The Vacant House.Reviews

Friday, November 17, 2023

298

 ದಿ ವೆಂಕಟ್ಹೌಸ್ದಲ್ಲಿ ಆತ್ಮದ ಸುತ್ತಾಟ

      ವ್ಯಾಮೋಹ, ಮೋಹ ಎಲ್ಲರನ್ನು ಸೆಳೆಯುತ್ತದೆ. ಅದು ಹೇಗೆ ಎಂಬುದನ್ನು ‘ದಿ ವೆಕೆಂಟ್ ಹೌಸ್’ ಚಿತ್ರದಲ್ಲಿ ಥ್ರಿಲ್ಲರ್ ರೂಪದಲ್ಲಿ ತೋರಿಸಲಾಗಿದೆ. ಬದುಕಿದ್ದಾಗ ನಮ್ಮನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವವರು, ಸತ್ತು ಆತ್ಮವಾದ ನಂತರ ಯಾಕೆ ಹಿಂದೆ ಸರಿಯುತ್ತಾರೆ. ಪ್ರೀತಿ ಅಂದರೆ ಇಷ್ಟೇನಾ ಎಂದು ಪ್ರೇತಾತ್ಮವೊಂದು ಪ್ರೇಮಿಗೆ ಕಲಿಸಿಕೊಡುವ ಪಾಠವು ಇದರಲ್ಲಿ ಬರುತ್ತದೆ. ವಯಸ್ಸಾದ ದಂಪತಿಗಳ ನಡುವೆ ಹೊಂದಾಣಿಕೆ ಇರುವುದಿಲ್ಲ. ಇದನ್ನು ಗಮನಸಿದ ಎದುರು ಮನೆಯ ಮಾನವ್ ಆಕೆಯ ಮೋಹಕ್ಕೆ ಸೋಲುತ್ತಾನೆ. ಗೆಳತಿ ಸಹಾಯ ಪಡೆದುಕೊಂಡು ಸ್ನೇಹ, ಪ್ರೀತಿ ಗಿಟ್ಟಿಸಿಕೊಳ್ಳುತ್ತಾನೆ. ಒಮ್ಮೆ ಅಪಘಾತದಲ್ಲಿ ಗಂಡ ತೀರಿ ಹೋಗುತ್ತಾನೆ. ಅವಳು ಗಂಭೀರ ಸ್ಥಿತಿಗೆ ಬರುತ್ತಾಳೆ. ಮುಂದೆ ಆತನ ಬದುಕಿನಲ್ಲಿ ಊಹಿಸಲಾಗದ ಘಟನೆಗಳು ಬರುತ್ತವೆ. ಆದರೆ ಆಕೆ ಮಾತ್ರ ಇದಾವುದರ ಪರಿವೇ ಇಲ್ಲದಂತಿರುತ್ತಾಳೆ. 

ಅಷ್ಟಕ್ಕೂ ಮನೆಯಲ್ಲಿ ಆದದ್ದು ಏನು? ಎಲ್ಲವನ್ನು ನಾವು ಹೇಳುವುದಕ್ಕಿಂತ ಟಾಕೀಸ್‌ಗೆ ಬರುವುದು ಸೂಕ್ತ.

        ನಾಯಕಿಯಾಗಿ ಮಿಂಚಿದ್ದ ಎಸ್ತರ್‌ನರೋನ ಚಿತ್ರಕ್ಕೆ ಕಥೆ,ಚಿತ್ರಕಥೆ,ಸಂಗೀತ, ನಿರ್ಮಾಣ, ನಿರ್ದೇಶನ ಹಾಗೂ ಮುಖ್ಯ ಪಾತ್ರದಲ್ಲಿ ಪತ್ನಿಯಾಗಿ ಕಾಣಿಸಿಕೊಂಡು ಎಲ್ಲದಕ್ಕೂ ನ್ಯಾಯ ಒದಗಿಸಿದ್ದಾರೆ. ಮಾನವ್ ಆಗಿ ಶ್ರೇಯಸ್‌ಚಿಂಗ, ಪತಿಯಾಗಿ ಸಂದೀಪ್‌ಮಲಾನಿ ಗಮನ ಸೆಳೆಯುತ್ತಾರೆ. ನರೇಂದ್ರಗೌಡ ಛಾಯಾಗ್ರಹಣ, ವಿಜಯ್‌ರಾಜ್ ಸಂಕಲನ ಇದಕ್ಕೆ ಪೂರಕವಾಗಿದೆ. ಹಾರರ್ ಸಸ್ಪೆನ್ಸ್ ಇಷ್ಟಪಡುವವರಿಗೆ ಸಿನಿಮಾವು ಪೈಸಾವಸೂಲ್ ಎನ್ನಬಹುದು.

****

 

Copyright@2018 Chitralahari | All Rights Reserved. Photo Journalist K.S. Mokshendra,