ವೈಭವದ ಕುಸ್ತಿಯ ಅಖಾಡ
ಎಲ್ಲಿ ನೋಡಿದರೂ ಕೆಮ್ಮಣ್ಣು.. ಕಣ್ತುಂಬುವ ಆಶಯದಲ್ಲಿ ನೋಡಿದಷ್ಟು ಕುಸ್ತಿಯದೇ ಮಾತು..
ಅದು ಕೋರಾಫಿಟ್ ಕದನ..!
'ಏನೇ ಬರಲಿ ರಟ್ಟೆ ತಟ್ಟು.. ’ ಎಂಬ ಗರಡಿ ಮನೆಯ ಧೇಯ ವಾಕ್ಯ ಎದ್ದು ಕಾಣುವಂತೆ ಕುಸ್ತಿಯ ಅಖಾಡವೂ ಗಮನ ಸೆಳೆಯುತ್ತದೆ. ಅದಕ್ಕೆ ಸಾಹುಕಾರನ ಬೆಂಬಲವೂ ಇದೆ. ಜೊತೆಗೆ ಏಕಲವ್ಯನ ರೀತಿ ಕಲಿಯುವ ಸೂರಿಯ ಬೆಂಬಲವೂ ಇದೆ.
ಕೋರಾಫಿಟ್ ರಂಗಪ್ಪ ಮುಖ್ಯ ಕಥಾ ನಾಯಕ. ಆದರೆ ಸದಾ ಕಾಲವೂ ಗರಡಿ ಮನೆ ಕಾಯುವ ಸೂರಿಯನ್ನು ಆತ ನಂಬುವುದಿಲ್ಲ. ಬದಲಿಗೆ ಆತನ ಬೆಂಬಲ ಏನಿದ್ದರೂ ಸಾಹುಕಾರ ಚಿಕ್ಕರಾಣೆಗೆ.
ಇದರ ಪರಿಣಾಮ ಏನಾಗುತ್ತದೆ ಎಂಬುದು ಚಿತ್ರದ ತಿರುಳು. ಕೋರಾಫಿಟ್ ರಂಗಪ್ಪ ವಾಸ್ತವ ಅರಿಯದ ಮನೋಭಾವ ಬೆಳೆಸಿಕೊಂಡ ಕಾರಣ. ಗರಡಿ ಮನೆಯ ವಾತಾವರಣದಲ್ಲಿ ವಿಷಾದ ಮನೆ ಮಾಡುತ್ತದೆ.
ಎರಡು ಕೊಲೆಗಳು ನಡೆದು ಊರ ಹಬ್ಬ ಸ್ಮಶಾನವಾಗುತ್ತದೆ. ಅದರ ಪರಿಣಾಮ ಎದುರಿಸುವುದು ಸಹ ಕಷ್ಟದ ಕೆಲಸವಾಗಿರುತ್ತದೆ. ಏಕೆಂದರೆ ಹಣ ಬಲ ಕುತಂತ್ರವಾಗಿ ಕೆಲಸ ಮಾಡುತ್ತದೆ.
ಇಡೀ ಚಿತ್ರವನ್ನು ಆವರಿಸಿರುವುದು ಕೋರಾಫಿಟ್ ರಂಗಪ್ಪ. ಈ ಪಾತ್ರದಲ್ಲಿ ಬಿ.ಸಿ.ಪಾಟೀಲ್ ಮಿಂಚಿದ್ದಾರೆ. ಸೂರಿ ಪಾತ್ರದ ಸೂರ್ಯ, ಚಿಕ್ಕರಾಣೆ ಪಾತ್ರದಲ್ಲಿ ಸುಜಯ್ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಪಪ್ಪಿ ಸುಕನ್ಯ ಅಲಿಯಾಸ್ ಕಬ್ಬಾಳಿ ಪಾತ್ರದಲ್ಲಿ ಸೊನಾಲ್ ಮಂಥೇರ್ ಅದ್ಭುತ ನಟನೆ. ನಯನ ಹಾಗೂ ಧರ್ಮಣ್ಣ ಪಾತ್ರಗಳು ಕೂಡ ಗಮನ ಸೆಳೆಯುತ್ತದೆ.
ಆದರೆ ದರ್ಶನ್ ಫೈಟಿಂಗ್ ನಲ್ಲಿ ಬಂದು ಅಬ್ಬರಿಸಿದರೂ ರವಿಶಂಕರ್ ಅವರ ಶಿವಪ್ಪನ ಪಾತ್ರ ಏನೋ ಕೊರತೆಗಳನ್ನು ಎದುರಿಸುತ್ತವೆ.