ತನಿಖೆಯೊಂದಿಗೆ ಥ್ರಿಲ್ಲರ್ ಚಿತ್ರ ಸೈರನ್
‘ಸೈರನ್’ ಚಿತ್ರವು ಮರ್ಡರ್ ಮಿಸ್ಟ್ರಿ ಕಥೆಯನ್ನು ಒಳಗೊಂಡಿದೆ. ಒಂದು ಕೊಲೆ ನಡೆಯುತ್ತದೆ. ಅದನ್ನು ತನಿಖೆ ಮಾಡಲು ಹೋದಾಗ ಮತ್ತೋಂದು ಕೊಲೆ ಆಚೆಗೆ ಬರುತ್ತದೆ. ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಶ್ವೇತಾ ಮನೆಗೆ ಬಂದಿರುವುದಿಲ್ಲ. ಆತಂಕಗೊಂಡ ತಾಯಿ, ತಂಗಿ ಠಾಣೆಗೆ ಹೋಗುತ್ತಾರೆ. ದೂರು ದಾಖಲಿಸಿಕೊಂಡ ಪೋಲೀಸರಿಗೆ ಸಾಮಾಹಿಕ ಅತ್ಯಾಚಾರಕ್ಕೆ ಗುರಿಯಾಗಿ, ಸುಟ್ಟ ರೀತಿಯಲ್ಲಿ ದೇಹವೊಂದು ಸಿಗುತ್ತದೆ. ಅದು ಶ್ವೇತಾಳದ್ದೇ ಅಂತ ತಿಳಿಯುತ್ತದೆ. ಪ್ರಕರಣವನ್ನು ತನಿಖೆ ನಡೆಸಲು ಖಡಕ್ ಪೋಲೀಸ್ ಅಧಿಕಾರಿ ಬರುತ್ತಾರೆ. ಇದರಿಂದ ಸಾಕಷ್ಟು ತಿರುವುಗಳು ಪಡೆದುಕೊಂಡು ಅಂತಿಮವಾಗಿ ಅಪರಾಧಿ ಸಿಗುತ್ತಾರೆ. ಅದು ಹೇಗೆ ಎಂಬುದನ್ನು ಚಿತ್ರಮಂದಿರದಲ್ಲಿ ನೋಡಬೇಕು.
ರಾಜುವೆಂಕಯ್ಯ ನಿರ್ದೇಶನದಲ್ಲಿ ಸನ್ನಿವೇಶಗಳು ಚೆನ್ನಾಗಿ ಮೂಡಿಬಂದಿದೆ. ಪ್ರಥಮ ಚಿತ್ರದಲ್ಲೆ ಜಬರ್‌ದಸ್ತ್ ಆಕ್ಷನ್ ಅಧಿಕಾರಿಯಾಗಿ ಪ್ರವೀರ್‌ಶೆಟ್ಟಿ ನಟನೆ ನೋಡಿದರೆ ಚಿತ್ರರಂಗಕ್ಕೆ ಹೊಸ ನಾಯಕನಟ ಪರಿಚಯವಾಗಿದ್ದಾರೆ ಎನ್ನಬಹುದು. ನಾಯಕಿಯಾಗಿ ಲಾಸ್ಯ ಸಹ ಇನ್ಸ್‌ಪೆಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ಮತ್ತೋಂದು ಪಾತ್ರದಲ್ಲಿ ಸುಕನ್ಯ ಇವರೊಂದಿಗೆ ಅಚ್ಯುತಕುಮಾರ್, ಅವಿನಾಶ್, ಶರತ್‌ಲೋಹಿತಾಶ್ವ, ಮಾಳವಿಕಅವಿನಾಶ್, ಸ್ಪರ್ಶಾರೇಖಾ,ಪವಿತ್ರಾಲೋಕೇಶ್ ತಮಗೆ ನೀಡಿದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಭಾರದ್ವಾಜ್ ಸಂಗೀತದಲ್ಲಿ ಎರಡು ಹಾಡುಗಳು ಕೇಳಬಲ್. ನಾಗೇಶ್‌ಆಚಾರ್ಯ ಛಾಯಾಗ್ರಹಣ ಇದಕ್ಕೆ ಪೂರಕವಾಗಿದೆ. ಬಿಜು ಶಿವಾನಂದ್ ನಿರ್ಮಾಣ ಮಾಡಿದ್ದಾರೆ.
****