ಕುತೂಹಲ ಮೂಡಿಸುವ ಕೇಸ್ ಆಫ್ ಕೊಂಡಾಣ
ಈ ಹಿಂದೆ ‘ಸೀತಾರಾಮ್ ಬಿನೋಯ್’ ಚಿತ್ರ ಮಾಡಿದ್ದ ತಂಡವು ಈಗ ‘ಕೇಸ್ ಆಫ್ ಕೊಂಡಾಣ’ ಸಿನಿಮಾ ಹೈಪರ್ ಲಿಂಕ್,ತನಿಖಾ ಜಾನರ್ ಅಂಶಗಳನ್ನು ಒಳಗೊಂಡಿದೆ. ಕಥೆ ನಡೆಯುವುದು ಸಂಜೆ ಶುರುವಾಗಿ ರಾತ್ರಿ ನಡೆಯುತ್ತದೆ. ಬೆಳಿಗ್ಗೆ ವೇಳೆಗೆ ಮುಗಿಯುತ್ತದೆ. ಕೊಂಡಾಣ ಇರುವುದು ದೇವಿಪ್ರಸಾದ್ ಮನಸ್ಸಿನಲ್ಲಿ ಪ್ರತಿ ಪಾತ್ರ ದ್ರೋಹ ಮತ್ತು ದ್ರೋಹ ಕಂಡು ಹಿಡಿಯುವ ಪಾತ್ರ ಕಾಣಿಸಿಕೊಳ್ಳುತ್ತದೆ. ಜೋಡಿ ಕೊಲೆಗಳ ಜತೆಗೆ ಮತ್ತೋಂದು ಕೊಲೆ. ಅನ್ಯ ಧರ್ಮೀಯರನ್ನು ಪ್ರೀತಿಸಿದ ಕಾರಣಕ್ಕಾಗಿ ಅಣ್ಣ ಸಿಟ್ಟು ಮಾಡಿಕೊಂಡಿರುತ್ತಾನೆ. ಇವೆರದು ಘಟನೆಗಳ ಹಿನ್ನಲೆ ಏನು. ಇದರೊಂದಿಗೆ ಒಂದಷ್ಟು ರೋಚಕ ಸನ್ನಿವೇಶಗಳು ನೋಡುಗರನ್ನು ಸೀಟಿನ ತುದಿಗೆ ಬರುವಂತೆ ಮಾಡುತ್ತದೆ.
ದೇವಿಪ್ರಸಾದ್‌ಶೆಟ್ಟಿ ನಿರ್ದೇಶನ ಹಾಗೂ ಸಾತ್ವಿಕ್‌ಹೆಬ್ಬಾರ್ ಅವರೊಂದಿಗೆ ನಿರ್ಮಾಣದಲ್ಲಿ ಕೈ ಜೋಡಿಸಿದ್ದು ಎರಡನೇ ಬಾರಿ ಉತ್ತಮ ಸಿನಿಮಾ ನೀಡಿದ್ದಾರೆ ಎನ್ನಬಹುದು. ನಾಯಕ ವಿಜಯ್‌ರಾಘವೇಂದ್ರ ಮತ್ತೋಮ್ಮೆ ಇನ್ಸ್‌ಪೆಕ್ಟರ್ ಆಗಿ ಮಿಂಚಿದ್ದಾರೆ. ಭಾವನಾಮೆನನ್ ನಾಯಕಿ. ಇವರೊಂದಿಗೆ ಖುಷಿರವಿ, ರಂಗಾಯಣರಘು, ಪೆಟ್ರೋಲ್‌ಪ್ರಸನ್ನ ಗಮನ ಸೆಳೆಯುತ್ತಾರೆ. ಪ್ರಮೋದ್‌ಮರವಂತೆ ಸಾಹಿತ್ಯದ ಹಾಡುಗಳಿಗೆ ಗಗನ್‌ಬಡೇರಿಯಾ ಸಂಗೀತ ಪರವಾಗಿಲ್ಲ. ವಿಶ್ವಜಿತ್‌ರಾವ್ ಛಾಯಾಗ್ರಹಣ, ಭವಾನಿ ಶಂಕರ್ ಆನೆಕಲ್ಲು ಕಲೆ, ಶಶಾಂಕ್‌ನಾರಾಯಣ್ ಸಂಕಲನವಿದೆ. ಚಿತ್ರವನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.
****