ಯೂಥ್ ಲವ್ ಸ್ಟೋರಿ ರೇಮೊ
ರೇವಂತ್‌ದೇಶಪಾಂಡೆ ಮತ್ತು ಮೋಹನ. ಇಬ್ಬರ ಹೆಸರುಗಳ ಮೊದಲ ಅಕ್ಷರವನ್ನು ತೆಗೆದುಕೊಂಡು ನಿರ್ದೇಶಕ ಪವನ್‌ಒಡೆಯರ್ ‘ರೇಮೊ’ ಎಂಬ ಸುಂದರ ಪ್ರೀತಿ ಕಥೆಯನ್ನು ಉಣಬಡಿಸಿದ್ದಾರೆ. ಆತ ಒಬ್ಬ ಸಖತ್ ಸ್ಟೈಲಿಶ್, ಡ್ಯಾಶಿಂಗ್, ಟ್ರೆಂಡಿ ಹುಡುಗ ಒಂದು ಕಡೆಯಾದರೆ, ಮತ್ತೋಂದು ಕಡೆ ಮೋಹನ ಎನ್ನುವ ಕೋಗಿಲೆ ಕಂಠದ ಚೆಲುವೆ. ಇಬ್ಬರ ಸುತ್ತ ಸಿನಿಮಾವು ಸಾಗದೆ, ಅದರಾಚೆ ಒಂದು ಫ್ಯಾಮಿಲಿ ಕಥನ, ಸೆಂಟಿಮೆಂಟ್ ಎಲ್ಲವು ಬಂದು ಹೋಗುತ್ತದೆ. ತ್ಯಾಗದ ಜತೆಗೆ ಲವ್‌ಸ್ಟೋರಿ ಪೂರಕವಾಗಿ ಸಾಗುತ್ತದೆ. ವಿರಾಮದ ಮುನ್ನ ಬರುವ ದೃಶ್ಯಗಳು ಯೂತ್‌ಗೆ ಮೀಸಲಿಟ್ಟರೆ, ನಂತರ ಬರುವ ಸನ್ನಿವೇಶಗಳು ಕುಟುಂಬಕ್ಕೆ ಮೀಸಲಿಡಲಾಗಿದೆ. ಎಲ್ಲವು ಗೊಂದಲ ಆಗದಂತೆ ಸೃಷ್ಟಿಸಿರುವುದರಿಂದ ಸಾಹಸ ಪ್ರಿಯರಿಗೆ ಆಕ್ಷನ್, ಯುವಜನಾಂಗಕ್ಕೆ ರೋಮಾನ್ಸ್, ಕುಟುಂಬದವರಿಗಾಗಿ ಕಣ್ಣು ಒದ್ದೆ ಮಾಡುವ ಸೀನ್‌ಗಳು. ಹೀಗೆ ಎಲ್ಲದರ ಮಿಶ್ರಣ ಎನ್ನಬಹುದು.
ನಾಯಕ ಇಶಾನ್ ಮೊದಲನೇ ಚಿತ್ರಕ್ಕಿಂತ ಇದರಲ್ಲಿ ಚೆನ್ನಾಗಿ ಪಳಗಿದ್ದಾರೆ. ಹಿಪ್ಪಿಯಂಥಾ ಲುಕ್ ಇವರಿಗೆ ಸರಿಹೊಂದುವುದರಿಂದ ಭವಿಷ್ಯದ ಭರವಸೆ ಮೂಡಿಸುವ ನಟ ಅನಿಸಿಕೊಳ್ಳುತ್ತಾರೆ. ಎರಡು ಶೇಡ್‌ಗಳಲ್ಲಿ ಕಾಣುವ ನಾಯಕಿ ಆಶಿಕಾರಂಗನಾಥ್ ಚಂದ ಕಾಣಿಸುತ್ತಾರೆ. ಮಧುಬಾಲ, ಶರತ್, ರಾಜೇಶ್‌ನಟರಂಗ ಇವರೆಲ್ಲರೂ ತಮಗೆ ನೀಡಿದಂತಹ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅರ್ಜುನ್‌ಜನ್ಯಾ ಹಾಡುಗಳು, ವೈದಿ ಛಾಯಾಗ್ರಹಣ ಇವೆಲ್ಲವೂ ಇದಕ್ಕೆ ಸರಿ ಹೊಂದುತ್ತದೆ. ಸಂಗೀತ ಪ್ರೇಮಿಗಳಿಗೆ ರೇಮೊ ಹೇಳಿ ಮಾಡಿಸಿದಂತ ಚಿತ್ರವಾಗಿದೆ ಎಂದರೆ ತಪ್ಪಾಗುವುದಿಲ್ಲ. ‘ವಿಲನ್’ದಂತೆ ಇದನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿರುವ ಸಿ.ಆರ್.ಮನೋಹರ್‌ಗೆ ಎಲ್ಲರ ಕಡೆಯಿಂದ ಒಂದು ಸೆಲ್ಯೂಟ್.
****