Padavi Poorva.Film Reviews

Friday, December 30, 2022

322

ಸಿಹಿ ಸಿಹಿ ನೆನಪುಗಳ ಪದವಿಪೂರ್ವ

       ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳನ್ನೆ ದೃಷ್ಟಿಯಲ್ಲಿಟ್ಟುಕೊಂಡು ಸಿದ್ದಪಡಿಸಿರುವ ಚಿತ್ರ ‘ಪದವಿ ಪೂರ್ವ’ ಎನ್ನಬಹುದು. ಇನ್ನು ಕಥೆಯ ಬಗ್ಗೆ ಹೇಳುವುದಾದರೆ ಆಗಷ್ಟೇ ಕಾಲೇಜು ಪ್ರವೇಶಿಸಿರುವ ನವೀನನಿಗೆ ಗೆಳಯನೇ ಆಸ್ತಿ. ಅವರುಗಳು ಇದ್ದರೆ ಸಾಕು ಅಂದುಕೊಂಡಿರುತ್ತಾನೆ. ಮುಂದೆ ಗೆಳೆತನಕ್ಕಾಗಿ ಏನೆಲ್ಲಾ ಮಾಡುತ್ತಾನೆ,ಅದಕ್ಕೆ ದೋಸ್ತ್‌ಗಳು ಹೇಗೆ  ಸಾಥ್ ಆಗಿತ್ತಾರೆ. ಹೀಗೆ ಸಾಗುವ ಚಿತ್ರವು ಒಂದಷ್ಟು ತರಲೆ, ತುಂಟಾಟಗಳ, ಅಳು-ನಗು ಎಲ್ಲದರ ಜತೆ ನವಿರಾಗಿ ಬೆರೆತಿದೆ. ೯೫ರ ಕಾಲಘಟ್ಟದಲ್ಲಿ ಮೊಬೈಲ್, ವಾಟ್ಸಾಪ್, ಫೇಸ್‌ಬುಕ್ ಇಲ್ಲದೆ ಕಾಲವನ್ನು ಚೆನ್ನಾಗಿ ತೋರಿಸಲಾಗಿದೆ. ಎಳೆಯ ಹೃದಯಗಳಲ್ಲಿ ಹುಟ್ಟುವ ಪ್ರೀತಿ, ಸ್ನೇಹ ಸಂಬಂಧ, ಮಕ್ಕಳ ಭವಿಷ್ಯದ ಮೇಲೆ ಕನಸಿಟ್ಟುಕೊಳ್ಳುವ ಅಪ್ಪ-ಅಮ್ಮ. ಇದೆಲ್ಲಾವನ್ನು ನವ ನಿರ್ದೇಶಕ ಹರಿಪ್ರಸಾದ್‌ಜಯಣ್ಣ ನೋಡುಗರಿಗೆ ಬೋರ್ ಆಗದಂತೆ ಸನ್ನಿವೇಶಗಳನ್ನು ಅದ್ಬುತವಾಗಿ ಸೃಷ್ಟಿಸಿದ್ದಾರೆ. ಕೊನೆಯಲ್ಲಿ ಯಾರೂ ಊಹಿಸದಂತ ತಿರುವು ಕೊಟ್ಟಿರುವುದು ಪ್ಲಸ್ ಪಾಯಿಂಟ್. 

        ಕಾಲೇಜ್ ಹುಡುಗನಾಗಿ ಪೃಥ್ವಿಶಾಮನೂರು ಚೊಚ್ಚಲ ಸಿನಿಮಾದಲ್ಲೆ ಭವಿಷ್ಯದ ನಾಯಕ ಅನಿಸಿಕೊಂಡಿದ್ದಾರೆ. ನಾಯಕಿಯರಾದ ಅಂಜಲಿಅನೀಶ್ ಮತ್ತು ಯಶಾಶಿವಕುಮಾರ್ ಸಿನಿಮಾದ ಉದ್ದಕ್ಕೂ ಆವರಿಸಿಕೊಂಡಿದ್ದಾರೆ. ಬಹುತೇಕ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಇವರಿಗೆ ಪ್ರೋತ್ಸಾಹ ಕೊಡುವಂತೆ ಹಿರಿಯ ಕಲಾವಿದರುಗಳಾದ ಶರತ್‌ಲೋಹಿತಾಶ್ವ, ರಂಗಾಯಣರಘು ನಟನೆ ಚಿತ್ರದ ತೂಕ ಹೆಚ್ಚಿಸಿದೆ. ಅರ್ಜುನ್‌ಜನ್ಯಾ ಸಂಗೀತದಲ್ಲಿ ಎರಡು ಹಾಡುಗಳು ಕೇಳಬಲ್. ಸಂತೋಷ್ ರೈ ಪಾತಾಜೆ ಕ್ಯಾಮಾರವು ಮಲೆನಾಡಿನ ಸುಂದರ ಸೊಬಗು ಕಣ್ಣಿಗೆ ತಂಪು ಕೊಡುತ್ತದೆ. ನಮಗೆ ನಮ್ಮ ಜೀವನವನ್ನು ರಿವೈಂಡ್ ಮಾಡಿಕೊಳ್ಳುವ ಬಯಕೆ ಇದ್ದಲ್ಲಿ ಪದವಿಪೂರ್ವ ಸಿನಿಮಾವು ಹೇಳಿ ಮಾಡಿಸಿದಂತಿದೆ. ರವಿಶಾಮನೂರು ನಿರ್ಮಾಣ ವರ್ಷದ ಉತ್ತಮ ಚಿತ್ರಗಳಲ್ಲಿ ಇದು ಆಗಿರುತ್ತದೆ.

****

 

Copyright@2018 Chitralahari | All Rights Reserved. Photo Journalist K.S. Mokshendra,