ಪ್ರೇಮಕಥೆಯಲ್ಲಿಥ್ರಿಲ್ಲರ್ ಅಂಶಗಳು
ಮೊದಲರ್ಧ ಪ್ರೀತಿ, ಪ್ರೇಮ, ವಿವಾಹ ನಂತರಥ್ರಿಲ್ಲರ್ ಅಂಶಗಳನ್ನು ‘ಸೀತಾಯಣ’ಚಿತ್ರದಲ್ಲಿ ಹೇಳಲಾಗಿದೆ. ಕಥೆಯಲ್ಲಿರಾಹುಲ್ (ಅಕ್ಷಿತ್‌ಶಶಿಕುಮಾರ್) ಜೀವನದಲ್ಲಿ ಮುಂದು ಬರಬೇಕೆಂದುಉದ್ಯಮ ಶುರು ಮಾಡಲು ಸಾಲಕ್ಕಾಗಿ ಬ್ಯಾಂಕಿಗೆಅರ್ಜಿ ಸಲ್ಲಿಸಿರುತ್ತಾನೆ. ಸೀತಾ (ಅನಹಿತಾಭೂಷಣ್) ಆಡ್ ಶೂಟ್ ಮಾಡುವ ನಿರ್ದೇಶಕಿ.ಒಂದುಘಟನೆಯಿಂದಇಬ್ಬರು ಭೇಟಿಯಾಗಿ ಲವ್‌ಗೆತಿರುಗುತ್ತದೆ.ಆಕೆಯಅಪ್ಪ ಬ್ಯಾಂಕ್ ಮ್ಯಾನೇಜರ್.ಹೇಗಿದ್ದರೂಈತನ ವಿವರ ತಿಳಿದಿರುವ ಕಾರಣ ಶುರುವಿನಲ್ಲಿ ವಿರೋದ ವ್ಯಕ್ತ ಪಡಿಸಿದರೂ, ಗುಣಕ್ಕೆ ಮಾರುಹೋಗಿ ಮಗಳನ್ನು ಕೊಡಲು ನಿರ್ಣಯಿಸುತ್ತಾನೆ. ಎರಡೂ ಮನೆ ಕಡೆಯಿಂದ ಸಮ್ಮತಿ ಸಿಕ್ಕು, ಎಂದಿನಂತೆ ಮದುವೆ ನಡೆಯುತ್ತದೆ.
ಹನಿಮೂನ್‌ಗೆಂದು ಬ್ಯಾಂಕಾಕ್‌ಗೆ ತೆರೆಳುತ್ತಾರೆ. ವಾಪಸ್ಸು ಬಂದು, ಬೈಕ್‌ನಲ್ಲಿ ಇವನು ಬರುವಾಗ ಸಣ್ಣದೊಂದುಅಪಘಾತವಾಗಿ ಸಂಬಂದಪಟ್ಟ ನರಕ್ಕೆ ಪೆಟ್ಟು ಬಿದ್ದಿರುವುದರಿಂದಗಂಡಸುತನ ಕಳೆದುಕೊಂಡಿರುವುದಾಗಿ ವೈದ್ಯರು ತಿಳಿಸುತ್ತಾರೆ.ಇದೇ ಸಂದರ್ಭದಲ್ಲಿ ಪತ್ನಿಗರ್ಭಿಣಿಎಂದು ಸುದ್ದಿ ಬರುತ್ತದೆ.ಇದರಿಂದ ವಿಚಲಿತನಾಗುತ್ತಾನೆ. ಅಷ್ಟಕ್ಕೂ ಬ್ಯಾಂಕಾಕ್‌ದಲ್ಲಿ ನಡೆದುದಾದರೂ ಏನು?ಎಂದುಕಂಡು ಹಿಡಿಯಲುಅಲ್ಲಿಗೆ ಹೋದಾಗ ಕೆಲವೊಂದು ಅಂಶಗಳು ಗಮನಕ್ಕೆ ಬರುತ್ತದೆ.ಅದನ್ನು ಹೇಗೆ ನಿಭಾಯಿಸುತ್ತಾನೆ. ಅಲ್ಲಿ ನಡೆದಅಪರಾದವನ್ನುಯಾವರೀತಿಕಂಡುಹಿಡಿಯುತ್ತಾನೆ?ಎಂಬುದಕ್ಕೆಉತ್ತರ ಸಿನಿಮಾ ನೋಡಿದರೆ ತಿಳಿಯುತ್ತದೆ.
ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್‌ಶಶಿಕುಮಾರ್ ಮೊದಲ ಬಾರಿ ಬಣ್ಣ ಹಚ್ಚಿದ್ದರಿಂದ ನಟನೆಗಿಂತಆಕ್ಷನ್‌ದಲ್ಲಿ ಮಿಂಚಿದ್ದಾರೆ.ನಕ್ಕರೆ ದಾಳಿಂಬೆ ಬೀಜದಂತೆಕಾಣುವ ನಾಯಕಿಅನಹಿತಾಭೂಷಣ್ ಹಲ್ಲುಗಳು ನೋಡಲು ಸುಂದರವಾಗಿಕಾಣಿಸುತ್ತದೆ. ಅಭಿನಯದಜೊತೆಗೆ ಸಣ್ಣದೊಂದು ಲಿಪ್‌ಲಾಕ್ ಮಾಡಿದ್ದಾರೆಎನ್ನಬಹುದು.ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಿತೇಶ್, ಮೇಘನಾಗೌಡ ಹೊರತುಪಡಿಸಿದರೆ ಟಾಲಿವುಡ್ ಕಲಾವಿದರುಗಳಾದ ಅಜಯ್‌ಘೋಷ್, ಮಧುಸೂದನ್ ಮುಂತಾದವರಿಗೆ ಅವಕಾಶ ಮಾಡಿಕೊಡಲಾಗಿದೆ.ಪ್ರಭಾಕರ್‌ಆರಿಪ್ಕಾ ನಿರ್ದೇಶನದಲ್ಲಿಚಿತ್ರವುಚೆನ್ನಾಗಿ ಮೂಡಿಬಂದಿದೆ.ಪದ್ಮನಾಭಭಾರದ್ವಾಜ್ ಸಂಗೀತದಲ್ಲಿ ಪುನೀತ್‌ರಾಜ್‌ಕುಮಾರ್ ಹಾಡಿರುವ ‘ದಣಿದುದಣಿದು’ ಗೀತೆ ಕೇಳಲು ಇಂಪಾಗಿದೆ.ದುರ್ಗಪ್ರಸಾದ್‌ಕೊಲ್ಲಿಛಾಯಾಗ್ರಹಣದಲ್ಲಿ ಸುಂದರ ತಾಣಗಳು ಕಣ್ಣಿಗೆತಂಪುಕೊಡುತ್ತದೆ. ರಿಯಲ್‌ಸತೀಶ್ ಸಾಹಸ, ಪ್ರವೀಣ್‌ಪುಡಿ ಸಂಕಲನ ಚಿತ್ರಕ್ಕೆ ಪೂರಕವಾಗಿದೆ.ಉದ್ಯಮಿ ಲಲಿತಾರಾಜಲಕ್ಷೀ ನಿರ್ಮಾಣ ಮಾಡಿದ್ದಾರೆ.
***