ಪ್ರೀತಿಯ ಮತ್ತೋಂದು ಮುಖ -ಸೈಡ್.ಬಿ
‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿದಲ್ಲಿ ಪ್ರೀತಿಯ ಇನ್ನೋಂದು ಮುಖವನ್ನು ತೋರಿಸಲಾಗಿದೆ. ತನ್ನದಲ್ಲದ ತಪ್ಪಿಗೆ ಜೈಲು ಸೇರುವ ಮನು ಹತ್ತು ವರ್ಷದ ನಂತರ ಮುಂದೇನು ಮಾಡುತ್ತ್ತಾನೆ ಎಂಬುದೇ ಒನ್ ಲೈನ್ ಸ್ಟೋರಿಯಾಗಿದೆ. ಇದರಲ್ಲಿ ನಾಯಕಿ ರುಕ್ಮಣಿವಸಂತ್ ಜೊತೆ ಚೈತ್ರಾ.ಬಿ.ಆಚಾರ್ ಪಾತ್ರವು ಸೇರಿಕೊಳ್ಳುತ್ತದೆ. ತನಗೆ ಅನ್ಯಾಯ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳುತ್ತಾನಾ ಎಂಬ ಕುತೂಹಲಕ್ಕೆ ಉತ್ತರವನ್ನು ಹೇಳಿದ್ದಾರೆ. ಮೊದಲ ಭಾಗದಲ್ಲಿ ಮೃದುವಾಗಿದ್ದ ಮನು ಪಾರ್ಟ್-೨ರಲ್ಲಿ ರಫ್ ಆಗಿದ್ದು, ಮುಖ ಚರ್ಯೆಯೂ ಬದಲಾಗಿದೆ. ಯಾರಿಗಾದರೂ ಮುಲಾಜಿಲ್ಲದೆ ಥಳಿಸುತ್ತಾನೆ. ಇತ್ತ ಕಡೆ ರುಕ್ಮಣಿ ಕಷ್ಟದಲ್ಲಿ ಪತಿಯೊಂದಿಗೆ ಬದುಕು ನಡೆಸುತ್ತಿರುತ್ತಾಳೆ. ಹೀಗಿರುವಾಗ ಅವನ ಬಾಳಿನಲ್ಲಿ ಸುರಭಿ (ಚೈತ್ರಾ) ಪ್ರವೇಶವಾಗುತ್ತದೆ. ಕಳೆದುಕೊಂಡ ಪ್ರೀತಿಯನ್ನು ಇವಳಿಂದ ಮರಳಿ ಪಡೆಯುತ್ತಾನಾ. ಎಲ್ಲದಕ್ಕೂ ಕ್ಲೈಮಾಕ್ಸ್‌ದಲ್ಲಿ ನಿರ್ದೇಶಕ ಹೇಮಂತ್‌ರಾವ್ ಚೆನ್ನಾಗಿ ಹೇಳಿಕೊಂಡು ಹೋಗಿದ್ದಾರೆ.
ಆಮೆಯಂತೆ ಸಾಗಿದರೂ ಚಿತ್ರವು ನೋಡುಗರಿಗೆ ಬೋರ್ ಅನಿಸದಂತೆ ಸಾಗುವುದು ರಕ್ಷಿತ್‌ಶೆಟ್ಟಿ ನಟನೆ. ಎಂದಿನಂತೆ ರುಕ್ಮಣಿವಸಂತ್ ಸರಳವಾಗಿ ಕಾಣಿಸಿಕೊಂಡಿದ್ದಾರೆ. ಸುರಭಿಯಾಗಿ ಚೈತ್ರಾ.ಬಿ.ಆಚಾರ್, ಇವರೊಂದಿಗೆ ಗೋಪಾಲಕೃಷ್ಣದೇಶಪಾಂಡೆ, ರಮೇಶ್‌ಇಂದಿರಾ ಇಲ್ಲಿಯೂ ಬಂದು ಹೋಗುತ್ತಾರೆ. ಚರಣ್‌ರಾಜ್ ಹಿನ್ನಲೆ ಸಂಗೀತ ಪ್ಲಸ್ ಪಾಯಿಂಟ್ ಆಗಿದೆ. ಅದ್ವೈತ್‌ಗುರುಮೂರ್ತಿ ಛಾಯಾಗ್ರಹಣ ಪರವಾಗಿಲ್ಲ. ಲವ್ ಹಾಗೂ ಭಾವನೆಗಳನ್ನು ತೋರ್ಪಡಿಸುವ ದೃಶ್ಯಗಳು ಮನಕಲಕುವಂತಿದೆ. ಭಾಗ೧ ರಂತೆ ಭಾಗ೨ ಸಹ ಎಲ್ಲರಿಗೂ ಇಷ್ಟವಾಗುವಂತ ಚಿತ್ರವೆಂದು ಹೇಳಬಹುದು.
****