Love 360.Film Reviews

Friday, August 19, 2022

373

ಪ್ರೀತಿಯ ಕಷ್ಟದ ಹಾದಿಗಳು  Love 360 ****

        ಶಶಾಂಕ್ ನಿರ್ದೇಶನದ ‘ಲವ್ ೩೬೦’ ಚಿತ್ರದಲ್ಲಿ ಪ್ರೀತಿಯ ಪಯಣ ಎಂದೂ ಸುಗಮವಾಗಿ ಸಾಗುವುದಿಲ್ಲವೆಂದು ಹೇಳಲಾಗಿದೆ. ಚಿಕ್ಕಂದಿನಿಂದಲೂ ಜಾನಕಿಯನ್ನು ಹೆಚ್ಚು ಪ್ರೀತಿಸುವ ರಾಮ್ ಅವಳಿಗೆ ಮರೆವಿನ ಖಾಯಿಲೆ ಇದೆ ಅಂತ ಗೊತ್ತಿದ್ದರೂ ಆಕೆಯನ್ನು ಕಣ್ಣರಪ್ಪೆಯಂತೆ ಕಾಪಾಡುತ್ತಿರುತ್ತಾನೆ. ಹೀಗಿರುವಾಗ ಒಂದು ಕೊಲೆಯಾಗುತ್ತದೆ. ಅದರ ಆರೋಪ ಜಾನಕಿ ಮೇಲೆ ಬರುತ್ತದೆ. ಅವಳು ಹುಚ್ಚಿ ಅಲ್ಲ ಎಂದು ಹೋರಾಡುತ್ತಲೇ ಇರುವ ಅವನಿಗೆ, ಅವಳ ಮೇಲೆ ಆರೋಪ ಬಂದಾಗ ಸುಮ್ಮನಿರುತ್ತಾನಾ? ಜೀವದಂತಿರುವ ಹುಡುಗಿಯನ್ನು ಕಂಬಿಯಿಂದ ಹೊರತರಲು ಅವನು ಏನು ಮಾಡುತ್ತಾನೆ. ಕೊನೆಯಲ್ಲಿ ಇಬ್ಬರು ಏನಾಗುತ್ತಾರೆ ಎನ್ನುವುದೇ ಒನ್ ಲೈನ್ ಸ್ಟೋರಿಯಾಗಿದೆ. ಶೀರ್ಷಿಕೆ ಹೇಳುವಂತೆ ಇದೊಂದು ಅಪ್ಪಟ ಲವ್ ಸ್ಟೋರಿ. ನವಿರಾದ ಕಥೆಗೆ ಸೆಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಅಂಶಗಳನ್ನು ಇಟ್ಟುಕೊಂಡು ಹೂ ಪೋಣಿಸಿದಂತೆ ಏಳೆ ಏಳೆಯಾಗಿ ದೃಶ್ಯಗಳನ್ನು ಜೋಡಿಸಿರುವುದು ನೋಡುಗರಿಗೆ ಕುತೂಹಲ ಹುಟ್ಟಿಸುತ್ತದೆ.  ಮೊದಲರ್ಧ ಲವ್ ಟ್ರ್ಯಾಕ್‌ದಲ್ಲಿ ಸಾಗುತ್ತಾ, ವಿರಾಮದ ನಂತರ ಬ್ಲಡ್ ಶೇಡ್ ಪಡೆದುಕೊಳ್ಳುತ್ತದೆ.

       ಸ್ಪುರದ್ರೂಪಿ ಡಾ.ಪ್ರವೀಣ್ ಮೊದಲ ಚಿತ್ರದಲ್ಲಿಯೇ ಲವರ್‌ಬಾರ್, ಆಕ್ಷನ್ ಹೀರೋ ಆಗಿ ಮಿಂಚಿದ್ದಾರೆ. ಮರೆಗುಳಿ ಹುಡುಗಿಯಾಗಿ ನಾಯಕಿ ರಚನಾಇಂದರ್ ನೆನಪಿನಲ್ಲಿ ಉಳಿಯುತ್ತಾರೆ. ಡ್ಯಾನಿಕುಟ್ಟಪ್ಪ, ಗೋಪಲಕೃಷ್ಣದೇಶಪಾಂಡೆ, ಸುಕನ್ಯಾ, ಬಾಬು ಹಿರಣಯ್ಯ, ಯಮುನಾಶ್ರೀನಿಧಿ, ಗಿರೀಶ್‌ಜತ್ತಿ ಪಾತ್ರಗಳು ನ್ಯಾಯ ಒದಗಿಸಿದೆ. ಅರ್ಜುನ್‌ಜನ್ಯಾ ಸಂಗೀತದ ಹಾಡುಗಳು ಆಲಾಪಿಸುವಂತಿದೆ. ಅಭಿಲಾಷ್‌ಕಳತ್ತಿ ಕ್ಯಾಮಾರ ಕೆಲಸ ಕಡಲತೀರದ ಸೌಂದರ್ಯವನ್ನು ಚೆನ್ನಾಗಿ ತೋರಿಸಿದೆ. ಮಾಮೂಲಿ ಚಿತ್ರಗಳಿಗಿಂತ ಇದೊಂದು ವಿಭಿನ್ನ ಸಿನಿಮಾವೆನ್ನಲು ಅಡ್ಡಿಯಿಲ್ಲ.

****

 

Copyright@2018 Chitralahari | All Rights Reserved. Photo Journalist K.S. Mokshendra,