ಕೊಲೆಗಾರರನ್ನು ಬೆನ್ನತ್ತುವ ವಿಜಯರಾಘವೇಂದ್ರ
‘ಮರೀಚಿ’ ಚಿತ್ರವು ಸರಣಿ ಕೊಲೆಯ ಬಗ್ಗೆ ಹಣೆದಿರುವ ಕಥೆಯಲ್ಲಿ ಕೊಲೆಗಳನ್ನು ಮಾಡಿದವರು ಯಾರು, ಏತಕ್ಕಾಗಿ ಮಾಡಿದರು. ವೈದ್ಯರ ಸರಣಿ ಮರ್ಡರ್ ನಡೆಯುತ್ತದೆ. ಎಲ್ಲಾ ವೈದ್ಯರು ಒಳ್ಳೆಯವರು. ಹಾಗಿದ್ದರೂ ಇವರುಗಳು ಹತ್ಯೆಯಾಗುವುದು ಯಾತಕ್ಕೆ? ಇವರ ಮೇಲಿರುವ ದ್ವೇಷವಾದರೂ ಏನು? ಪೋಲೀಸ್ ಅಧಿಕಾರಿಯ ಪತ್ನಿಯ ಸಾವಿಗೂ ಸಂಬಂಧವಿದೆಯಾ. ಸರಣಿ ಹಂತಕನ ಗುರಿ ಏನು. ಹೀಗೆ ಜಾಡು ಹಿಡಿದು ಹೋದಾಗ ಅನೇಕ ಸಂಗತಿಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತದೆ. ಇದೆಲ್ಲಾದಕ್ಕೂ ಉತ್ತರ ಸಿಗಬೇಕಾದರೆ ಚಿತ್ರಮಂದಿರಕ್ಕೆ ಬರಬೇಕಾಗುತ್ತದೆ.
ಕಥೆ, ನಿರ್ದೇಶನ ಹಾಗೂ ಬಂಡವಾಳ ಹೂಡಿರುವ ಸಿದ್ದಾರ್ವ್ ರವರ ಸೆಸ್ಪೆನ್ಸ್, ಥ್ರಿಲ್ಲಿಂಗ್ ಅಂಶಗಳು ಝಲಕ್ ಕೊಡುತ್ತದೆ. ಕೊಲೆ ಪ್ರಕರಣದ ತನಿಖೆ ಮಾಡುವ ಭೈರವ್‌ನಾಯಕ್ ಹೆಸರಿನಲ್ಲಿ ವಿಜಯರಾಘವೇಂದ್ರ ಮಿಂಚಿದ್ದಾರೆ. ಪತ್ನಿಯಾಗಿ ಸೋನುಗೌಡ, ಇವರೊಂದಿಗೆ ಅಭಿದಾಸ್, ಸ್ಪಂದನಸೋಮಣ್ಣ, ಆರ್ಯನ್, ಶೃತಿಪಾಟೀಲ್, ಗೋಪಾಲ್‌ಕೃಷ್ಣದೇಶಪಾಂಡೆ, ಅರುಣಬಾಲರಾಜ್ ಮುಂತಾದವರ ನಟನೆ ಇದೆ. ಸಂಗೀತ ಜ್ಯೂಡೋ ಸ್ಯಾಂಡಿ, ಛಾಯಾಗ್ರಹಣ ಮನೋಹರ್‌ಜೋಶಿ, ಸಂಭಾಷಣೆ ಪ್ರಸನ್ನ.ಎ.ವಿ, ನೃತ್ಯ ಮದನ್‌ಹರಣಿ ಅವರದಾಗಿದೆ. ಸಿನಿಮಾವನ್ನು ಒಮ್ಮೆ ನೋಡಲು ಅಡ್ಡಿ ಇಲ್ಲ.
****