ರೆಟ್ರೋ ಕಾಲವನ್ನು ನೆನಪಿಸುವ ಚಿತ್ರ ****
೮೦ರ ದಶಕದಲ್ಲಿ ‘ದೂರದರ್ಶನ’ ಬಂದು ಹೊಸ ಯುಗ ಶುರುವಾಗಿತ್ತು. ಇದೇ ಹೆಸರಿನಲ್ಲಿ ಚಿತ್ರವೊಂದು ತೆರೆಕಂಡು ಅದೇ ಕಾಲಘಟ್ಟವನ್ನು ಹಿನ್ನಲೆಯಾಗಿಟ್ಟುಕೊಂಡು ತೆರೆ ಮೇಲೆ ತರಲಾಗಿದೆ. ನಿರ್ದೇಶಕ ಸುಖೇಶ್‌ಶೆಟ್ಟಿ ತಾವು ನೋಡಿದ, ಕೇಳಿದ ಕೆಲವು ಸತ್ಯಘಟನೆಗನ್ನು ಹೆಕ್ಕಿಕೊಂಡಿದಾರೆ. ಟಿವಿಯೊಂದರ ಸುತ್ತ ನಡೆಯುವ ಕಥೆಯಲ್ಲಿ ಸ್ನೇಹ, ಪ್ರೀತಿ, ದ್ವೇಷ, ಅಸೂಯೆ, ಅಹಂಕಾರ ಹೀಗೆ ಹಲವು ಪ್ರಕಾರಗಳ ದೃಷ್ಟಿಕೋನದಲ್ಲಿ ತೋರಿಸಿರುವುದು ಕಂಡುಬರುತ್ತದೆ.
ಪಶ್ಚಿಮಘಟ್ಟದ ಪರಿಸರದ ಮಧ್ಯದಲ್ಲಿ ಊರಿನ ಮುಖ್ಯಸ್ಥ ರಾಮಕೃಷ್ಣಭಟ್ಟರಿಗೆ ಒಬ್ಬನೇ ಮಗ. ಎಲ್ಲಾ ಕಡೆ ಇರೋ ಹಾಗೆ ಭಟ್ಟರಿಗೆ ಅಹಂಕಾರ ಮಿತಿ ಮೀರುರುತ್ತದೆ. ಅಪ್ಪ ಮಗನ ನಡುವೆ ಮನಸ್ತಾಪ ಉಂಟಾದಾಗ ಪತ್ನಿ ಸರಿಪಡಿಸುತ್ತಿರುತ್ತಾಳೆ. ಆಗ ತಾನೆ ಟಿವಿ ಎಂಬ ಮಾಯಾಪೆಟ್ಟಿಗೆ ಬಂದಿರುವ ಕಾಲ. ಊರಿಗೆ ಯಾವುದೇ ವಸ್ತು ಬಂದರೂ ಮೊದಲು ಭಟ್ಟರೆ ಮನೆಗೇ ಸೇರೋದು ಪದ್ದತಿಯಾಗಿರುತ್ತದೆ. ನ್ಯಾಯಬೆಲೆ ನೋಡಿಕೊಳ್ಳುವ ಮಗ, ಮೇಷ್ಟ್ರು ಸಲಹೆಯಂತೆ ಗೆಳೆಯರ ಜೊತೆ ಸೇರಿ ನಾಟಕ ಮಾಡಲು ಮುಂದಾಗುತ್ತಾನೆ. ಇದರಿಂದ ಗೆಳತಿಯೊಂದಿಗೆ ಪ್ರೇಮ, ಗೆಳೆಯನೊಂದಿಗೆ ದ್ವೇಷ ಹುಟ್ಟಿಕೊಳ್ಳುತ್ತದೆ.
ಮುಂದೆ ಭಟ್ಟ ಹಾಗೂ ಸಹೋದರನ ನಡುವೆ ಆಸ್ತಿ ವಿವಾದದಿಂದಾಗಿ ಇಬ್ಬರಲ್ಲೂ ಬಿರುಕು ಮೂಡುತ್ತದೆ. ಹೀಗೆ ಸಾಗುತ್ತಿರುವಾಗ ಭಟ್ಟರ ಮನೆ ಟಿವಿ ಕಳ್ಳತನವಾಗುತ್ತದೆ. ಇಲ್ಲಿಂದ ಸಿನಿಮಾವು ತಿರುವು ಪಡೆದುಕೊಳ್ಳುತ್ತದೆ. ಇದೆಲ್ಲಾವನ್ನು ಕುತೂಹಲಕಾರಿ ತೋರಿಸಿದ್ದು, ಇದನ್ನು ಚಿತ್ರಮಂದಿರದಲ್ಲಿ ನೋಡಿದರೆ ಮಜಾ ಸಿಗುತ್ತದೆ.
ನಾಯಕ ಪೃಥ್ವಿಅಂಬರ್, ನಾಯಕಿ ಅಯನಾ ತಮಗೆ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಭಟ್ಟರಾಗಿ ಸುಂದರ್, ಪತ್ನಿಯಾಗಿ ಹರಿಣಿ, ಸಹೋದರನಾಗಿ ರಘುರಾಮನಕೊಪ್ಪ ಪಾತ್ರಕ್ಕೆ ಜೀವ ತುಂಬಿದ್ದಾರೆ. ಒಟ್ಟಾರೆ ಚಿತ್ರವು ಅಂದಿನ ಕಾಲಘಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ಸಪಲವಾಗಿದೆ. ರಾಜೇಶ್‌ಶೆಟ್ಟಿ ಬಂಡವಾಳ ಹೂಡಿದ್ದಾರೆ.
****