ಒಲವೇ ಮಂದಾರ 2 ಚಿತ್ರವಿಮರ್ಶೆ
ಎರಡು ಪ್ರೇಮ ಒಂದೇ ಕಥೆ
ಒಂದೆ ಕಡೆ ಕೆಲಸ ಮಾಡುವ ಎರಡು ಜೀವಗಳು ಬೇಗನೆ ಪ್ರೀತಿಯ ಮಾಯೆಗೆ ಒಳಪಡುವುದುಂಟು..
ಇಲ್ಲಿಯೂ ಹಾಗೆ ಒಂದೇ ಕಚೇರಿಯಲ್ಲಿ ಕೆಲಸ ಮಾಡುವ ಇಬ್ಬರು ಪ್ರೀತಿಸಿ ಮದುವೆಗೆ ಸಜ್ಜಾದಾಗ ಅಚ್ಚರಿಯ ಘಟನೆಗಳು ತೆರೆದುಕೊಳ್ಳುತ್ತವೆ..
ಧೃತಿ ಎಂಬ ಯುವತಿ ಆರ್ಯನ ಮೇಲೆ ಮೋಹಗೊಂಡು ಆತನ ಪ್ರೀತಿಗೆ ತವಕಿಸುತ್ತಾಳೆ. ಆದರೆ ಆರ್ಯ ಅಷ್ಟು ಸುಲಭವಾಗಿ ಪ್ರೀತಿಯಲ್ಲಿ ಬೀಳುವುದಿಲ್ಲ; ಅದಕ್ಕೆ ಬೇರೊಂದು ಕಥೆ ಇರುತ್ತದೆ.
ಅದೇ ಮತ್ತೊಂದು ಪ್ರೇಮ. ಆರ್ಯ ಹಾಗೂ ಭೂಮಿ ಎಂಬಿಬ್ಬರ ಪ್ರೇಮದ ಕಥಾನಕ ಆಸಕ್ತಿ ಹುಟ್ಟಿಸುತ್ತದೆ. ಅವರದು ನಿಜವಾದ ಪ್ರೇಮ ಎಂಬುದನ್ನು ನಿರೂಪಿಸಿರುವುದು ವಿಶೇಷ.
ಪಕ್ಕಾ ಹಳ್ಳಿ ಹುಡುಗನಾಗಿ ಓಡಾಡಿಕೊಂಡಿರುವ ಆರ್ಯ ಪ್ರೇಮಕ್ಕೆ ಬೀಳುತ್ತಾನೆ. ಪ್ರೀತಿಯಲ್ಲಿ ಬಿದ್ದು ವಿಚಿತ್ರವಾಗಿಯೂ ವರ್ತಿಸುತ್ತಾನೆ. ಗೆಳೆಯರು ಮೆಂಟಲ್ ಎಂದು ಭಾವಿಸುತ್ತಾರೆ. ಆದರೆ ಆತನದು ನಿಜವಾದ ಪ್ರೀತಿ ಎಂಬುದು ತಿಳಿದಾಗ ಸಹಾಯಕ್ಕೆ ನಿಲ್ಲುತ್ತಾರೆ.
ಮುಂದೆ ಪ್ರೀತಿಯ ಕಥೆ ಏನಾಗುತ್ತದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಆದರೆ ಆತನ ಪ್ರೀತಿಯ ವರಸೆ ಭಾವುಕವಾಗಿರುತ್ತದೆ ಮತ್ತು ಗಮನ ಸೆಳೆಯುತ್ತದೆ.
ಯುವ ಪ್ರೇಮಿಯಾಗಿ ಸನತ್ ಅವರದು ಅದ್ಭುತ ನಟನೆ. ಪ್ರಜ್ಞಾ ಭಟ್ ಭವಿಷ್ಯದ ನಟಿ ಎನಿಸಿಕೊಳ್ಳುತ್ತಾರೆ. ಹಾಗೆಯೇ ಭವ್ಯ, ಡಿಂಗ್ರಿ ನಾಗರಾಜ್ ಹಾಗೂ ಇತರ ಪಾತ್ರಗಳು ಚಿತ್ರಕ್ಕೆ ಪೂರಕವಾಗಿವೆ