Aggrasena.Reviews

Friday, June 23, 2023

124

ಹಳ್ಳಿ ಬದುಕಿನ ಅಗ್ರಸೇನಾ

      ಅಪ್ಪ ಮಗನ ಬಾಂಧವ್ಯ, ಹಳ್ಳಿ-ಪಟ್ಟಣ ನಡುವಿನ ಕಥೆಯನ್ನು ‘ಅಗ್ರಸೇನಾ’ ಚಿತ್ರದಲ್ಲಿ ತೋರಿಸಲಾಗಿದೆ. ರಾಮದೇವನಪುರ ಜನರು ಪಟ್ಟಣಕ್ಕೆ ವಲಸೆ ಹೋಗಬಾರದು. ಇಲ್ಲಿದ್ದುಕೊಂಡೇ ಸುಖವಾಗಿ ಜೀವನ ಕಾಣಬೇಕೆಂದು ಕನಸು ಕಾಣುವ ಊರಿನ ಮುಖಂಡ. ಮಗ ಅಗಸ್ತ್ಯ ಯಾವುದೇ ಕಾರಣಕ್ಕೂ ಸಿಟಿಗೆ ಹೋಗುವುದಿಲ್ಲವೆಂದು ಮಾತು ತೆಗೆದುಕೊಂಡಿರುತ್ತಾರೆ. ಮುಂದೆ ಆರೋಗ್ಯದಲ್ಲಿ ಏರುಪೇರು ಬಂದಾಗ ಅಪ್ಪನನ್ನು ಒಳ್ಳೆಯ ಆಸ್ಪತ್ರೆಗೆ ಸೇರಿಸಲು ಸಿಟಿಗೆ ಹೋಗುವಂತಹ  ಸ್ಥಿತಿ ಬರುತ್ತದೆ. ಆಗ ಅಮರ್ ಎಂಟ್ರಿಯಾಗಿ ಅಗಸ್ತ್ಯನ ತಂದೆಯನ್ನು ಪಟ್ಟಣಕ್ಕೆ ಸೇರಿಸಿ ಯೋಗಕ್ಷೇಮ ನೋಡಿಕೊಳ್ಳುವ ಜವಬ್ದಾರಿ ಹೊತ್ತುಕೊಳ್ಳುತ್ತಾನೆ.

      ಸುಖ ಜೀವನ ನಡೆಸುವ ಪ್ರವೃತ್ತಿ ಹೊಂದಿರುವ ಅಮರ್‌ಗೆ ಮುಖಂಡರನ್ನು ಯಾವ ರೀತಿ ನೋಡಿಕೊಳ್ಳುತ್ತಾನೆ. ಅಂತಿಮವಾಗಿ ಅಮರ್ ಕಲಿಯುವ ಪಾಠವೇನು? ಎಲ್ಲವನ್ನು ತಿಳಿಯಲು ಚಿತ್ರಮಂದಿರಕ್ಕೆ ಬರಬೇಕು. ಮೊದಲ ನಿರ್ದೇಶನದಲ್ಲೇ ಮುರುಗೇಶ್‌ನಿರಾಣಿ ಅಚ್ಚುಕಟ್ಟಾದ ಚಿತ್ರಕಥೆಯನ್ನು ಸಿದ್ದಪಡಿಸಿರುವುದು ತೆರೆ ಮೇಲೆ ಕಾಣಿಸುತ್ತದೆ.

      ಅಮರ್, ವಿರಾಜ್ ನಾಯಕರುಗಳಾಗಿ ಭವಿಷ್ಯವಿದೆ. ರಚನಾದಶರಥ ನಾಯಕಿ. ಹಿರಿಯ ಕಲಾವಿದರಾದ ರಾಮಕೃಷ್ಣ ಪಾತ್ರಕ್ಕೆ ಜೀವ ತುಂಬಿದ್ದಾರೆ. ಉಳಿದಂತೆ ಭಜರಂಗಿ ಹರ್ಷ, ಭಾರತಿಹೆಗಡೆ ನಟಿಸಿದ್ದಾರೆ. ಎಂ.ಎಸ್.ತ್ಯಾಗರಾಜು ಸಂಗೀತದಲ್ಲಿ ಎರಡು ಹಾಡುಗಳು ಕೇಳಬಲ್. ಆರ್.ಪಿ.ರೆಡ್ಡಿ ಛಾಯಾಗ್ರಹಣ, ವಿಜಯ್.ಎಂ ಸಂಕಲನ ಇದಕ್ಕೆ ಪೂರಕವಾಗಿದೆ. ಮಮತಾಜಯರಾಮರೆಡ್ಡಿ ಬಂಡವಾಳ ಹೂಡಿದ್ದಾರೆ. ಸಿನಿಮಾವನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.

****

 

Copyright@2018 Chitralahari | All Rights Reserved. Photo Journalist K.S. Mokshendra,