Banaras.Film Reviews

Friday, November 04, 2022

239

ಬನಾರಸ್‌ದಲ್ಲಿ ಪ್ರೀತಿಯ ಹುಡುಕಾಟ

        ಹಿಂದೂಗಳ ಧರ್ಮಭೂಮಿ ‘ಬನಾರಸ್’ಗೆ ದೇಶ ವಿದೇಶಗಳಿಂದ ಅಸ್ಥಿ ವಿಸರ್ಜಿಸಲು ಬರುತ್ತಾರೆ. ಘಾಟ್‌ಗಳ ದಡಗಳಲ್ಲಿ ಮೃತದೇಹಗಳನ್ನು ಸುಡುತ್ತಾರೆ. ಗಂಗೆಯಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಈಗ ಇದೇ ಹೆಸರಿನಲ್ಲಿ ತೆರೆಕಂಡಿರುವ ಚಿತ್ರದಲ್ಲಿ ಸಾವು ಮತ್ತು ಬದುಕು, ವೈರಾಗ್ಯ, ಪ್ರೇಮ, ಅಧ್ಯಾತ್ಮ, ಲೌಕಿಕತೆ ಎಲ್ಲವೂ ಒಂದಕ್ಕೊಂದು ಬೆರೆತುಕೊಂಡು ಮಾಯಕದ ಜಗತ್ತಿನಂತೆ ಭಾಸವಾಗುವ ಅಲ್ಲಿನ ಅಂಗಳದಲ್ಲಿ ನಡೆಯುವ ಕತೆಯು ಬೆಂಗಳೂರಿನಿಂದ ಆರಂಭವಾಗಿ ಬನಾರಸ್ ತಲುಪುತ್ತದೆ. ಚಿತ್ರದಲ್ಲಿ ಸಿದ್ದಾರ್ಥ್ ತಾನು ಮಾಡಿದ ತಪ್ಪಿನ ಪಾಪ ಪ್ರಾಯಶ್ಚಿತಕ್ಕೆ ಇಲ್ಲಿಗೆ ಬರುತ್ತಾನೆ. ತನ್ನಿಂದ ಸಮಸ್ಯೆಗೊಳಗಾದ ಧನಿಶಾಸ್ತ್ರೀಯ ಹುಡುಕಾಟದಲ್ಲಿ ತೊಡಗಿದಾಗ, ಆತನ ಮೇಲೊಂದು ಪ್ರಯೋಗ ನಡೆಯುತ್ತದೆ. ಗಂಗೆಯ ತಟದಲ್ಲಿ ಮೊದಲು ಧನಿಯನ್ನು ಹುಡುಕುತ್ತಿರುವಾಗ, ಮುಂದೆ ಆತನನ್ನೆ ಹುಡುಕಿಕೊಳ್ಳಬೇಕಾಗುತ್ತದೆ. ಸಿದ್ದುಗೆ ಆಕೆ ಸಿಗುತ್ತಾಳಾ? ಸಿಕ್ಕರೂ ಅವಳು ಕ್ಷಮಿಸುತ್ತಾಳಾ? ಅವನ ಮೇಲೆ ನಡೆಯುವ ಪ್ರಯೋಗವೇನು. 

ಇವೆಲ್ಲವನ್ನು ಕುತೂಹಲದ ರೀತಿಯಲ್ಲಿ ತೋರಿಸಿರುವುದರಿಂದ ನೋಡುಗರಿಗೆ ಆಸಕ್ತಿ ತರಿಸುತ್ತದೆ.

       ಸಿದ್ದಾರ್ಥ್ ಆಗಿ ನಾಯಕ ಝೈದ್‌ಖಾನ್‌ಗೆ ಮೊದಲ ಚಿತ್ರವಾದರೂ ಸೈಕಲ್ ಒಡೆಯದೆ ಚೆನ್ನಾಗಿ ನಟಿಸಿದ್ದಾರೆ. ಧನಿಯಾಗಿ ನಾಯಕಿ ಸೋನಲ್‌ಮೊಂತೆರೋ ತೆರೆ ಮೇಲೆ ಗಮನ ಸೆಳೆಯುತ್ತಾರೆ. ಸುಜಯ್‌ಶಾಸ್ತ್ರಿ ಪ್ರತಿ ಎಂಟ್ರಿ ನಗೆ ತರಿಸಿದರೂ, ಕೊನೆಗೊಮ್ಮೆ ಕಣ್ಣೀರು ಹಾಕಿಸುತ್ತದೆ. ಅಚ್ಯುತಕುಮಾರ್, ದೇವರಾಜ್ ತಮಗೆ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅಜನೀಶ್‌ಲೋಕನಾಥ್ ಸಂಗೀತದಲ್ಲಿ ಎರಡು ಹಾಡುಗಳು ಕೇಳಬಲ್. ಅದ್ವೈತ್‌ಗುರುಮೂರ್ತಿ ಛಾಯಾಗ್ರಹಣ ಇದಕ್ಕೆ ಪೂರಕವಾಗಿದೆ. ವಿಭಿನ್ನ ರೀತಿಯ ಕಥೆಗಳನ್ನು ಇಷ್ಟಪಡುವ ಸಿನಿರಸಿಕರಿಗೆ ಚಿತ್ರವು ಆಪ್ತವಾಗುತ್ತದೆ.

***

 

 

 

 

Copyright@2018 Chitralahari | All Rights Reserved. Photo Journalist K.S. Mokshendra,