ಆಡೊಂದು ದೇವರಾದ ಚಿತ್ರ
ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶನ ಮಾಡಿರುವ ಪಿ.ಹೆಚ್.ವಿಶ್ವ್‌ನಾಥ್ ಅವರ ‘ಆಡೇ ನಮ್ ಗಾಡು’ ಚಿತ್ರವು ಮೂಡ ನಂಬಿಕೆಯನ್ನೇ ಬಂಡವಾಳವಾಗಿಟ್ಟುಕೊಂಡು ಅದರಿಂದ ಮುಗ್ದ ಜನರನ್ನು ಹೇಗೆ ವಂಚಿಸುತ್ತಾರೆ. ಆಡನ್ನು ದೇವರೆಂದು ಪೂಜಿಸಿದಾಗ ಏನೆಲ್ಲಾ ಆಗುತ್ತದೆ. ಅದು ಯಾವ ಹಂತಕ್ಕೆ ತಲುಪುತ್ತದೆ ಎಂದು ಹೇಳುವ ಪ್ರಯತ್ನವನ್ನು ಸನ್ನಿವೇಶಗಳ ಮೊಲಕ ತೋರಿಸುವ ಪ್ರಯತ್ನ ಮಾಡಲಾಗಿದೆ. ನಾಲ್ವರು ಯುವಕರಿಗೆ ಆಕಸ್ಮಿಕವಾಗಿ ಸಿಗುವ ಆಡು ಕೆಲವೊಂದು ಸಮಯದಲ್ಲಿ ಅಪಾಯದಿಂದ ಪಾರು ಮಾಡುತ್ತದೆ.
ತಾನೇಗೆ ಒಲಿದು ಬಂದ ಅದೃಷ್ಟವನ್ನು ಇವರುಗಳು ಇದನ್ನೆ ಉಪಯೋಗಿಸಿಕೊಂಡು ಲಾಭ ಮಾಡಲು ಚಿಂತನೆ ನಡೆಸುತ್ತಾರೆ. ಒಬ್ಬ ಮಾತ್ರ ಒಪ್ಪದೆ ಹೋದರೆ ಕೊನೆಗೂ ಅವರೊಂದಿಗೆ ಬೆರೆಯುತ್ತಾನೆ. ಇದರಿಂದ ಸಾಕಷ್ಟು ದುಡ್ಡು ಬಂದರೂ ಸ್ವಾಮೀಜಿ ಎಂಟ್ರಿಯಿಂದ ಗಳಿಸಿದ ಹಣವೆಲ್ಲವೂ ಕಳೆದುಕೊಳ್ಳಬೇಕಾದ ಪರಿಸ್ಥತಿ ಬರುತ್ತದೆ. ಅನ್ಯಾಯದ ದುಡ್ಡು ಯಾವತ್ತು ನಮ್ಮೊಂದಿಗೆ ಇರುವುದಿಲ್ಲ. ದುಡಿದ ಹಣವೇ ಶಾಶ್ವತ ಎಂಬ ಸಂದೇಶವು ಚಿತ್ರದಲ್ಲಿದೆ.
‘ರಾಮ ರಾಮ ರೇ’ ಸಿನಿಮಾದ ಮೂಲಕ ಗುರುತಿಸಿಕೊಂಡಿದ್ದ ನಟರಾಜ್ ನಾಯಕ. ಇವರೊಂದಿಗೆ ಮಂಜುನಾಥ್ ಜಂಬೆ, ಅಜಿತ್‌ಬೊಪ್ಪನಹಳ್ಳಿ, ಅನೂಪ್‌ಶೂನ್ಯ, ಸಾರಿಕಾರಾವ್, ಬಿ.ಸುರೇಶ್ ಮುಂತಾದವರು ಅಭಿನಯಿಸಿದ್ದಾರೆ. ಸ್ವಾಮಿನಾಥನ್ ಸಂಗೀತದಲ್ಲಿ ಹಾಡುಗಳು ಕೇಳಬಲ್. ಪಿ.ಕೆ.ಹೆಚ್.ದಾಸ್ ಛಾಯಾಗ್ರಹಣ, ಬಿ.ಎಸ್.ಕೆಂಪರಾಜು ಸಂಕಲನ ಇವೆಲ್ಲವೂ ದೃಶ್ಯಗಳಿಗೆ ಪೂರಕವಾಗಿದೆ.
****