Tootu Madike.Film Reviws

Friday, July 08, 2022

305

ಸ್ಲಮ್ ಹುಡುಗರ ಶ್ರೀಮಂತ ಕನಸುಗಳು

        ಪುರಾತನ ಕಾಲದ ವಿಗ್ರಹವೊಂದು ಮಿಸ್ ಆಗಿದೆ ಎನ್ನುವಲ್ಲಿಗೆ ‘ತೂತು ಮಡಿಕೆ’  ಚಿತ್ರವು  ಶುರುವಾಗುತ್ತದೆ. ಸ್ಲಂನಲ್ಲಿರುವ ಇಬ್ಬರು ಕಿಲಾಡಿಗಳು ಕೆಲಸಕ್ಕೆ ಹೋಗದೆ ಅಡ್ಡ ದಾರಿಯಲ್ಲಿ ಬಂದಂತ ಹಣದಲ್ಲಿ ಮಜಾ ಮಾಡುತ್ತಿರುತ್ತಾರೆ. ಒಬ್ಬೊಬ್ಬರ ತಲೆ ಮೇಲೆ ಕೈಯಿಟ್ಟು ದುಡ್ಡು ಸಂಪಾದಿಸುವುದೇ ಇವರ ಕಾಯಕ. ಹೀಗಿರುವಾಗ ಕಿಡ್ನಾಪ್ ಮಾಡುವ ಹಾಗೂ ವಿಗ್ರಹವನ್ನು ಹುಡುಕುವ ಡೀಲ್ ಸಿಗುತ್ತದೆ. ಅಪಹರಣವನ್ನು ಸುಲಭವಾಗಿ ಮಾಡುತ್ತಾರೆ. ಆದರೆ ವಿಗ್ರಹ ಸಿಗುವುದಿಲ್ಲ. ಒಂದು ಕಡೆ ರೌಡಿಗಳು, ಮತ್ತೋಂದು ಕಡೆ ಶಾಸಕರ ಕಡೆಯವರು. ಇದರ ಮಧ್ಯೆ ಹನಿಟ್ರಾಪ್ ಗ್ಯಾಂಗ್‌ನವರು. ಇವರೆಲ್ಲರೂ ವಿಗ್ರಹಕ್ಕಾಗಿ ಹುಡುಕಾಟ ನಡೆಸುತ್ತಿರುತ್ತಾರೆ. ಅದು ಎಲ್ಲಿರುತ್ತೆ? ಯಾರು ತೆಗೆದುಕೊಂಡಿರುತ್ತಾರೆ? ಕೊನೆಗೆ ಯಾರಿಗೆ ಸಿಗುತ್ತದೆ ಎಂಬ ಊರಣವೇ ಕಥೆಯಾಗಿದೆ. ಚಂದ್ರಕೀರ್ತಿ ನಿರ್ದೇಶಕ ಮತ್ತು ನಾಯಕನಾಗಿ ಎರಡು ಕೆಲಸವನ್ನು ಚೆನ್ನಾಗಿ ನಿಭಾಯಿಸಿದ್ದಾರೆ ಎನ್ನಬಹುದು.

        ಸ್ಲಂ ಭಾಷೆಯಲ್ಲೆ ಮಾತನಾಡಿ ಗಮನ ಸೆಳೆಯುವ ನಾಯಕಿ ಪಾವನಾಗೌಡ, ನಾಯಕನ ಗೆಳೆಯನಾಗಿ ಗಿರೀಶ್‌ಶಿವಣ್ಣ, ಪಿವೋಟ್‌ಪಾಪಣ್ಣನಾಗಿ ಅರುಣ್‌ಮೂರ್ತಿ, ಮನೆ ಕೆಲಸಗಳ ಮಧ್ಯೆ ಸಿಕ್ಕಿಹಾಕಿಕೊಂಡು ನಲುಗುವ ಪ್ರಮೋದ್‌ಶೆಟ್ಟಿ, ಮೂರನೇ ಬಾರಿಯಾದರೂ ಶಾಸಕನಾಗಲು ಹೋರಾಡುವ ಶಂಕರ್‌ಅಶ್ವಥ್, ಹನಿಟ್ರ್ಯಾಪ್ ಕಿಂಗ್‌ಪಿನ್ ಆಗಿ ಉಗ್ರಂಮಂಜು ಮುಂತಾದವರು ತಮಗೆ ನೀಡಿದ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ. ಸ್ವಾಮಿನಾಥನ್ ಸಂಗೀತದಲ್ಲಿ ‘ಯಾಮಾರಿದೆ ಹೃದಯ’ ಆಲಿಸುವಂತಿದೆ. ನವೀನ್‌ಚಲ್ಲಾ ಛಾಯಾಗ್ರಹಣ, ಉಜ್ವಲ್‌ಚಂದ್ರ ಸಂಕಲನ, ರಘುನಿಡುವಳ್ಳ್ಳಿ ನುಣುಪಾದ ಸಂಭಾಷಣೆ ಇವೆರೆಲ್ಲರೂ ಚಿತ್ರದ ಗರಿಗೆ ಆಸರೆಯಾಗಿದ್ದಾರೆ. ಮಧುಸೂದನ್‌ರಾವ್ ಮತ್ತು ಶಿವಕುಮಾರ್.ಕೆ.ಬಿ ನಿರ್ಮಾಣ ಮಾಡಿರುವ ಚಿತ್ರವನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.

***

 

Copyright@2018 Chitralahari | All Rights Reserved. Photo Journalist K.S. Mokshendra,