ಮೆಡಿಕಲ್ ಮಾಫಿಯಾ ಕುರಿತಾದ ಮಧುರಕಾವ್ಯ
‘ಮಧುರಕಾವ್ಯ’ ಸಿನಿಮಾದ ಕಥೆಯು ಆರ್ಯುವೇದ ಮತ್ತು ಅಲೋಪಥಿ ವೈದ್ಯ ಪದ್ದತಿಯ ನಡುವೆ ಆಗಾಗ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ. ಇಂತಹ ಸಂಘರ್ಷದಿಂದ ಪರಿಣಾಮ ಏನಾಗುತ್ತದೆ? ಹಾಗೆಯೇ ಮೆಡಿಕಲ್ ಮಾಫಿಯಾ ಹೇಗೆ ಆರ್ಯುವೇದವನ್ನು ನಾಶ ಮಾಡುತ್ತವೆ. ಪಾರಂಪರಿಕವಾಗಿ ಜನರ ಸೇವೆ ಮಾಡಿಕೊಂಡು ಬಂದಿರುವ ನಾಟಿ ವೈದ್ಯರನ್ನು ತುಳಿಯುವ ರೀತಿ, ಪುರಾತನವಾದ ಆರ್ಯುವೇದವನ್ನು ಉಳಿಸಬೇಕು. ನಾಟಿ ವೈದ್ಯ ಪದ್ದತಿ ಬೆಳಸಬೇಕು ಅಂತ ಹೇಳ ಹೊರಟಿದೆ.
ಮೂಲತ: ನಾಟಿ ವೈದ್ಯರಾಗಿರುವ ಮಧುಸೂದನ್ ಕ್ಯಾತನಹಳ್ಳಿ ಕಥೆ,ಚಿತ್ರಕಥೆ,ನಿರ್ದೇಶನ ಹಾಗೂ ಮುಖ್ಯ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಚಿತ್ರದಲ್ಲಿ ನಾಯಕಿ ಇಲ್ಲದೆ ಇರುವುದು ವಿಶೇಷ. ತಾಯಿಯಾಗಿ ಯಶೋಧ, ಖಳನಾಗಿ ರಾಜಕುಮಾರ್‌ನಾವಿಕ, ನಾಚಪ್ಪ, ಜಗನ್ನಾಥಶೆಟ್ಟಿ ಮುಂತಾದವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸತೀಶ್‌ಮೌರ್ಯ ಮೂರು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಇಂತಹ ಅಂಶಗಳ ಕುರಿತಾದ ಸಿನಿಮಾವು ಬಂದಿರುವುದರಿಂದ ಇದರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದಲ್ಲಿ ಒಮ್ಮೆ ನೋಡಲು ಅಡ್ಡಿ ಇಲ್ಲ.
***