ಧೈರ್ಯಶಾಲಿ ಹೆಣ್ಣು ಜೂಲಿಯೆಟ್-೨
ಮಹಿಳಾ ಪ್ರಧಾನ ಕಥೆಯನ್ನು ಹೊಂದಿರುವ ‘ಜೂಲೆಯಟ್-೨’ ಚಿತ್ರವು ತೊಂದರೆಗೆ ಸಿಲುಕಿದ ಹೆಣ್ಣು ಮಗಳೊಬ್ಬಳು ಹೇಗೆ ಪ್ರತಿಕಾರ ತೀರಿಸಿಕೊಳ್ಳುತ್ತಾಳೆ. ಇಲ್ಲಿ ತಪ್ಪು ಮಾಡಿದವರಿಗೆ ಇಲ್ಲೇ ಶಿಕ್ಷೆ ಆಗಬೇಕು. ಮಹಿಳೆ ಅಬಲೆಯಲ್ಲ ಸಬಲೆ ಎಂಬುದನ್ನು ಹೇಳ ಹೊರಟಿದೆ. ಜತೆಗೆ ಅಪ್ಪ ಮಗಳ ಬಾಂಧ್ಯವದ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗಲಿದೆ. ಆರಂಭದಲ್ಲೆ ಕಥಾನಾಯಕಿ ತಂದೆ ಆಕ್ಸಿಡೆಂಟ್ ಆಗಿ ನಿಧನರಾಗುತ್ತಾರೆ. ಅಪ್ಪ ಸಾಯುವ ಮುನ್ನ ಒಂದು ದೊಡ್ಡ ಜವಬ್ದಾರಿಯನ್ನು ಮಗಳಿಗೆ ವಹಿಸಿರುತ್ತಾರೆ. ಮುಂದೆ ತಂದೆಯ ಆಸೆಯಂತೆ ಆಕೆ ಸಾಧಿಸುತ್ತಾಳಾ. ಇದರಿಂದ ಬರುವ ಅಡೆತಡೆಗಳು ಏನು? ಇದೆಲ್ಲಾವನ್ನು ಎದುರಿಸಿ ಹೇಗೆ ಹೊರಗೆ ಬರುತ್ತಾಳೆ ಎಂಬುದನ್ನು ಥ್ರಿಲ್ಲರ್ ಮೂಲಕ ತೋರಿಸಿದ್ದರಿಂದ ನೋಡುಗರಿಗೆ ಕುತೂಹಲ ಮೂಡಿಸುತ್ತದೆ.
‘ಪ್ರೇಮಂಪೂಜ್ಯಂ’ ಖ್ಯಾತಿಯ ಬೃಂದಾಆಚಾರ್ಯ ಜ್ಯೂಲಿಯೆಟ್ ಹೆಸರಿನಲ್ಲಿ ಹೆಣ್ಣು ಅಬಲೆಯಲ್ಲ ಸಬಲಳು ಎನ್ನುವಂತೆ ಆಕ್ಷನ್ ಮಾಡಿರುವುದು ತೆರೆ ಮೇಲೆ ಚೆನ್ನಾಗಿ ಕಾಣಿಸುತ್ತದೆ. ಇದಕ್ಕತಕ್ಕಂತೆ ನಿರ್ದೇಶಕ ವಿರಾಟ್.ಬಿ.ಗೌಡ ಚಿತ್ರಕಥೆಯನ್ನು ಸೊಗಸಾಗಿ ಏಣೆದಿರುವುದರಿಂದ ಬೋರ್ ಅನಿಸುವುದಿಲ್ಲ. ಬಹುತೇಕ ಸಿನಿಮಾವು ಕಾಡಿನಲ್ಲಿ ಚಿತ್ರೀಕರಿಸಿರುವುದರಿಂದ ಕಾಡಿಗೆ ಹೋಗಿ ಬಂದಂತೆ ಆಗುತ್ತದೆ.
ಉಳಿದಂತೆ ಶ್ರೀಕಾಂತ್,ರಾಯ್, ಅನೂಪ್‌ಸಾಗರ್, ಖುಷ್‌ಆಚಾರ್ಯ, ರವಿ, ರಾಧೇಶ್‌ಶಣೈ ಮುಂತಾದವರು ತಮಗೆ ನೀಡಿದ ಕೆಲಸನವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹಿನ್ನಲೆ ಶಬ್ದ ಸಚಿನ್‌ಬಸ್ರೂರ್, ಛಾಯಾಗ್ರಹಣ ಶ್ಯಾಂಟೋ.ವಿ.ಅಂಟೋ ಇವೆಲ್ಲವೂ ಸಿನಿಮಾಕ್ಕೆ ಪೂರಕವಾಗಿದೆ. ಶಾಂತ ಸ್ವರೂಪದ ಹೆಣ್ಣು ದುರ್ಗಿಯಾದಾಗ ಹೇಗೆ ಅವತಾರ ತಾಳುತ್ತಾಳೆ ಎಂಬುದನ್ನು ಜೂಲಿಯೆಟ್ ನಿರೂಪಿಸಿದೆ.
****