ನಾಲ್ಕು ಮನಸುಗಳ ನೋಟವೇ ಚೌಕಾಬಾರ
ರಂಗಭೂಮಿ, ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಬಾಲನಟ ನಂತರ ನಟನಾಗಿ ಗುರುತಿಸಿಕೊಂಡಿರುವ ವಿಕ್ರಂಸೂರಿ ಎರಡನೇ ನಿರ್ದೇಶನದ ‘ಚೌಕಾಬಾರ’ ಚಿತ್ರವು ಆಟದ ಹೆಸರಾಗಿದ್ದು, ಜೀವನದ ಪಾಠವನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ನಾಲ್ಕು ಪಾತ್ರಗಳ ಸುತ್ತ ನಡೆಯುವ ಕಥೆಯಾಗಿದ್ದರೂ ಯಾವ ಪಾತ್ರವನ್ನು ಹೆಚ್ಚು ಕಡಿಮೆ ಅಂತ ಮಾಡದೆ ಎಲ್ಲದಕ್ಕೂ ಸಮಾನ ಅವಕಾಶ ನೀಡಿದ್ದಾರೆ. ಕಥಾನಾಯಕ ತನ್ನ ಸ್ನೇಹಿತೆಯ ಮನೆಯಲ್ಲಿ ಪರಿಚಯವಾಗುತ್ತದೆ. ಇವರಿಬ್ಬರ ಪರಿಚಯ ಮುಂದೆ ಇಬ್ಬರು ಹತ್ತಿರವಾಗುತ್ತದೆ. ದೂರದ ಪಯಣ, ವಿಕೇಂಡ್ ಸುತ್ತಾಟದಲ್ಲೇ ಒಂದಷ್ಟು ಕಾಲ ಕಳೆಯುತ್ತಾರೆ. ಅವಳಿಗೆ ಅವನ ಮೇಲೆ ಪ್ರೀತಿ ಬರುತ್ತದೆ. ಇನ್ನೇನು ಹೇಳಬೇಕು ಅನ್ನುವಷ್ಟರಲ್ಲಿ ಆಕಸ್ಮಿಕವಾಗಿ ಮೈ ಮರೆಯುತ್ತಾರೆ. ನಂತರ ಇಬ್ಬರಲ್ಲೂ ಪಶ್ಚಾತಾಪದ ಬೇಗೆ ಕಾಡುತ್ತದೆ. ಅವರವರ ಮನೆಯಲ್ಲಿ ಮದುವೆ ಮಾಡಲು ಯೋಜನೆ ಹಾಕಿಕೊಳ್ಳುತ್ತಾರೆ. ಇದರಿಂದ ಎರಡು ಕಡೆ ಮದುವೆ ನಡೆಯುವುದು ಕಷ್ಟವಾಗುತ್ತದೆ. ಅದಕ್ಕೆ ಕಾರಣವೇನು ಎನ್ನುವುದು ಸಿನಿಮಾದ ಒಂದು ಏಳೆಯಾಗಿದೆ.
ವಿಹಾನ್‌ಪ್ರಭಂಜನ್ ನಾಯಕನಾಗಿ ಗಮನ ಸೆಳೆಯುತ್ತಾರೆ. ನಾಯಕಿ ಮತ್ತು ನಿರ್ಮಾಪಕಿ ನಮಿತಾರಾವ್ ಎರಡು ಜವಬ್ದಾರಿಯನ್ನು ಸಮನಾಗಿ ತೂಗಿದ್ದಾರೆ. ಮೊದಲರ್ಧ ಒಂದು ರೀತಿ ಹುಡುಗಾಟ, ವಿರಾಮ ತರುವಾಯ ಪ್ರೀತಿಯ ಸ್ವಾರಸ್ಯ ಸನ್ನಿವೇಶಗಳೊಂದಿಗೆ ಸರಳವಾಗಿ ಮುಗಿದು ಹೋಗುತ್ತದೆ. ಉಳಿದಂತೆ ಕಾವ್ಯರಮೇಶ್, ಸುಜಯ್‌ಹೆಗಡೆ, ಸಂಜಯ್‌ಸೂರಿ, ಪ್ರಥಮಾಪ್ರಸಾದ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರೂಪಾಪ್ರಭಾಕರ್ ಸಂಭಾಷಣೆಗಳು ಅಲ್ಲಲ್ಲಿ ಕಚಗುಳಿ ಇಡುತ್ತದೆ. ಅಶ್ವಿನ್.ಪಿ.ಕುಮಾರ್ ಸಂಗೀತ, ರವಿರಾಜ್ ಕ್ಯಾಮೆರಾ ನೆನಪಿನಲ್ಲಿ ಉಳಿಯುತ್ತದೆ. ಒಮ್ಮೆ ನೋಡಬಲ್ ಎಂಬ ಖಾತೆಗೆ ಸೇರಿಕೊಳ್ಳುತ್ತದೆ.
****