರಕ್ಕೆ ಪ್ರಯಾಣ ಬೆಳಸುತ್ತಾನೆ. ಕೊನೆಗೆ ನಾಯಿಯ ಬಯಕೆ ಈಡೇರಿಸುತ್ತಾನಾ? ಅಲ್ಲಿ ಏನೇನು ಕಷ್ಟುಗಳು ಒದಗಿ ಬರುತ್ತದೆ ಎಂಬುದು ಹೇಳುವುದಕ್ಕಿಂತ ನೋಡುವುದು ಚೆಂದ ಅನಿಸುತ್ತದೆ.
ಧರ್ಮನಾಗಿ ರಕ್ಷಿತ್‌ಶೆಟ್ಟಿ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಸ್ವಾಭಾವಿಕ ನಟನೆಯನ್ನು ಮಾಡುತ್ತಾ ನೋಡುಗರಿಗೆ ಇಷ್ಟವಾಗುತ್ತಾರೆ. ಇವರಿಗೆ ಬೆನ್ನಲುಬಾಗಿ ಲ್ಯಾಬ್ರಡರ್ ಶ್ವಾನದಿಂದ ಚೆನ್ನಾಗಿ ನಟನೆ ಮಾಡಿಸುವುದು ಎಷ್ಟು ಕಷ್ಟ ಎಂಬುದು ಗೊತ್ತಾಗುತ್ತದೆ. ನವ ನಾಯಕಿ ಸಂಗೀತಶೃಂಗೇರಿ ಅವಕಾಶ ಕಡಿಮೆ ಇದ್ದರೂ ಗಮನ ಸೆಳೆಯುತ್ತಾರೆ. ಪಶು ವೈದ್ಯರಾಗಿ ರಾಜ್.ಬಿ.ಶೆಟ್ಟಿ ನಗಿಸುತ್ತಾರೆ. ತಮಿಳು ಬಾಬ್ಜಿಸಿಂಹ ಮತ್ತು ದಾನಿಶ್‌ಸೇಠ್ ಬಂದು ಹೋಗುತ್ತಾರೆ. ಮಿಕ್ಕಂತೆ ಸಣ್ಣ ಪಾತ್ರಗಳು ಅಲ್ಲಲ್ಲಿ ಬಂದು ಹೋಗುತ್ತದೆ. ಪ್ರೇಕ್ಷನಿಗೆ ಎಲ್ಲೂ ಬೋರ್ ಆಗದಂತೆ ಕಥೆ ಬರೆದು ಅದಕ್ಕತಕ್ಕಂತೆ ಚಿತ್ರಕಥೆ ಪೋಣಿಸಿ ನಿರ್ದೇಶನ ಮಾಡಿರುವ ಕಿರಣ್‌ರಾಜ್ ಕನ್ನಡ ಚಿತ್ರರಂಗಕ್ಕೆ ಒಳ್ಳೆ ತಂತ್ರಜ್ಘ ಸಿಕ್ಕಿದ್ದಾರೆ ಎಂದು ಘಂಟಾಘೋಷವಾಗಿ ಹೇಳಬಹುದು. ನೋಬಿನ್‌ಪೌಲ್ ಸಂಗೀತ, ಅರವಿಂದ್.ಎಸ್.ಕಶ್ಯಪ್ ಛಾಯಾಗ್ರಹಣ ಇದಕ್ಕೆ ಪೂರಕವಾಗಿದೆ. ಚಿತ್ರ ನೋಡಿ ಹೊರಬಂದ ಮೇಲೆ ನಾಯಿ ಸಾಕುವ ಆಸಕ್ತಿ ಬರುತ್ತದೆ. ಜಿ.ಎಸ್.ಗುಪ್ತ, ರಕ್ಷಿತ್‌ಶಟ್ಟಿ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.
****