ಮೇಡ್ ಇನ್ ಬೆಂಗಳೂರು ಬದುಕು ಮತ್ತು ಬವಣೆ
ಸಿಲಿಕಾನ್ ಸಿಟಿ ಎಂದು ಕರೆಯುವ ಬೆಂಗಳೂರು ನೂರಾರು ಜನರಿಗೆ ಆಶ್ರಯ ನೀಡಿದೆ. ಇಂತಹ ಊರಿನಲ್ಲಿ ಜನರು ಹೇಗೆ ಬದುಕು ಕಟ್ಟಿಕೊಂಡಿರುತ್ತಾರೆ ಎಂದು ಹೇಳುವ ಕಥೆಯೇ ‘ಮೇಡ್ ಇನ್ ಬೆಂಗಳೂರು’ ಚಿತ್ರವಾಗಿದೆ. ಕಥಾನಾಯಕ ಸುಹಾಸ್ ತನ್ನದೆ ಆದ ಸ್ಟಾರ್ಟಪ್ ಕಂಪೆನಿಯನ್ನು ಅಭಿವೃದ್ದಿಗೊಳಿಸಲು ಎಷ್ಟೆಲ್ಲಾ ಕಷ್ಟಪಡುತ್ತಾನೆ. ಮಾನಸಿಕವಾಗಿ ಏನೆಲ್ಲಾ ನೋವು ಅನುಭವಿಸುತ್ತಾನೆ. ಅಂತಿಮವಾಗಿ ತನ್ನ ಪ್ರಯತ್ನವು ಎಷ್ಟರಮಟ್ಟಿಗೆ ಗೆಲುವು ಸಾಧಿಸುತ್ತಾರೆ ಎಂಬುದು ಒನ್ ಲೈನ್ ಸ್ಟೋರಿಯಾಗಿದೆ.
ಸಿನಿಮಾವು ಮಧ್ಯಮ ವರ್ಗದ ಹುಡುಗರು ತಮ್ಮ ಕನಸುಗಳನ್ನು ಬೆನ್ನತ್ತಿ ಹೋಗುವಾಗ ಅವರಿಗೆ ಎದುರಾಗುವ ಕಷ್ಟಗಳನ್ನು ನಿರ್ದೇಶಕ ಪ್ರದೀಪ್‌ಶಾಸ್ತ್ರಿ ಎಲ್ಲವನ್ನು ಸತ್ಯವಾಗಿ ಪರದೆ ಮೇಲೆ ತೆರೆದಿಟ್ಟಿದ್ದಾರೆ. ಮೊದಲರ್ಧ ಕಾಮಿಡಿಯಿಂದ ಕೂಡಿದರೆ, ನಂತರ ಭಾವನೆಗಳು ಮತ್ತು ಕಲಾವಿದರ ಅಭಿನಯ ನೋಡುಗರಿಗೆ ಮೊಬೈಲ್ ನೋಡದಂತೆ ಮಾಡುತ್ತದೆ. ಬದುಕಿನಲ್ಲಿ ಇದ್ದರೆ ಇಂತಹ ಗೆಳೆಯರು ಇರಬೇಕು ಎಂಬಂತಹ ದೃಶ್ಯಗಳು ಯುವಕರಿಗೆ ಸಂದೇಶ ಆಗುತ್ತದೆ. ಇಲ್ಲಿನ ಟ್ರಾಫಿಕ್ ಬದುಕಿನ ಜೊತೆಯಲ್ಲಿ ಇದರಾಚೆಯೂ ಸುಂದರ ಜಗತ್ತಿದೆ ಎಂಬುದನ್ನು ಹೇಳಲಾಗಿದೆ.
ಇಡೀ ಸಿನಿಮಾಗೆ ಅನಂತ್‌ನಾಗ್ ಗುಜರಾತಿ ಮೂಲದ ಉದ್ಯಮಿಯಾಗಿ ಇರುವುದು ಪ್ಲಸ್ ಪಾಯಿಂಟ್ ಆಗಿದೆ. ಮಂಜುನಾಥ್‌ಹೆಗಡೆ-ಸುಧಾಬೆಳವಾಡಿ ಅಪ್ಪ ಅಮ್ಮನಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಸಾಯಿಕುಮಾರ್, ಪ್ರಕಾಶ್‌ಬೆಳವಾಡಿ,ಮಧುಸೂದನ್, ಪುನೀತ್ ಇವರೆಲ್ಲರೂ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅಶ್ವಿನ್.ಪಿ.ಕುಮಾರ್ ಸಂಗೀತದಲ್ಲಿ ಹಾಡುಗಳು ಗುನುಗುವಂತಿದೆ. ಭಜರಂಗ್ ಬೆಂಗಳೂರು ಸಿಟಿಯನ್ನು ಸುಂದರವಾಗಿ ತೋರಿಸಿದ್ದಾರೆ. ಕಲಾವಿದರ ದಂಡು ಹೇರಳವಾಗಿದ್ದರೂ ಅದಕ್ಕೆ ಹಿಂದುಮುಂದು ನೋಡದೆ ಬಾಲಕೃಷ್ಣ ಹಣ ಸುರಿದಿರುವುದು ಸರಿಯಾಗಿದೆ ಎನ್ನಬಹುದು.
****