ಘೋಸ್ಟ್ ಚಿತ್ರವಿಮರ್ಶೆ
ನಿರ್ಮಾಣ : ಸಂದೇಶ್ ಪ್ರೊಡಕ್ಷನ್ಸ್
ಸಂದೇಶ್ ಎನ್
ನಿರ್ದೇಶನ : ಶ್ರೀನಿ
ತಂತ್ರ ಪ್ರತಿತಂತ್ರದ ನೇಯ್ಗೆ..
ಈಚೆಗೆ ವೇಗದ ನಿರೂಪಣೆಯ ವಿಭಿನ್ನ ನೆಲೆಯಲ್ಲಿ ಸಾಗುವ ಕಥೆಗಳು ಸೈ ಎನಿಸಿಕೊಳ್ಳುತ್ತವೆ. ಅಂತಹ ಸಾಲಿಗೆ ಘೋಸ್ಟ್ ಖಂಡಿತಾ ಸೇರುತ್ತದೆ.
ಡಾ.ಶಿವರಾಜ್ ಕುಮಾರ್ ನಿಜವಾಗಿ ಏಕತಾನತೆಯಿಂದ ಹೊರಬಂದಿರುವ ಚಿತ್ರವಿದು. ಹಾಗಾಗಿ ಅವರೀಗ ಹೊಸತನದಲ್ಲಿ ಧುಮ್ಮಿಕ್ಕಿ ಹರಿಯುವ ನದಿಯಾಗಿದ್ದಾರೆ.
ಗ್ಯಾಂಗ್ ಸ್ಟರ್ ಒಬ್ಬ ಪ್ರಮುಖ ಜೈಲನ್ನು ಹೈಜಾಕ್ ಮಾಡುವ ಮೂಲಕ ವ್ಯವಸ್ಥೆಗೆ ಸವಾಲಾಗುತ್ತಾನೆ. ಅದು ಏಕೆ ಏನು ಎಂಬುದರ ಸುತ್ತ ಕಥೆ ಹೆಣೆಯಲಾಗಿದೆ.
ಹಾಗೆಯೇ ಪೊಲೀಸ್ ಅಧಿಕಾರಿ ಹಾಗೂ ಗ್ಯಾಂಗ್ ಸ್ಟರ್ ನಡುವೆ ತಂತ್ರ ಪ್ರತಿತಂತ್ರದ ಸವಾಲುಗಳ ಆಟ ನಡೆಯುತ್ತದೆ. ಅದರ ವೇಗಕ್ಕೆ ಪ್ರೇಕ್ಷಕ ಫಿದಾ ಆಗುತ್ತಾನೆ.
ನಿಜವಾಗಿ ಹೇಳಬೇಕೆಂದರೆ ದಳವಾಯಿ ಎಂಬ ಭೂಗತ ಲೋಕದ ದೊರೆ ಜೈಲಿನ ಮೇಲೆ ದಾಳಿ ನಡೆಸಿ ಅಲ್ಲಿನ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಆಟದಲ್ಲಿ ಪೊಲೀಸ್ ವ್ಯವಸ್ಥೆ ನಲುಗುತ್ತದೆ.
ತಂತ್ರ ಪ್ರತಿತಂತ್ರದಲ್ಲಿ ಮುಳುಗಿ ಹೋಗುವ ಉನ್ನತ ಪೊಲೀಸ್ ಅಧಿಕಾರಿಯ ಇಂಟಲಿಜೆನ್ಸ್ ನಡೆಯ ಆಟ ಘೋಸ್ಟ್ ತಂತ್ರದ ಮುಂದೆ ನಡೆಯುವುದಿಲ್ಲ..
ಒರಿಜಿನಲ್ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಶಿವಣ್ಣ ಇಷ್ಟವಾಗುತ್ತಾರೆ. ಮಲಯಾಳಂ ನಟ ಜಯರಾಂ ಪಾತ್ರ ವಿಶೇಷವಾಗಿದೆ. ಅರ್ಚನಾ ಜೋಯಿಷ್ ಟಿವಿ ಆಂಕರ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಅನುಪಮ್ ಖೇರ್ ಕೇವಲ ಒಂದೇ ದೃಶ್ಯದಲ್ಲಿ ಕಾಣಿಸಿಕೊಂಡು ನಿರಾಸೆ ಹುಟ್ಟಿಸುತ್ತಾರೆ.
ಮಹೇಂದ್ರ ಸಿಂಹ ಛಾಯಾಗ್ರಹಣ ವಿಶೇಷವಾಗಿದೆ. ಅರ್ಜುನ್ ಜನ್ಯ ಹಿನ್ನೆಲೆ ಸಂಗೀತ ಚಿತ್ರ ನೋಡುವ ಖುಷಿಯನ್ನು ಹೆಚ್ಚಿಸುತ್ತದೆ.