ಸುಖ ಸಂಸಾರದಲ್ಲಿ ಹಲವು ಸೂತ್ರಗಳು
ಪತಿ, ಪತ್ನಿ ಮಧ್ಯೆ ಧೋರಣೆ ಬಾರದಿದ್ದರೆ ದಾಂಪತ್ಯ ಜೀವನ ಚೆನ್ನಾಗಿರುತ್ತದೆ ಎಂಬುದಕ್ಕೆ ‘ಅಥಿ ಐ ಲವ್ ಯು’ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಅಕಸ್ಮಾತ್ ಬಾಯಿ ತಪ್ಪಿ ಮಾತನಾಡಿದರೆ ಎಡವಟ್ಟು ಆಗುತ್ತದೆ. ಅದನ್ನ ಸರಿಪಡಿಸಲು ಕಷ್ಟವಾಗುತ್ತದೆ. ಒಂದರ್ಥದಲ್ಲಿ ಮಾತು ಬಲ್ಲವನಿಗೆ ಜಗಳವಿಲ್ಲ, ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎನ್ನುವ ಗಾದೆಯಂತೆ ಚಿತ್ರದಲ್ಲಿ ಅದನ್ನು ಅಳವಡಿಸಲಾಗಿದೆ. ಇಬ್ಬರಲ್ಲಿ ಒಬ್ಬರಾದರೂ ತಗ್ಗಿದರೆ ಜೀವನ ಸುಲಭ ಎಂಬುದನ್ನು ಹೇಳಲಾಗಿದೆ. ಕಥೆಯಲ್ಲಿ ಹೆಂಡತಿ ಗಂಡನಿಗೆ ಕೆಲಸಕ್ಕೆ ಹೋಗುವ ಮುಂಚೆ ತಿಂಡಿ ಸಿದ್ದ ಮಾಡಿಕೊಡಲು ಸಾಮಾನ್ಯ ಜ್ಘಾನವು ಇಲ್ಲದಂತ ಮುಗ್ದೆ. ಎಲ್ಲವನ್ನು ಅವಳಿಗೆ ತಿಳಿ ಹೇಳಿ, ಆಕೆಯ ಕೋಪ ಹೇಗೆ ಶಮನ ಮಾಡಿ, ಅವಳ ಮನಸ್ಸನ್ನು ಯಾವ ರೀತಿ ಗೆಲ್ಲುತ್ತಾನೆ ಎನ್ನುವುದು ಸಿನಿಮಾದ ಸಾರಾಂಶವಾಗಿದೆ.
ನಿರ್ದೇಶಕ ಕಮ್ ನಾಯಕನಾಗಿ ಲೋಕೇಂದ್ರಸೂರ್ಯ ಎರಡು ಜವಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಪತ್ನಿಯಾಗಿ ಶ್ರಾವ್ಯರಾವ್ ನೀಡಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ನಿರ್ಮಾಪಕ ಸೆವನ್‌ರಾಜ್ ನೆರೆಹೊರೆಯ ವ್ಯಕ್ತಿಯಾಗಿ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ. ಅನಂತ್‌ಆರ್ಯನ್ ಸಂಗೀತ ಅಲ್ಲಲ್ಲಿ ಕೆಲಸ ಮಾಡಿದೆ. ದಂಪತಿಗಳ ಸಂಬಂಧವನ್ನು ತಿಳಿಯಲು ಇಂತಹ ಸಿನಿಮಾ ಉದಾಹರಣೆಯಾಗಿದೆ.
****