MRP.Film Reviews

Friday, October 14, 2022

311

ಸ್ಥೊಲಕಾಯದ ವ್ಯಕ್ತಿ ಎಂಆರ್ಪಿ      ಪ್ರತಿಯೊಬ್ಬನ ಮನುಷ್ಯನಲ್ಲಿ ಏನಾದರೊಂದು ನ್ಯೂನತೆ ಇರುತ್ತದೆ. ಅದೇ ಅವರ ಬಾಳಿಗೆ ಕೆಲವೊಮ್ಮೆ ಮುಳುವಾಗುತ್ತದೆ. ದಪ್ಪಗಿದ್ದರೇನು, ಸಣ್ಣಗಿದ್ದರೇನು, ಚೆನ್ನಾಗಿ ನೋಡಿಕೊಳ್ಳುವ ಪತಿ ಸಿಕ್ಕರೆ ಬದುಕು ಸುಂದರವಾಗಿರುತ್ತದೆ. ಇದೇ ವಿಷಯವನ್ನು ‘ಎಂಆರ್‌ಪಿ’ ಚಿತ್ರದಲ್ಲಿ ಹೇಳಲಾಗಿದೆ. ಮೋಸ್ಟ್ ರೆಸ್ಪಾನ್ಸಿಬಲ್ ಪರ್ಸನ್ ಎಂದು ಶೀರ್ಷಿಕೆಗೆ ಅರ್ಥ ಕೊಡುತ್ತದೆ. ಕಥೆಯಲ್ಲಿ ಶೀಲವಂತ್ ಸ್ಥೂಲಕಾಯದವನಾಗಿರುತ್ತಾನೆ. ವಯಸ್ಸು ಜಾಸ್ತಿಯಾಗುತ್ತಿದ್ದರೂ, ಆತನ ದೇಹಕಾರದ ಕಾರಣಕ್ಕೆ ಹುಡುಗಿ ಸಿಗುತ್ತಿರುವುದಿಲ್ಲ. ಆ ಸಮಯದಲ್ಲಿ ತಂದೆ ಸ್ನೇಹಿತನ ಪುತ್ರಿ ಇಂದ್ರ ಮದುವೆಯಾಗಲು ಒಪ್ಪಿಕೊಳ್ಳುತ್ತಾಳೆ. ಇದರಿಂದ ಆತನ ಗೆಳಯರಿಗೆ ಆಶ್ಚರ್ಯ. ಆದರೆ ಆಕೆ ಮಾತ್ರ ದಪ್ಪ ಇರುವವರಲ್ಲಿಯೂ ಒಂದೊಳ್ಳೆ ಮನಸ್ಸಿರುತ್ತದೆ. ರೂಪಕ್ಕಿಂತಲೂ ಮನಸ್ಸು ಇಷ್ಟ ಅಂತ ಆತನನ್ನು ಮದುವೆಯಾಗಲು ನಿರ್ಣಯ ತೆಗೆದುಕೊಂಡಿರುತ್ತಾಳೆ. ಮದುವೆ ನಂತರ ನಡೆಯವುದೇ ಅಸಲಿ ಕಹಾನಿ. ಅದು ನೋಡುಗರಿಗೆ ಕುತೂಹಲ ಮೂಡಿಸುತ್ತದೆ. 

ಏನೆಂದು ತಿಳಿಯಲು ಚಿತ್ರಮಂದಿರಕ್ಕೆ ಬರಬೇಕು.

       ಹರಿ ನಾಯಕನಾಗಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚೈತ್ರಾರೆಡ್ಡಿ ನಾಯಕಿ ಅಷ್ಟೇ ಎಂದು ಹೇಳಬಹುದು. ಸಿನಿಮಾ ಪೂರ್ತಿ ವಿಜಯ್‌ಚೆಂಡೂರ್ ತಮ್ಮ ಕಾಮಿಡಿ ಕಮಾಲ್ ಮೂಲಕ ಗಮನ ಸೆಳೆದಿದ್ದಾರೆ. ಉಳಿದಂತೆ ಸುಧಾಬೆಳವಾಡಿ, ಪ್ರಕಾಶ್‌ತುಮ್ಮಿನಾಡು, ಮೋಹನ್‌ಜುನೇಜಾ, ಬಲರಾಜವಾಡಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಜಗ್ಗೇಶ್ ನಿರೂಪಣೆ ಸಿನಿಮಾಕ್ಕೆ ಅಂದ ತಂದುಕೊಟ್ಟಿದೆ. ರಚಸಿ ನಿರ್ದೇಶನ ಮಾಡಿರುವ ಬಾಹುಬಲಿ ಶ್ರಮ ಪರದೆ ಮೇಲೆ ಕಾಣಿಸುತ್ತದೆ. ಗುಂಡ್ಲುಪೇಟೆಸುರೇಶ್ ಮತ್ತು ಕೃಷ್ಣಕುಮಾರ್ ಛಾಯಾಗ್ರಹಣ ಇದಕ್ಕೆ ಪೂರಕವಾಗಿದೆ. ಹರ್ಷವರ್ಧನ್ ರಾಜ್ ಸಂಗೀತ ಅಲ್ಲಲ್ಲಿ ಕೆಲಸ ಮಾಡಿದೆ. ಒಟ್ಟಾರೆ ಸಿನಿಮಾವು ಕುಟುಂಬಸಮೇತ ಮುಜಗರ ಇಲ್ಲದೆ ನೋಡಬಹುದು. ಎಂವೈಎನ್ ಪಿಕ್ಚರ್ ಪ್ರೊಡಕ್ಷನ್ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ.

****

 

Copyright@2018 Chitralahari | All Rights Reserved. Photo Journalist K.S. Mokshendra,