ವೀರಗಾಸೆ ಹುಡುಗನ ಕಥೆ ವ್ಯಥೆ
ಹೊಸಬರ ‘ಪರಂವ’ ಸಿನಿಮಾವು ವೀರಗಾಸೆಯನ್ನೆ ವೃತ್ತಿಯನ್ನಾಗಿ ಬಳಸಿಕೊಂಡ ಕುಟುಂಬದ ಕಥೆಯು ಇಂದಿನ ಯುವ ಜನಾಂಗದ ಜೀವನ ಶೈಲಿಯನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಹಳ್ಳಿ ಹುಡುಗನ ಜೀವನದಲ್ಲಿ ನಡೆಯುವ ಸನ್ನಿವೇಶಗಳು, ಬಡತನದಿಂದ ಬಂದ ಹುಡುಗ, ಕಷ್ಟ ಪಡುವ ತಂದೆ, ಕಾಲೇಜು ಓದುವ ಹಂತಕ್ಕೆ ಬಂದ ಮೇಲೆ ಆತ ಏನಾಗುತ್ತಾನೆ. ಅಪ್ಪನ ಆಸೆಯಂತೆ ದಸರಾ ಸಂಭ್ರಮದಲ್ಲಿ ವೀರಗಾಸೆ ನೃತ್ಯ ಪ್ರದರ್ಶಿಸುತ್ತಾನಾ ಎಂಬುದು ಒಂದಳೆ ಸಾರಾಂಶವಾಗಿದೆ.
ನಿರ್ದೇಶಕ ಸಂತೋಷ್‌ಕೈದಾಳಗೆ ಹೊಸ ಅನುಭವ ಎನ್ನುವಂತೆ ತೋರದೆ ಸುಂದರವಾಗಿ ಚಿತ್ರಕಥೆಯನ್ನು ಸೃಷ್ಟಿಸಿರುವುದು ಪರದೆ ಮೇಲೆ ಚೆನ್ನಾಗಿ ಕಾಣಿಸುತ್ತದೆ. ನಾಯಕ ಪ್ರೇಮ್‌ಸಿಡೇಗಲ್, ನಾಯಕಿ ಮೈತ್ರಿ ತಮಗೆ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಉಳಿದಂತೆ ಗಣೇಶ್‌ಹೆಗ್ಗೋಡು ಗಣೇಶ್‌ಮಾಸ್ಟರ್, ಅವಿನಾಶ್, ಶೃತಿ, ಮಾಸ್ಟರ್ ಮಿಥುನ್, ಮಾಸ್ಟರ್ ಭುವನ್ ಮೊದಲಾದವರು ಬಣ್ಣ ಹಚ್ಚಿದ್ದಾರೆ. ಅಪರಿಜಿತ್-ಜೋಸ್‌ಜೊಸ್ಸಿ ಸಂಗೀತ, ಪೂರ್ಣಚಂದ್ರತೇಜಸ್ವಿ ಹಿನ್ನಲೆ ಶಬ್ದ, ಎ.ಎಸ್.ಶೆಟ್ಟಿ ಛಾಯಾಗ್ರಹಣ ಇದೆಲ್ಲವೂ ಸಿನಿಮಾಗೆ ಪೂರಕವಾಗಿದೆ.