ದುಷ್ಟಶಕ್ತಿಯನ್ನು ನಿರ್ಮೂಲನ ಮಾಡುವ ಗದಾಯುದ್ದ
ಹೊಸಬರ ‘ಗದಾಯುದ್ದ’ ಚಿತ್ರವು ವಾಮಾಚಾರಿ ಕುರಿತಾಗಿದೆ. ಪ್ರಪಂಚದಲ್ಲಿ ಭೂತಪ್ರೇತಗಳು ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ವಾಮಾಚಾರ ಎನ್ನುವುದು ಮಾತ್ರ ಇಂದಿಗೂ ಜೀವಂತವಾಗಿದೆ. ಕೇವಲ ವೈಯಕ್ತಿಕ ದ್ವೇಷ, ಧನದಾಹದಿಂದ ಮಾನವರ ಜೀವ ತೆಗೆಯಲು ಇದನ್ನು ಬಳಸಿಕೊಳ್ಳಲಾಗುತ್ತಿದೆ. ನಾಯಕನ ರೂಪದಲ್ಲಿ ಮರುಜನ್ಮ ತೆಳೆದ ಭೀಮ ಗದಾಯುದ್ದದ ಮೂಲಕ ಹೇಗೆ ಇಂಥವರನ್ನು ಸದೆಬಡಿಯುತ್ತಾನೆ ಎನ್ನುವುದು ಒಂದು ಏಳೆಯ ಸಾರಾಂಶವಾಗಿದೆ. ಪೌರಾಣಿಕ ಘಟನೆ ಹಾಗೂ ಈಗಿನ ಕಥೆಯನ್ನು ಇಟ್ಟುಕೊಂದು ಸನ್ನಿವೇಶಗಳನ್ನು ಸೃಷ್ಟಿಸಿರುವುದು ತಿಳಿದು ಬರುತ್ತದೆ.
ರಚನೆ,ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಶ್ರೀವತ್ಸರಾವ್ ಮೊದಲ ಚಿತ್ರದಲ್ಲೇ ತಮ್ಮ ಪ್ರತಿಭೆಯನ್ನು ಸನ್ನಿವೇಶಗಳಲ್ಲಿ ಚೆನ್ನಾಗಿ ರೂಪಿಸಿದ್ದಾರೆ. ನಾಯಕನಾಗಿ ಸುಮಿತ್ ಮೆಡಿಕಲ್ ಸ್ಟೂಡೆಂಟ್ ಆಗಿ ಮಿಂಚಿದ್ದಾರೆ. ನಾಯಕಿ ಧನ್ಯಪಾಟೀಲ್ ತೆರೆ ಮೇಲೆ ಚಂದ ಕಾಣಿಸುತ್ತಾರೆ. ವಾಮಾಚಾರಿಯಾಗಿ ಡ್ಯಾನಿಕುಟ್ಟಪ್ಪ ನಟನೆಯಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಉಳಿದಂತೆ ಸ್ಪರ್ಶಾರೇಖಾ, ಶರತ್‌ಲೋಹಿತಾಶ್ವ, ಯತಿರಾಜ್, ಸತ್ಯಜಿತ್, ಶಿವರಾಂ ತಮಗೆ ನೀಡಿದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಸಾಲೋಮನ್ ಸಂಗೀತ, ಸುರೇಶಬಾಬು ಛಾಯಾಗ್ರಹಣ ಇರಲಿದೆ. ‘ಅಕ್ಕಿಬೇಳೆ ಡಬ್ಬ ಹುಡುಕುತ್ತೆ ಕೈಯಿ’ ಎಂದು ಸಾಧುಕೋಕಿಲ ಹೇಳುವ ಕುಡುಕರ ಸುಪ್ರಭಾತದ ಹಾಡು ಚೆನ್ನಾಗಿ ಬಂದಿದೆ. ನಿತಿನ್‌ಶಿರಗುರ್‌ಕರ್ ಬಂಡವಾಳ ಹೂಡಿರುವ ಚಿತ್ರವು ಒಮ್ಮೆ ನೋಡಬಲ್.
****