Vesha.Reviews

Friday, October 13, 2023

266

ನಾನಾ ವೇಷದಾರಿಗಳು ****

      ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ವೇಷ’ ಚಿತ್ರವು ನಾನಾ ವೇಷದಾರಿಗಳ ಕಥೆಯಾಗಿದೆ. ಕಿರುಚಿತ್ರಗಳನ್ನು ನಿರ್ದೇಶನ ಮಾಡಿರುವ ಕೃಷ್ಣನಾಡ್ಪಾಲ್ ಮೊದಲ ಪ್ರಯತ್ನದಲ್ಲಿಯೇ ಹೊಸ ತರಹದ ಸನ್ನಿವೇಶಗಳನ್ನು ಸೃಷ್ಟಿಸಿರುವುದು ಪರದೆ ಮೇಲೆ ಚೆನ್ನಾಗಿ ಕಾಣಿಸುತ್ತದೆ.  ಜೀವನದಲ್ಲಿ ಎಲ್ಲರೂ ಒಂದಲ್ಲಾ ಒಂದು ರೀತಿ ವೇಷ ಹಾಕುತ್ತಾರೆ. ಕಥೆಯಲ್ಲಿ ನಾಯಕನಿಗೆ ಯಾವುದೋ ಸಂದರ್ಭದಲ್ಲಿ ವೇಷ ಹಾಕುವ ಹಾಗೆ ಮಾಡುತ್ತದೆ. ಇದರಿಂದ ಮುಂದೇನು ಆಗುತ್ತದೆ ಎಂಬುದನ್ನು ಕುತೂಹಲದೊಂದಿಗೆ ತೋರಿಸಲಾಗಿದೆ. ಹೆಸರಿಗೆ ತಕ್ಕಂತೆ ನಾವೆಲ್ಲರೂ ವೇಷದಾರಿಗಳು ಅಂತ ಸಂದೇಶದಲ್ಲಿ ಅರ್ಥಪೂರ್ಣವಾಗಿ ಹೇಳಲಾಗಿದೆ.

ನಿರ್ಮಾಣ ಮಾಡಿರುವ ರಾಘವೇಂದ್ರ ನಾಯಕನಾಗಿ ಉಜ್ವಲ ಭವಿಷ್ಯವಿದೆ. ನಿಧಿಮಾರೋಲಿ ಮತ್ತು ಸೌಖ್ಯಗೌಡ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಖಳನಾಗಿ ಜಯ್‌ಶೆಟ್ಟಿ ಉಳಿದಂತೆ ರಾಜಲಿ, ಶಿಲ್ಪಕುಮಟಾ ಮುಂತಾದವರು ತಮಗೆ ನೀಡಿದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉತ್ತಮ್‌ಸಾರಂಗ್ ಸಂಗೀತದಲ್ಲಿ ಹಾಡುಗಳು ಕೇಳಬಲ್. ಜಾಗ್ವಾರ್‌ಸಣ್ಣಪ್ಪ ಸಾಹಸ ಮೈ ಜುಂ ಅನಿಸುತ್ತದೆ. ಒಟ್ಟಾರೆ ಒಮ್ಮೆ ಅಡ್ಡಿಯೇನಿಲ್ಲ.

****

 

Copyright@2018 Chitralahari | All Rights Reserved. Photo Journalist K.S. Mokshendra,