ರೋಚಕ ತಿರುವುಗಳ ತತ್ಸಮ ತದ್ಭವ ****
ಒಂದು ಕೊಲೆ ನಡೆದರೆ ಅದರ ಹಿಂದೆ ಹಲವಾರು ಅನುಮಾನಗಳ ಛಾಯೆ, ನಾಪತ್ತೆಯಾದವರ ಜಾಡಿನ ಹಿಂದಿನ ಸ್ನೇಹ, ಪ್ರೀತಿ, ದ್ವೇಷದ ಸುಳಿಯನ್ನು ತೆರೆದಿಡುವುದೇ ‘ತತ್ಸಮ ತದ್ಭವ’ ಚಿತ್ರದ ಒನ್ ಲೈನ್ ಸ್ಟೋರಿಯಾಗಿದೆ. ಕಥಾನಾಯಕಿ ಆರಿಕಾ ತನ್ನ ಗಂಡ ನಾಪತ್ತೆ ಆಗಿರೋದನ್ನ ಗಮನಿಸಿ ಪೋಲೀಸರ ಬಳಿ ಹೋಗಿ ದೂರು ದಾಖಲು ಮಾಡುತ್ತಾಳೆ. ಠಾಣೆಯ ಅಧಿಕಾರಿ ಅರವಿಂದ್ ತನ್ನ ಸೂಕ್ಷ ನಡೆಯಿಂದಲೇ ಕೇಸಿನ ವಿಚಾರದಲ್ಲಿ ಕಾಣೆಯಾದ ಸಂಜಯ್‌ನನ್ನು ಹುಡುಕಲು ಮುಂದಾಗುತ್ತಾರೆ. ಆತ ಕೆಲಸ ಮಾಡುವ ಕಂಪೆನಿಯಲ್ಲಿ ಅವನ ಒಡನಾಟ,ಮನಸ್ಥಿತಿ, ಮನೆಯಲ್ಲಿ ಪತ್ನಿಯೊಂದಿಗಿನ ಸಂಬಂದ ಹೇಗಿತ್ತು. ಯಾವ ಕಾರಣಕ್ಕೆ ನಾಪತ್ತೆಯಾಗಿರುತ್ತಾನೆ ಅಂತ ಹುಡುಕುತ್ತಿರುವಾಗ ತನ್ನ ಮನೆಯ ಸ್ಟೋರ್‌ದಲ್ಲಿ ಆತ ಹೆಣವಾಗಿರುತ್ತಾನೆ.
. ತಪ್ಪು ಮಾಡಿದವರ ಮೈಂಡ್ ಸೆಟ್ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ಶುರುವಿನಿಂದ ಕೊನೆಯವರೆಗೂ, ಇದರ ಮಧ್ಯೆ ಫ್ಲ್ಯಾಷ್‌ಬ್ಯಾಕ್ ಕೂಡ ತೆರೆದು ಕೊಳ್ಳುತ್ತಾ ಹೋಗುತ್ತದೆ. ಮಗುವಿನ ತಾಯಿ, ಪ್ರೇಯಸಿಯಾಗಿ ಎರಡು ಗುಣಗಳ ಆರಿಕಾ ಹಾಗೂ ಅಕಿರಾ ದ್ವಿಪಾತ್ರಗಳ ಭಾವನೆಗಳ ಸನ್ನಿವೇಶಗಳು ಅಚ್ಚುಕಟ್ಟಾಗಿ ಪರದೆ ಮೇಲೆ ಕಾಣಿಸುತ್ತದೆ.
ನಾಯಕಿ ಮೇಘನಾರಾಜ್ ಗ್ಯಾಪ್ ನಂತರ ಕಾಣಿಸಿಕೊಂಡಿರುವುದು ವಿಶೇಷ. ಇನ್ಸೆಪೆಕ್ಟರ್ ಆಗಿ ಪ್ರಜ್ವಲ್‌ದೇವರಾಜ್ ಪಾತ್ರಕ್ಕೆ ಸೂಟ್ ಆಗಿದ್ದಾರೆ. ಮನಶಾಸ್ತ್ರಜ್ಘೆಯಾಗಿ ಹಿರಿಯ ನಟಿ ಶೃತಿ, ಉಳಿದಂತೆ ಪ್ರಶಾಂತ್‌ನಟನ, ಬಾಲಾಜಿಮನೋಹರ್, ಟಿ.ಎಸ್.ನಾಗಭರಣ, ಗಿರಿಜಾಲೋಕೇಶ್, ವರುಣ್‌ಶ್ರೀನಿವಾಸ್, ರಾಶಿಪೊನ್ನಪ್ಪ ಎಲ್ಲರೂ ಸನ್ನಿವೇಶಗಳಿಗೆ ಜೀವ ತುಂಬಿದ್ದಾರೆ. ಕುತೂಹಲ ಹುಟ್ಟುವಂತೆ ದೃಶ್ಯಗಳನ್ನು ಸೃಷ್ಟಿಸಿರುವ ನಿರ್ದೇಶಕ ವಿಶಾಲ್‌ಅತ್ರೇಯರಿಗೆ ಭವಿಷ್ಯವಿದೆ. ವಾಸುಕಿವೈಭವ್ ಸಂಗೀತ ಅಲ್ಲಲ್ಲಿ ಕೆಲಸ ಮಾಡಿದೆ. ಇದಕ್ಕೆ ಪೂರಕವಾಗಿ ಶ್ರೀನಾಸ್‌ರಾಮಯ್ಯ ಕ್ಯಾಮಾರ ಚೆನ್ನಾಗಿದೆ.
****