ಮೊಬೈಲ್ ಸೂಪರು ಆದ್ರೂ ಸ್ವಲ್ಪ ಡೆಂಜರು
ತಂತ್ರಜ್ಘಾನ ಬೆಳದಂತೆ ಮೊಬೈಲ್ ಬಳಕೆ ಎಲ್ಲಾ ವಯಸ್ಸಿನವರಿಗೂ ಗಮನ ಸೆಳೆದಿದೆ. ಇದೆಲ್ಲಾ ಅಂಶಗಳನ್ನು ಬಳಕೆ ಮಾಡಿಕೊಂಡು ‘ಓ ನನ್ನ ಚೇತನ’ ಚಿತ್ರದಲ್ಲಿ ತೋರಿಸಿ ಕ್ಲೈಮಾಕ್ಸ್‌ದಲ್ಲಿ ತೂಕದ ಸಂದೇಶವನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಮೊಬೈಲ್‌ನಿಂದ ಎಷ್ಟು ಲಾಭವಿದೆಯೋ, ಅಷ್ಟೇ ಹಾನಿಕರವು ಆಗುತ್ತದೆ. ಪ್ರಸಕ್ತ ಸನ್ನಿವೇಶದಲ್ಲಿ ದೊಡ್ಡವರಿಗಿಂತ ಮಕ್ಕಳು ಮೊಬೈಲ್‌ನ್ನು ಹೆಚ್ಚು ಬಳಕೆ ಮಾಡುತ್ತಾರೆ. ಇದರಿಂದ ದೈಹಿಕ, ಮಾನಸಿಕ ಸಮಸ್ಯೆಗಳು ಹೆಚ್ಚಾಗುತ್ತಿದೆ. ಇವರುಗಳು ಗಂಟೆಗಟ್ಟಲೆ ಉಪಯೋಗಿಸುತ್ತಾ, ರೀಲ್ಸ್ ಮಾಡಿ, ಗೇಮ್ಸ್ ಆಡುತ್ತಾ ಕಾಲ ಕಳೆಯುತ್ತಿದ್ದಾರೆ. ಕಥೆಯಲ್ಲಿ ಅಪ್ಪನು ಹಸು ಖರೀದಿಸಬೇಕಾದ ಹಣವನ್ನು ಮಗನಿಗೆ ಆಂಡ್ರಾಯ್ಡ್ ಮೊಬೈಲ್ ಕೊಡಿಸುತ್ತಾನೆ. ಇದರಿಂದ ಆತನು ಫೋಟೋ ಶೇರ್ ಮಾಡಿಕೊಂಡು,
ರಾತ್ರಿ ಕನಸಿನಲ್ಲೂ ‘ಲೈಕ್ ಮಾಡಿ ಫ್ರೆಂಡ್ಸ್’ ಎಂದು ಕನವರಿಸುತ್ತಿರುತ್ತಾನೆ. ಇತ್ತ ಅಪ್ಪನು ಕೆಲಸ ಕಳೆದುಕೊಂಡು ಕುಡಿತಕ್ಕೆ ದಾಸನಾಗುತ್ತಾನೆ. ಕೊನೆಯಲ್ಲಿ ಏನಾಗುತ್ತದೆಂದು ಚಿತ್ರಮಂದಿರಕ್ಕೆ ಬಂದರೆ ತಿಳಿಯುತ್ತದೆ.
ನಟಿ ಅಪೂರ್ವ ಮೊದಲ ಬಾರಿ ಕ್ಯಾಮಾರ ಹಿಂದೆ ಅಂದರೆ ನಿರ್ದೇಶನ ಮಾಡಿರುವುದು ವಿಶೇಷ. ೧೦೨ ನಿಮಿಷಗಳ ಕಾಲ ಸಿನಿಮಾ ರೂಪ ನೀಡುವಲ್ಲಿ ಸಪಲರಾಗಿದ್ದಾರೆ. ಬಾಲ ಕಲಾವಿದರುಗಳಾದ ಪ್ರತೀಕ್, ಪ್ರೀತಮ್, ಬೇಬಿ ಡಿಂಪನಾ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಮಕ್ಕಳ ತುಂಟಾಟ, ಮುಗ್ದ ಮನಸುಗಳ ಚೆಲ್ಲಾಟ ಇವೆಲ್ಲಾವು ಕಣ್ಣಿಗೆ ತಂಪು ಕೊಡುತ್ತದೆ. ಎಸ್ ಆಂಡ್ ಎಸ್ ಎಂಟರ್‌ಪ್ರೈಸಸ್ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ.
****