ಕುತೂಹಲ ಹುಟ್ಟಿಸುವ ಡೇವಿಡ್
‘ಡೇವಿಡ್’ ಚಿತ್ರವು ಸೆಸ್ಪೆನ್ಸ್ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ. ಸಿಲಿಕಾನ್ ಸಿಟಿಯಲ್ಲಿ ಎಲ್ಲವು ಆಧುನಿಕ ಮತ್ತು ಆಡಂಬರ. ಕಥೆಯಲ್ಲಿ ಶರ್ಮಾ ಗ್ರೂಫ್ ಆಫ್ ಕಂಪೆನಿಯ ಯಜಮಾನನ ಕೊಲೆಯಾಗುತ್ತದೆ. ಸುಂದರಿಯಾಗಿದ್ದ ಮಗಳ ಅಪಹರಣವಾಗುತ್ತದೆ. ಎರಡು ಘಟನೆಗಳು ಅಚ್ಚರಿ ತಂದು, ನೋಡುಗರಿಗೆ ಕುತೂಹಲ ಕೆರಳಿಸುತ್ತದೆ. ಪ್ರಾರಂಭದಲ್ಲಿ ಹುಡುಗರ ತುಂಟಾಟ, ವಿರಾಮದ ನಂತರ ಕೊಲೆಗಾರನ ಬೇಟೆಯಾಡುವ ಸನ್ನಿವೇಶಗಳು ಬರುತ್ತದೆ. ಹುಡುಗರ ತಮಾಷೆಯ ಹುಚ್ಚಾಟದಲ್ಲಿ ಅಪಾಯ ಒದಗಿ ಬರುತ್ತದೆ. ಮತ್ತೋಂದು ಕಡೆ ಜಾಲಿ ಮಾಡಲು ಹೋಗಿ ಹಣದ ಸಲುವಾಗಿ ಅಪಹರಣ ನಂತರ ಅಪಾಯಕ್ಕೆ ಸಿಲುಕುತ್ತಾರೆ. ಕೊನೆಗೆ ಎರಡನ್ನು ಹೇಗೆ ಭೇದಿಸುತ್ತಾರೆ ಎಂಬುದನ್ನು ತಿಳಿಯಲು ಚಿತ್ರಮಂದಿರಕ್ಕೆ ಬರಬೇಕು.
ಶ್ರೇಯಸ್‌ಚಿಂಗಾ ಮೊದಲಬಾರಿ ನಿರ್ದೇಶನ ಮಾಡುವ ಜತೆಗೆ ನಾಯಕನಾಗಿ ಸೈ ಅನಿಸಿಕೊಂಡಿದ್ದಾರೆ. ನಾಯಕಿ ಸಾರಾ.ಹರೀಶ್ ಪರದೆ ಮೇಲೆ ಚೆಂದ ಕಾಣಿಸುತ್ತಾರೆ. ಬುಲೆಟ್‌ಪ್ರಕಾಶ್ ಕೊನೆ ಚಿತ್ರವೆಂದು ಹೇಳಲು ಖೇದವಾಗುತ್ತದೆ. ಉಳಿದಂತೆ ಅವಿನಾಶ್, ಪ್ರತಾಪ್‌ನಾರಾಯಣ್, ರಾಕೇಶ್‌ಅಡಿಗ, ಕಾವ್ಯಶಾ ಮುಂತಾದವರು ನಟಿಸಿದ್ದಾರೆ. ಪ್ರದೀಪ್.ಹೆಚ್‌ಟಿ, ಉಮೇಶ್.ಎಂಎಲ್‌ಪಿ, ಸ್ವೀವ್‌ರೈಸ್, ಶೈಲಜಾಬಾಲಸುಬ್ರಮಣ್ಯ, ಧನರಾಜಬಾಬು.ಜೆ ಸಹ ನಿರ್ಮಾಪಕರುಗಳಾಗಿ ಗುರುತಿಸಿಕೊಂಡಿದ್ದಾರೆ. ಹಾಲಿವುಡ್‌ನ ಸ್ಟೀವ್‌ರೈಸ್ ಹಾಗೂ ಆರ್.ದೇವೇಂದ್ರನಾಯ್ಕು ಛಾಯಾಗ್ರಹಣ ಕಣ್ಣಿಗೆ ತಂಪು ಕೊಡುತ್ತದೆ. ಸತೀಶ್‌ಬಾಬು ಹಿನ್ನಲೆ ಸಂಗೀತ ಗಮನ ಸೆಳೆಯುತ್ತದೆ. ಸಂಕಲನ ಸಿದ್ದಾಥ್.ಎಂ.ವ್ಯಾವ್ಲೆ, ಸಾಹಸ ಚೇತನ್‌ಡಿಸೋಜ-ಡಿಫರೆಂಟ್ ಡ್ಯಾನಿ ಅವರದಾಗಿದೆ. ವಿಶೇಷ ಸನ್ನಿವೇಶಗಳು ಇರುವುದು ಪ್ಲಸ್ ಪಾಯಿಂಟ್ ಆಗಿದೆ.
****