ಸಸ್ಪೆನ್ಸ್ ಥ್ರಿಲ್ಲರ್ ಪರಿಮಳ ಡಿಸೋಜಾ ****
‘ಪರಿಮಳ ಡಿಸೋಜ’ ಚಿತ್ರವು ಸೆಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಸುಂದರವಾದ ಕುಟುಂಬದಲ್ಲಿ ಸೊಸೆಯಾಗಿ ಬರುವ ಪರಿಮಳ ಡಿಸೋಜ ಕ್ರಿಶ್ಚಿಯನ್ ಹುಡುಗಿಯಾದರೂ ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡುವುದನ್ನು ರೂಢಿ ಮಾಡಿಕೊಂಡಿರುತ್ತಾಳೆ. ಒಂದು ದಿನ ಭಿಕ್ಷುಕನಿಗೆ ದಾನ ಮಾಡುವಾಗ, ಆತ ಈಕೆಯಲ್ಲಿ ತನ್ನ ಅಮ್ಮನ ಪ್ರತಿರೂಪವನ್ನು ಕಾಣುತ್ತಾನೆ. ಚಿಕ್ಕ ವಯಸ್ಸಿನಲ್ಲಿ ಅಮ್ಮನನ್ನು ಕಳೆದುಕೊಂಡಿದ್ದರಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡು ಭಿಕ್ಷುಕನಾಗಿರುತ್ತಾನೆ. ಹೀಗಿರುವಾಗ ಪರಿಮಳ ಮರಣ ಹೊಂದುತ್ತಾಳೆ. ಅದು ಕೊಲೆ ಅಂತ ಕಂಡುಬಂದಾಗ ತನಿಖೆಯ ಹಾದಿ ಶುರುವಾಗುತ್ತದೆ. ಆದರೆ ಕೊಲೆಯನ್ನು ಮಾಡಿದವರು ಯಾರು? ಯಾಕೆ ಮಾಡಿದರು. ಯಾರಲ್ಲೂ ವಿರೋಧ ಕಟ್ಟಿಕೊಳ್ಳದ ಈಕೆಯನ್ನು ಹತ್ಯೆ ಮಾಡುವಂತ ಪ್ರಮೇಯವಾದರೂ ಏನು? ಹೀಗೆಲ್ಲಾ ಅನುಮಾನಗಳ ಹುತ್ತದಲ್ಲಿ ಇರುವಾಗ ಇನ್ಸ್ ಪೆಕ್ಟರ್ ವಿಜಯಲಕ್ಷೀ ತನಿಖೆ ನಡೆಸಿ ಹೇಗೆ ಅಪರಾಧಿಗಳನ್ನು ಕಂಡು ಹಿಡಿಯುತ್ತಾಳೆ ಎನ್ನುವುದು ಒನ್ ಲೈನ್ ಸ್ಟೋರಿಯಾಗಿದೆ.
ಡಾ.ಗಿರಿಧರ್ ಗಟ್ಟಿಯಾದ ಸನ್ನಿವೇಶಗಳನ್ನು ಸೃಷ್ಟಿಸಿ ಅದನ್ನು ನೋಡುಗರಿಗೆ ಕುತೂಹಲ ಬರುವಂತೆ ಮಾಡುವಲ್ಲಿ ಯಶಸ್ಸು ಕಂಡಿದ್ದಾರೆ. ಶೀರ್ಷಿಕೆ ಹೆಸರಿನಲ್ಲಿ ಪೂಜಾರಾಮಚಂದ್ರ ಅಭಿನಯ ಪರವಾಗಿಲ್ಲ. ತಾಯಿಯಾಗಿ ಭವ್ಯ, ಚಂದನಾಶ್ರೀನಿವಾಸ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಡಾ.ನಾಗೇಂದ್ರಪ್ರಸಾಸ್ ಸಾಹಿತ್ಯ, ಕ್ರಿಸ್ಟಫರ್‌ಜೇಸನ್ ಸಂಗೀತದಲ್ಲಿ ಹಾಡುಗಳು ಕೇಳುವಂತಿದೆ. ತಾಯಿ ಸಾಂಗ್‌ದಲ್ಲಿ ಸೆಲಬ್ರಟಿಗಳ ಫೋಟೋ ಬಳಸಿರುವುದು ಅರ್ಥಪೂರ್ಣವಾಗಿದೆ.
****