ಲವ್ ಕರಾವಳಿ ಪ್ರೀತಿ ಕಥನ
‘ಲವ್’ ಚಿತ್ರವು ಕರಾವಳಿ ಭಾಗದ ಹಿಂದು ಮುಸ್ಲಿಂ ಕಥೆಯನ್ನು ಒಳಗೊಂಡಿದೆ. ಸ್ವಸಿಕ್ ಕಷ್ಟದಲ್ಲಿದ್ದ ಜೋಯಾಳನ್ನು ರಕ್ಷಿಸುತ್ತಾನೆ. ಆತನಿಗೆ ಸೋಲುವ ಆಕೆ ಮೊದಲ ನೋಟದಲ್ಲೇ ಇಷ್ಟಪಡುತ್ತಾಳೆ. ಜಾತಿ ಬೇರೆಯಾಗಿದ್ದರಿಂದ ಇದು ಸಾಧ್ಯವಾಗದು ಅಂತ ಹೇಳಿದರೂ ಅವಳು ಕೇಳದೆ ಇದ್ದ ಕಾರಣ, ಮುಗ್ದ ಪ್ರೀತಿಗೆ ಮನಸೋತು ಮದುವೆ ಆಗಲು ನಿರ್ಧಾರ ಕೈಗೊಳ್ಳುತ್ತಾನೆ. ಇದರಿಂದ ಎರಡು ಕುಟುಂಬದಿಂದ ವಿರೋಧ ವ್ಯಕ್ತವಾಗುತ್ತದೆ. ಮುಂದೆ ಪೋಲೀಸರ ಸಮ್ಮುಖದಲ್ಲಿ ದೂರವಾಗಲು ನಿರ್ಣಯಿಸುತ್ತಾರೆ. ಆದರೆ ಪ್ರೇಮಿಗಳು ಯೋಚನೆ ಬೇರೆಯಾಗಿದ್ದು, ಕೊನೆಗೂ ಸ್ವಸ್ಕಿಕ್‌ನೊಂದಿಗೆ ಮದುವೆ ಆಗುತ್ತದೆ. ಇದಕ್ಕೆ ಮುಸ್ಲಿಂ ಗೆಳೆಯ ಸಹಾಯ ಮಾಡುತ್ತಾನೆ. ಕೆಲಸದ ನಿಮಿತ್ತ ದೂರದ ಊರಿಗೆ ಹೋದಾಗ, ಇಲ್ಲಿ ಜೋಯಾ ಕಾಣೆಯಾಗುತ್ತಾಳೆ. ಇಲ್ಲಿಂದ ಚಿತ್ರವು ಬೇರೆ ತಿರುವು ಪಡೆದುಕೊಳ್ಳುತ್ತದೆ ಅದನ್ನು ತಿಳಿಯಲು ಚಿತ್ರಮಂದಿರಕ್ಕೆ ಬರಬೇಕು.
ಪ್ರಜಯ್‌ಜಯರಾಮ್ ನಾಯಕ, ವೃಷಾಪಾಟೀಲ ನಾಯಕಿ. ಇಬ್ಬರಿಗೂ ನೂತನ ಅವಕಾಶವಾದರೂ ನಟನೆಯಲ್ಲಿ ಸೊರಗಿಲ್ಲ. ಉಳಿದಂತೆ ‘ಕಾಂತಾರ’ದಲ್ಲಿ ಕಾಣಿಸಿಕೊಂಡಿದ್ದ ಪ್ರಭಾಕರ್‌ಕುಂದರ್ ಬ್ರಹ್ಮಾವರ, ಸತೀಶ್‌ಕಾಂತಾರ, ಉಮೇಶ್, ಶ್ರೀಕಾಂತ್‌ತೇಲಿ, ರಾಧಿಕಾಭಟ್, ತಿಲಕ, ಪ್ರಸಾದ್‌ಭಟ್, ಹರೀಶ್‌ಶೆಟ್ಟಿ, ಸೌರಭ್, ರಜತ್‌ಶೆಟ್ಟಿ ತಮಗೆ ನೀಡಿದ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ.
ಶ್ರೀಸಾಯಿ ಕಿರಣ್ ಸಂಗೀತ, ಶಿವಪ್ರಸಾದ್ ಹಿನ್ನಲೆ ಶಬ್ದ, ಸಿದ್ದಾರ್ಥ್ ಛಾಯಾಗ್ರಹಣ ಅಲ್ಲಲ್ಲಿ ಕೆಲಸ ಮಾಡಿದೆ. ಒಮ್ಮೆ ನೋಡಬಹುದಾದ ಚಿತ್ರ ಎನ್ನಲು ಅಡ್ಡಿ ಇಲ್ಲ.
****