ನಗುವಿನ ಹಾದಿಯಲ್ಲಿ ಫ್ಯಾಮಿಲಿ ಡ್ರಾಮಾ
ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ಅಂದರೆ ಅಲ್ಲಿ ತಿಳಿ ಹಾಸ್ಯ ಮೇಳೈಸುತ್ತದೆ. ಅದರಂತೆ ‘ತ್ರಿಬಲ್ ರೈಡಿಂಗ್’ ಸಿನಿಮಾವು ನವಿರಾದ ಪ್ರೀತಿ ಕಥೆ, ಕಾಮಿಡಿಕಚಗುಳಿ. ಒಂದಷ್ಟು ಭಾವನೆಗಳು ಇದೆಲ್ಲಾದರ ಮಧ್ಯೆ ಗುನುಗುವಂತಹ ಹಾಡುಗಳು. ನಾಯಕ ಮೂವರು ನಾಯಕಿಯರ ಪ್ರೇಮಪಯಣವೇ ಈ ತ್ರಿಬಲ್ ರೈಡಿಂಗ್. ಒಬ್ಬಳ ಸಹವಾಸದಿಂದ ಮೋಸಹೋಗಿ, ಸಾಕಪ್ಪ ಸಾಕು ಈ ಹುಡುಗಿರೊಂದಿಗೆ ಬೆರೆಯುವುದು ಬೇಡವೆಂದು ನಿರ್ಣಯ ತೆಗೆದುಕೊಂಡಿರುವ ಲಾಯರ್ ಮಗನನ್ನು ಹುಡುಗೀರು ಹುಡುಕಿಕೊಂಡು ಬಂದು ಲವ್ ಮಾಡಿದರೆ ಏನಾಗುತ್ತದೆ. ಅದೇ ನಿಜವಾದ ಪ್ರೀತಿ ಎಂದುಕೊಂಡ ಅವನ ಪಾಲಿಗೆ ಏನೆಲ್ಲ ಅವಾಂತರಗಳು ಆಗುತ್ತದೆ ಎಂಬುದನ್ನು ಚೆನ್ನಾಗಿ ತೋರಿಸಲಾಗಿದೆ. ಅವನನ್ನು ಪ್ರೀತಿ ಮಾಡುವ ನೆಪದಲ್ಲಿ ಹೇಗೆಲ್ಲ ಇಕ್ಕಟ್ಟಿಗೆ ಸಿಲುಕಿಸಿ ತಮಾಷೆ ನೋಡುತ್ತಾರೆ ಎನ್ನುವಂತ ದೃಶ್ಯಗಳು ಹಾಸ್ಯದಲ್ಲಿ ಬಂದು ಹೋಗುತ್ತದೆ. ಮೂರು ಹುಡುಗೀರು ನಾಯಕನ ಬದುಕಿನಲ್ಲಿ ಹೇಗೆ ಬರುತ್ತಾಳೆ. ಆಕೆಯ ಪ್ರೇಮದಲ್ಲಿಯೂ ಅವನು ಬೀಳುತ್ತಾನೆ ಎಂಬುದು ಆಸಕ್ತಿಕರವಾಗಿದೆ.
ಹುಡುಗೀರ ಫೇವರೇಟ್ ಹುಡುಗನಾಗಿ ಗಣೇಶ್ ಇಡೀ ಸಿನಿಮಾವನ್ನು ಆವರಿಸಿಕೊಂಡು, ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ಅಲ್ಲದೆ ಲವ್ ಮಾಡುವುದರ ಜತೆಗೆ ಫೈಟ್ ಮಾಡಿ ಆಕ್ಷನ್ ಹೀರೋ ಅನಿಸಿಕೊಳ್ಳುತ್ತಾರೆ. ರಕ್ಷಿತಾಳಾಗಿ ಮೇಘಾಶೆಟ್ಟಿ, ರಮ್ಯಾಳಾಗಿ ಅದಿತಿಪ್ರಭುದೇವ, ರಾಧಿಕಳಾಗಿ ರಚನಾಇಂದರ್ ತಮ್ಮ ಅಂದವನ್ನು ತೋರಿಸುತ್ತಾ ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ಸಾಧುಕೋಕಿಲ, ಕುರಿಪ್ರತಾಪ್, ರವಿಶಂಕರ್‌ಗೌಡ ಕಾಮಿಡಿ ಪಂಚ್‌ಗಳು ನೋಡುಗರನ್ನು ನಗೆಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ನಿರ್ದೇಶಕ ಮಹೇಶ್‌ಗೌಡ ಎಲ್ಲರಿಗೂ ಸರಿಹೊಂದುವಂತೆ ಸನ್ನಿವೇಶಗಳನ್ನು ಸೃಷ್ಟಿ ಮಾಡಿರುವುದು ಕಂಡುಬರುತ್ತದೆ. ಸಾಯಿಕಾರ್ತಿಕ್ ಸಂಗೀತದಲ್ಲಿ ಎರಡು ಹಾಡುಗಳು ಕೇಳಬಲ್. ಹಾಸ್ಯ ಚಿತ್ರವನ್ನು ಇಷ್ಟಪಡುವವರಿಗೆ ಚಿತ್ರವು ಪೈಸಾ ವಸೂಲ್ ಆಗತ್ತದೆ. ವೈ.ಎಂ.ರಾಮ್‌ಗೋಪಾಲ್ ಮೊದಲ ಬಾರಿ ಒಳ್ಳೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ ಎನ್ನಬಹುದು.
****