Kaiva.Film Reviews

Friday, December 08, 2023

123

ರೆಟ್ರೋ ಕೈವ

      ಬೆಂಗಳೂರು ಕರಗದ ಹಿನ್ನಲೆಯಾಗಿಟ್ಟುಕೊಂಡು ಅದರಲ್ಲಿ ಅರಳುವ ಪ್ರೇಮ ಕಥೆಯನ್ನು ‘ಕೈವ’ ಚಿತ್ರದಲ್ಲಿ ತೋರಿಸಲಾಗಿದೆ. ಕರಗ ಮಹೋತ್ಸವ ಹೇಗಿರುತ್ತದೆ. ಯಾವ ರೀತಿ ಹುಟ್ಟಿಕೊಂಡಿತು. ಪ್ರೇಮಕಥೆ ಹೀಗೆ ಎಲ್ಲವನ್ನು ೧೯೮೩-೮೪ರ ಕಾಲಘಟ್ಟದಲ್ಲಿ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ಕೈವ ಜೀವನ ಕಟ್ಟಿಕೊಳ್ಳಲು ಕೈವಾರದಿಂದ ಬೆಂಗಳೂರಿಗೆ ಬಂದಿರುತ್ತಾನೆ. ಹಾಲು ಮಾರಿಕೊಂಡು ಜೀವನ ನಡೆಸುತ್ತಿದ್ದಾತ. ಕರಗ ಉತ್ಸ ಸಂದರ್ಭದಲ್ಲಿ ಮೂಗಿ ಸಲ್ಮಾಳ ಪರಿಚಯ ಪ್ರೀತಿಗೆ ತಿರುಗುತ್ತದೆ. ಇದರ ಮಧ್ಯೆ ಡಾನ್ ಜಯರಾಜ್ ಎಂಟ್ರಿ ಕೊಡುತ್ತದೆ. ಲವ್‌ಗೂ ಭೂಗತಲೋಕಕ್ಕೂ ಏನಿದೆ ಲಿಂಕ್ ಎಂಬುದನ್ನು ತಿಳಿಯಲು ಚಿತ್ರಮಂದಿರಕ್ಕೆ ಬರಬೇಕು. ಮುಂದೆ ಸಲ್ಮಾಳಿಗೆ ಆಸಿಡ್ ಎರಚಿದ ಮೂರು ಜನ ದುಷ್ಟರನ್ನು ಅಟ್ಟಾಡಿಸಿಕೊಂಡು ಕೊಂದು ಹಾಕುತ್ತಾನೆ.

       ತಿಗಳರ ಪೇಟೆಯಲ್ಲಿ ನಡೆದ ಸತ್ಯ ಘಟನೆಯನ್ನು ಚಿತ್ರರೂಪಕ್ಕೆ ಅಳವಡಿಸಿರುವುದು ಚೆಂದ ಕಾಣಿಸುತ್ತದೆ. ‘ಬೆಲ್‌ಬಾಟಂ’ದಲ್ಲಿ ಹೆಸರು ಗಳಿಸಿದ್ದ ನಿರ್ದೇಶಕ ಜಯತೀರ್ಥ ಮಾಸ್ ಚಿತ್ರವನ್ನು ನೋಡುಗರಿಗೆ ಕೊಟ್ಟಿದ್ದಾರೆ. ಕೈವನಾಗಿ ಧನ್ವೀರ್‌ಗೌಡ ಒಂದೊಂದು ಸಿನಿಮಾದಿಂದ ತನ್ನ ನಟನೆಯಲ್ಲಿ ಪಳಗಿಕೊಳ್ಳುತ್ತಿದ್ದಾರೆ. ಅವರ ರಗಡ್ ಲುಕ್ ಪಾತ್ರಕ್ಕೆ ಹೊಂದಿಕೆಯಾಗಿದೆ. ಮೇಘಾಶೆಟ್ಟಿ ಮೂಗಿಯಾಗಿ ಅಭಿನಯದಲ್ಲಿ ಮಿಂಚಿದ್ದಾರೆ. ಇವರೊಂದಿಗೆ ದಿನಕರ್‌ತೂಗದೀಪ, ರಮೇಶ್‌ಇಂದಿರಾ, ಉಗ್ರಂಮಂಜು, ರಾಘುಶಿವಮೊಗ್ಗ, ಅಶ್ವಿನ್‌ಹಾಸನ್, ಜಟ್ಟಗಿರಿರಾಜ್ ಮುಂತಾದವರು ತಮಗೆ ನೀಡಿದ ಕೆಲಸವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.  ಅಜನೀಶ್‌ಲೋಕನಾಥ್ ಸಂಗೀತ ಮತ್ತೋಂದು ಪ್ಲಸ್ ಪಾಯಿಂಟ್ ಆಗಿದೆ. ಒಟ್ಟಿನಲ್ಲಿ ಆಕ್ಷನ್‌ಪ್ರಿಯರಿಗೆ ಚಿತ್ರವು ಹೇಳಿ ಮಾಡಿಸಿದಂತಿದೆ.  ರವೀಂದ್ರಕುಮಾರ್ ನಿರ್ಮಾಣವಿದೆ.

****     

 

Copyright@2018 Chitralahari | All Rights Reserved. Photo Journalist K.S. Mokshendra,