ಹುಬ್ಬಳ್ಳಿ ಡಾಬಾ ಕ್ರೌಯ, ಕಲಾವಿದರೇ ಬಂಡವಾಳ *****
ಕೊಲೆ, ರಕ್ತಪಾತ, ಕುತೂಹಲ, ಥ್ರಿಲ್ಲರ್ ಇವೆಲ್ಲವನ್ನು ನೋಡಬೇಕಂದರೆ ‘ಹುಬ್ಬಳ್ಳಿ ಡಾಬಾ’ ಚಿತ್ರಕ್ಕೆ ಹೋದರೆ ಖಂಡಿತವಾಗಿಯೂ ಸಿಗುತ್ತದೆ. ‘ದಂಡುಪಾಳ್ಯ’ ಭಾಗ-೧ ಮತ್ತು ೨ನ್ನು ಪ್ರೇಕ್ಷಕರಿಗೆ ಉಣಬಡಿಸಿದ್ದ ನಿರ್ದೇಶಕ ಶ್ರೀನಿವಾಸರಾಜು ಈಗ ಮತ್ತೋಂದು ಇದೇ ರೀತಿಯ ಕಥೆಯನ್ನು ತೆರೆ ಮೇಲೆ ತಂದಿದ್ದಾರೆ. ಇಲ್ಲಿಯೂ ಸರಣಿ ಕೊಲೆಗಳು, ನಿಗೂಢ ಹತ್ಯೆಗೆ ಕಾರಣವೇ ಇಲ್ಲದಂತಾಗುತ್ತದೆ. ಯಾವುದೋ ಬಯಲಲ್ಲಿ ನಡೆಯುವ ಎನ್‌ಕೌಂಟರ್ ಇದೆ. ಕರುಳು ಕೊರೆಯುವ ದ್ವೇಷವಿದೆ. ಮರ್ಡರ್ ಸ್ಕೆಚ್ ಸೇರಿದಂತೆ ಹಲವು ಸ್ವಾರಸ್ಯಗಳು ಚಿತ್ರದ ಸುತ್ತ ಸುತ್ತುವ ಕಥೆ-ವ್ಯಥೆ, ಕೊಲೆಯ ಜಾಡು ಕೊನೆಗೂ ಪತ್ತೆ ಹಚ್ಚಲು ಖಾಕಿ ಡ್ರೆಸ್ ಎಂಟರ್ ಆಗುತ್ತದೆ. ಅಲ್ಲಿಂದ ಚಿತ್ರಕ್ಕೆ ಮೇಜರ್ ತಿರುವು ಬರುತ್ತದೆ. ಮೂರು ಕತೆಗಳು ಇರುವುದು ವಿಶೇಷ. ಒಂದು ಡ್ರಗ್ ಮಾಫಿಯ ಹಿಡಿಯುವ ಪ್ರಯತ್ನ, ಎರಡನೆಯದು ಪತಿ,ಪತ್ನಿ ಔರ್ ವೋ. ಕೊನೆಯದು ದಂಡುಪಾಳ್ಯ ವರ್ಸಸ್ ಪೋಲೀಸ್ ಅಧಿಕಾರಿ. ಈ ಮೂರು ಸೇರಿದರೆ ಚಿತ್ರ ಆಗುತ್ತದೆ.
ಖಾಕಿಯಾಗಿ ರವಿಶಂಕರ್ ಅಬ್ಬರಿಸುತ್ತಾರೆ. ದುರಳ ತಂಡದಲ್ಲಿ ಮಕರಂದ್‌ದೇಶಪಾಂಡೆ, ಅಯ್ಯಪ್ಪ, ಪೂಜಾಗಾಂಧಿ, ರವಿಕಾಳೆ, ಪ್ರೆಟ್ರೋಲ್‌ಪ್ರಸನ್ನ, ಡ್ಯಾನಿಕುಟ್ಟಪ್ಪ ಇದ್ದಾರೆ. ಮೂರು ಹಾಡುಗಳಿಗೆ ಚರಣ್‌ಅರ್ಜುನ್ ಸಂಗೀತ ಸಂಯೋಜಿಸಿದ್ದಾರೆ. ಭದ್ರಾ ಪ್ರೊಡಕ್ಷನ್ಸ್ ಅಡಿಯಲ್ಲಿ ಪ್ರೇಮ್‌ಕುಮಾರ್ ಪಾಂಡೆ ಮತ್ತು ಸುಬ್ಬಾರೆಡ್ಡಿ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರವನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.