ಶಿವಾಜಿ ಸುರತ್ಕಲ್ನ ೧೩೧ನೇ ಕೇಸ್
‘ಶಿವಾಜಿ ಸುರತ್ಕಲ್’ದಲ್ಲಿ ೧೩೦ ಕೇಸ್‌ಗಳನ್ನು ಪರಿಹರಿಸಿ ಕುತೂಹಲ ಮೂಡಿಸಿದ್ದ ನಿರ್ದೇಶಕ ಆಕಾಶ್‌ಶ್ರೀವತ್ಸ ‘ಶಿವಾಜಿಸುರತ್ಕಲ್-೨’ದಲ್ಲೂ ೧೩೧ ಕೇಸ್‌ನೊಂದಿಗೆ ಕ್ಷಣ ಕ್ಷಣಕ್ಕೂ ಅದನ್ನೆ ಮುಂದುವರೆಸಿಕೊಂಡು ಹೋಗಿದ್ದಾರೆ. ಪತ್ತೆದಾರಿ ಶೈಲಿಯ ಚಿತ್ರದಲ್ಲಿ ಸರಣಿ ಕೊಲೆಯ ಹಿಂದಿರುವ ಆಸಾಮಿ ಯಾರು? ಎಂಬುದನ್ನು ತನಿಖೆ ಮಾಡುವುದೇ ಶಿವಾಜಿಗೆ ದೊಡ್ಡ ಟಾಸ್ಕ್ ಆಗಿರುತ್ತದೆ. ಪತ್ನಿಯನ್ನು ಕಳೆದುಕೊಂಡಿದ್ದ ಆತನಿಗೆ ಮಗಳು ಬರುತ್ತಾಳೆ ತನ್ನ ಮಾತಿಗೆ ಬೆಲೆ ಕೊಡಲಿಲ್ಲವೆಂಬ ಕಾರಣಕ್ಕೆ ಅಪ್ಪ ವಿಜೇಂದರ್ ಮುನಿಸು ಮರೆತು ಮಗನಿಗೆ ಹತ್ತಿರವಾಗಲು ಬಯಸುತ್ತಿರುತ್ತಾರೆ. ಶಿವಾಜಿ ಕೇವಲ ಒಂದು ಮರ್ಡರ್ ಮಿಸ್ಟರ್ ಅಲ್ಲದೆ ಕುಟುಂಬದ ಸಂಬಂಧಗಳನ್ನು ತೋರಿಸಲಾಗಿದೆ. ತಂದೆ-ಮಗಳು, ಅಪ್ಪ-ಮಗ ಹೀಗೆ ಎರಡು ಟ್ರ್ಯಾಕ್‌ಗಳು ಚಿತ್ರಕೊಂದು ಭಾವನಾತ್ಮಕ ಟಚ್ ಕೊಡುತ್ತದೆ.
. ಮೊದಲ ಭಾಗದಲ್ಲಿ ಪ್ರಶ್ನೆಯಾಗಿ ಉಳಿದುಕೊಂಡಿದ್ದ ಒಂದಷ್ಟು ಪ್ರಶ್ನೆಗಳಿಗೆ ಇದರಲ್ಲಿ ದೃಶ್ಯಗಳೊಂದಿಗೆ ಉತ್ತರವನ್ನು ಕೊಡಲಾಗಿದೆ. ಹೀಗೆ ಥ್ರಿಲ್ಲರ್ ತಿರುವುಗಳು ಸಿನಿಮಾದ ಅಚ್ಚುಕಟ್ಟಿಗೆ ಸರಿಸಮ ಅನಿಸಿದೆ.
ಅಪರಾಧವನ್ನು ಭೇದಿಸುವ ಬುದ್ದಿವಂತ ತನಿಖಾಧಿಕಾರಿಯಾಗಿ ರಮೇಶ್‌ಅರವಿಂದ್ ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ಇವರ ಮೇಲಧಿಕಾರಿಯಾಗಿ ಮೇಘನಾಗಾಂವ್ಕರ್, ಕಲ್ಪನೆಗಳಲ್ಲಿ ಕಾಡುವ ರಾಧಿಕಾನಾರಯಣ್, ಸಿರಿ ಪಾತ್ರದಲ್ಲಿ ಬೇಬಿಆರಾಧ್ಯ, ತಂದೆಯಾಗಿ ನಾಸೀರ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹಾಡುಗಳಿಗಿಂತೆ ಹಿನ್ನಲೆ ಸಂಗೀತ ಒದಗಿಸಿರುವ ಜ್ಯೂಡೋಸ್ಯಾಂಡಿ ಗಮನ ಸೆಳೆಯುತ್ತಾರೆ. ಒಟ್ಟಿನಲ್ಲಿ ಸನ್ನಿವೇಶಗಳು ಒಂದಕ್ಕೊಂದು ಲಿಂಕ್‌ನೊಂದಿಗೆ ನೋಡುವುದು ಹಿತ ಅನಿಸುತ್ತದೆ. ಸೆಸ್ಪೆನ್ಸ್ ಚಿತ್ರ ಇಷ್ಟಪಡುವವರಿಗೆ ಇದು ಹೇಳಿ ಮಾಡಿಸಿದೆ ಎನ್ನಬಹುದು.
****