ತಿರುವುಗಳಗೂಡುಗರುಡ
‘ಗರುಡ’ ಚಿತ್ರವುಕೂಡುಕುಟುಂಬದಕಥೆಯಾಗಿದೆ.ದೊಡ್ಡ ಮನೆಯಲ್ಲಿಅಪ್ಪ, ಅಣ್ಣ, ಅತ್ತಿಗೆ ಹಾಗೂ ಅತ್ತಿಗೆಯತಂಗಿ ಹೀಗೆ ಅಪಾರ ಬಂದುಮಿತ್ರರು. ಒಂಥರ ಸುಂದರಕುಟುಂಬದಲ್ಲಿ ದುರಳನೊಬ್ಬ ಎಂಟ್ರಿಯಾದರೆಏನಾಗುತ್ತದೆ.ಆನಂತರಒಂದರ ನಂತರ ತಿರುವುಗಳು ಎದುರಾಗುತ್ತಲೇಇರುತ್ತವೆ. ಶುರುವಿನಿಂದಕೊನೆವರೆಗೂ ನಾಯಕನಾಗಿ ಕಾಣಿಸಿಕೊಂಡಿರುವ ಸಿದ್ದಾರ್ಥ್‌ಮಹೇಶ್ ಅವರ ನಟನೆ ಮತ್ತು ಮಾಸ್‌ಆಕ್ಷನ್ ದೃಶ್ಯಗಳಲ್ಲಿ ಸಾಕಷ್ಟು ಶ್ರಮಪಟ್ಟಿರುವುದುಕಂಡು ಬರುತ್ತದೆ.ಗರುಡ ಮೇಲೆ ಹಾರಾಡುತ್ತಿದ್ದರೂಅದರ ನೆರಳು ಭೂಮಿ ಮೇಲೆ ಬೀಳುತ್ತದೆ.ಇದಕ್ಕೆ ನೂರಾರು ವರ್ಷಗಳ ಆಯಸ್ಸುಇರುತ್ತದಂತೆ. ಹಾಗಾಗಿ ಕಥೆಗೆ ಪೂರಕವಾಗಿಇದೇ ಶೀರ್ಷಿಕೆಯನ್ನು ಇಡಲಾಗಿದೆ. ಮೇಕಿಂಗ್‌ದಲ್ಲಿ ಆಕ್ಷನ್‌ಗಳಿಗೆ ಹೆಚ್ಚು ಒತ್ತು ನೀಡಲಾಗಿದೆ.
ಡಜನ್‌ಕಲಾವಿದರಿದ್ದರೂಎಲ್ಲರಿಗೂ ಸರಿಸಮನಾದ ಪಾತ್ರಗಳನ್ನು ನೀಡಿರುವುದುಗಮನಾರ್ಹವಾಗಿದೆ. ಇವರಿಂದಚೆನ್ನಾಗಿ ದುಡಿಸಿಕೊಂಡಿರುವ ನೃತ್ಯ ಸಂಯೋಜಕ ಈಗ ನಿರ್ದೇಶಕರಾಗಿರುವಧನುಕುಮಾರ್ ಕೆಲಸ ಶ್ಲಾಘನೀಯವಾಗಿದೆ.
ಫ್ಯಾಮಿಲಿ ಸೆಂಟಿಮೆಂಟ್‌ಜತೆಗೆ ಲವ್, ಕಾಮಿಡಿ, ಸಾಹಸಗಳು ಭರಪೂರಇದೆ.ಕೆಲವೊಂದು ದೃಶ್ಯಗಳು ಸಂಭಾಷಣೆಗಳಲ್ಲಿ ಹೊಸತನದ ಫ್ಲೇವರ್‌ಗಳು ಚಿತ್ರಕ್ಕೆ ಪ್ಲಸ್ ಪಾಯಿಂಟ್‌ಆಗಿದೆ.ನಾಯಕಿಯರಾದ ಅಶಿಕಾರಂಗನಾಥ್, ಐಂದ್ರಿತಾರೈ ಉಳಿದಂತೆ ಕಾಮ್ನಾಜೇಠ್ಮಲಾನಿ, ರಂಗಾಯಣರಘು, ರಮೇಶ್‌ಭಟ್, ರವಿಶಂಕರ್‌ಗೌಡ, ರಾಜೇಶ್‌ನಟರಂಗ, ಆದಿಲೋಕೇಶ್‌ಇವರೆಲ್ಲರೂತಮಗೆ ನೀಡಿದಅವಕಾಶವನ್ನುಚೆನ್ನಾಗಿ ನಿಭಾಯಿಸಿಕೊಂಡಿದ್ದಾರೆ ಎನ್ನಬಹುದು.ರಘುದೀಕ್ಷಿತ್ ಸಂಗೀತಒದಗಿಸುವಜತೆಗೆ ಬಣ್ಣ ಹಚ್ಚಿರುವುದು ವಿಶೇಷ. ಚಿತ್ರವನ್ನುಒಮ್ಮೆ ನೋಡಬಲ್.
***