ಹೋರಾಟದಲ್ಲಿ ಒಂಟಿ ಸಲಗ
ಒಂದೇ ಪಾತ್ರವನ್ನು ನಿರ್ವಹಿಸಿರುವ ಬೆರಳಿಕೆಯಷ್ಟು ಚಿತ್ರಗಳು ಬಂದಿವೆ. ಆ ಸಾಲಿಗೆ ‘ರಾಘು’ ಸಿನಿಮಾ ಸೇರ್ಪಡೆಯಾಗುತ್ತದೆ. ಕಥಾನಾಯಕ ರಾಘು ಔಷದಿಗಳನ್ನು ಗ್ರಾಹಕರಿಗೆ ತಲುಪಿಸುವ ಡೆಲಿವರಿ ಹುಡುಗ. ಕತ್ತಲಾದ ಮೇಲೆ ಆತನ ಕೆಲಸ ಬೇರೆಯದೆ ಇರುತ್ತದೆ. ಹೀಗೆ ಎರಡು ಗುಣಗಳಲ್ಲಿ ಬದುಕು ಸಾಗುತ್ತಿರಬೇಕಾದರೆ, ಲಾಕ್‌ಡೌನ್ ಘೋಷಣೆಯಾಗುತ್ತದೆ. ಅಲ್ಲಿಂದ ಸಿನಿಮಾ ಪ್ರಾರಂಭವಾಗುತ್ತದೆ. ಒಬ್ಬನೇ ಕಾಣಿಸಿಕೊಂಡರೂ ಧ್ವನಿಯ ಮೂಲಕ ಪಾತ್ರಗಳು ಪರಿಚಯಿಸುತ್ತದೆ. ಅವುಗಳೆಲ್ಲಾ ಅವನ ಜೀವನದಲ್ಲಿ ಒಬ್ಬೊಬ್ಬರಾಗಿ ಬರುತ್ತಿರುವಂತೆ ಸಿಗುವ ಕುತೂಹಲ ತಿರುವುಗಳು ಬರುತ್ತದೆ. ಒಂದು ಪ್ರೇಮ, ಅರ್ಧಕ್ಕೆ ನಿಂತ ಸ್ನೇಹ, ಭವಿಷ್ಯದ ಯೋಜನೆ ಎಲ್ಲವೂ ಸೇರಿಕೊಂಡು ಸನ್ನಿವೇಶಗಳು ಸಾಗುತ್ತದೆ. ಥ್ರಿಲ್ಲರ್ ಜಾನರ್ ಆಗಿದ್ದು ಕೋವಿಡ್ ಸಮಯದಲ್ಲಿ ರಾತ್ರಿಯಲ್ಲಿ ನಡೆಯುತ್ತದೆ.
ಮೊದಲ ಪ್ರಯತ್ನದಲ್ಲೆ ನಿರ್ದೇಶಕ ಎಂ.ಆನಂದರಾಜ್ ಪೂರಕವಾದ ದೃಶ್ಯಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ವಿಜಯರಾಘವೇಂದ್ರ ತಮ್ಮ ಸಹಜ ಅಭಿನಯದಿಂದ ಎಲ್ಲರಿಗೂ ಇಷ್ಟವಾಗುತ್ತಾರೆ. ಋತ್ವಿಕ್‌ಮುರಳಿಧರ್ ಹಿನ್ನಲೆ ಸಂಗೀತ, ಉದಯ್‌ಲೀಲಾ ಛಾಯಾಗ್ರಹಣ ಇವರೆಡು ಸಿನಿಮಾವನ್ನು ಮತ್ತೋಂದು ಹಂತಕ್ಕೆ ಕರೆದುಕೊಂಡು ಹೋಗುತ್ತದೆ. ಇವರುಗಳ ಶ್ರಮಕ್ಕೆ ರನ್ವಿತ್‌ಶಿವಕುಮಾರ್ ಮತ್ತು ಅಭಿಷೇಕ್‌ಕೋಟ ಬಂಡವಾಳ ಹೂಡಿರುವುದು ಒಳ್ಳೆಯ ಅನುಭವ ಎನ್ನಬಹುದು. ವಿಭಿನ್ನ ಪ್ರಯೋಗಾತ್ಮಕ ಚಿತ್ರವನ್ನು ಒಮ್ಮೆ ನೋಡಿದರೂ ಅಡ್ಡಿಯಲ್ಲ.
****