Darbar.Film Reviews

Friday, June 09, 2023

204

ನೋಡುಗರನ್ನು ನಗಿಸುವ ದರ್ಬಾರ್

      ನಮ್ಮ ನಮ್ಮಲ್ಲಿನ ನಡುವಿನ ಸಂಬಂಧಗಳನ್ನು ಚುನಾವಣಾ ರಾಜಕೀಯ ಹೇಗೆ ಹಾಳು ಮಾಡುತ್ತದೆ. ಗ್ರಾಮ ಮಟ್ಟದಲ್ಲಿ ನಡೆಯುವ ಗ್ರಾಮ ಪಂಚಾಯತಿ  ಚುನಾವಣೆಗಳು ಯಾವ ರೀತಿ ನಡೆಯುತ್ತದೆ. ಇದರಲ್ಲಿ ಗೆಲ್ಲಲು ಹಣ, ಹೆಂಡದ ಹೊಳೆ ಹೇಗೆ ಸುರಿಸುತ್ತಾರೆ ಎಂಬುದನ್ನು ‘ದರ್ಬಾರ್’ ಎನ್ನುವ ಚಿತ್ರದಲ್ಲಿ ಹಾಸ್ಯದ ಸನ್ನಿವೇಶಗಳಲ್ಲಿ ಚೆನ್ನಾಗಿ ತೋರಿಸಲಾಗಿದೆ. ಸಾಹಿತಿ, ಸಂಗೀತ ಸಂಯೋಜಕ ವಿ.ಮನೋಹರ್ ೨೩ ವರ್ಷಗಳ ನಂತರ ನಿರ್ದೇಶನ ಮಾಡಿರುವ ಸಿನಿಮಾವು ಔಟ್ ಅಂಡ್ ಔಟ್ ಕಾಮಿಡಿ ಇರಲಿದ್ದು, ಹಳ್ಳಿ ಹಿನ್ನಲೆಯಲ್ಲಿ ಜರುಗುವ ಸಂದರ್ಭಗಳನ್ನು ಚೆನ್ನಾಗಿ ಸನ್ನಿವೇಶಗಳ ಮೂಲಕ ಸೃಷ್ಟಿಸಿದ್ದಾರೆ.

       ಕಥಾನಾಯಕ ಮಧು ಒಂಥರ ಸ್ಟೈಲ್. ಧೋರಣೆ ಬುದ್ದಿಯುಳ್ಳವನು. ಈತನ ಅಹಂಕಾರವನ್ನು ಇಳಿಸಬೇಕೆಂದು ಸ್ಕೆಚ್ ಹಾಕುವ ಸ್ನೇಹಿತರು ಆತನನ್ನು ಚುನಾವಣೆಗೆ ನಿಲ್ಲುವಂತೆ ಪ್ರೇರೆಪಿಸಿ, ಆತನ ವಿರುದ್ದ ಪ್ರಚಾರ ಶುರು ಮಾಡುತ್ತಾರೆ. ಇದೇ ಸಮಯದಲ್ಲಿ ಊರಿನ ಜಾತ್ರೆ ನಡೆಯುತ್ತದೆ. ಪಕ್ಕದೂರಿಂದ ಬಂದ ದೀಪಿಕಾಳ ಅಂದಕ್ಕೆ ಮಾರು ಹೋಗುತ್ತಾನೆ. ಒಮ್ಮೆ ಹೆಜ್ಜೇನು ಸುತ್ತುವರಿದಾಗ ಅವಳನ್ನು ರಕ್ಷಿಸುತ್ತಾನೆ. ಇದರಿಂದ ಇಬ್ಬರಲ್ಲೂ ಪ್ರೀತಿ ಚಿಗುರುತ್ತದೆ. ಈ ನಡುವೆ ಚುನಾವಣಾ ದಿನಾಂಕ ನಿಗದಿಯಾಗುತ್ತದೆ. ಏನೂ ಕಪಟ ಅರಿಯದ ಮಧು ತನಗೆ ಜನರು, ಗೆಳೆಯರ ಬೆಂಬಲವಿದೆ ಎಂದುಕೊಂಡು ಎಲೆಕ್ಷನ್‌ಗೆ ನಿಲ್ಲುತ್ತಾನೆ. ಮುಂದೆ ಯಾರು ಗೆಲ್ಲುತ್ತಾರೆ, ಗೆದ್ದವರಿಂದ ಊರ ಗತಿ ಏನಾಯಿತು? ಹಳ್ಳಿ ಜನರಿಗೆ ತಾವು ಮಾಡಿದ ತಪ್ಪಿನ ಅರಿವಾಯಿತೇ. ಇದನ್ನೆಲ್ಲಾ ತಿಳಿಯಲು ಚಿತ್ರಮಂದಿರಕ್ಕೆ ಬರಬೇಕು.

     ಮೊದಲ ಚಿತ್ರದಲ್ಲೆ ಸ್ಟಾರ್ ನಟನಂತೆ ಆಕ್ಷನ್, ಅಭಿನಯ ಎರಡರಲ್ಲೂ ಸೈ ಅನಿಸಿಕೊಂಡಿರುವ ನಾಯಕ ಸತೀಶ್‌ಗೆ ಚಿತ್ರರಂಗದಲ್ಲಿ ಭವಿಷ್ಯವಿದೆ. ಅದೇ ರೀತಿ ನಾಯಕಿ ಜಾಹ್ಮವಿ ತಾನು ಕೂಡ ಕಡಿಮೆಯಿಲ್ಲವೆಂದು ಸಾಥ್ ನೀಡಿದ್ದಾರೆ. ಉಳಿದಂತೆ ಕಾಮಿಡಿ ಕಿಲಾಡಿಗಳು ಕಲಾವಿದರುಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಮಾಸ್‌ಮಾದ-ವಿನೋಧ್ ಸಾಹಸಗಳು ಜಬರ್‌ದಸ್ತ್ ಆಗಿದೆ. ಬಿ.ಎನ್.ಶಿಲ್ಪಾ ನಿರ್ಮಾಣದಲ್ಲಿ ಸಿನಿಮಾವು ಮೂಡಿಬಂದಿದೆ.

****

 

Copyright@2018 Chitralahari | All Rights Reserved. Photo Journalist K.S. Mokshendra,