Upadhyaksha.Reviews

Friday, January 26, 2024

58

ಉಪಾಧ್ಯಕ್ಷನ ಆಟಾಟೋಪಗಳು

      ‘ಅಧ್ಯಕ್ಷ’ ಚಿತ್ರದಲ್ಲಿ ಮಿಂಚಿದ್ದ ಚಿಕ್ಕಣ್ಣ ಈಗ ‘ಉಪಾಧ್ಯಕ್ಷ’ ಸಿನಿಮಾದಲ್ಲಿ ನಾಯಕನಾಗಿ ಬಡ್ತಿ ಹೊಂದಿದ್ದಾರೆ.  ಖಡಕ್ ಶಿವರುದ್ರೇಗೌಡ. ಮತ್ತೋಂದು ಕಡೆ ಪ್ರೇಮಿಗಳನ್ನು ಕಂಡರೆ ಉಪಟಳ ಕೊಡುವ ಇನ್ಸ್‌ಪೆಕ್ಟರ್. ಮೈನರ್ ಹುಡುಗಿಯನ್ನು ಪ್ರೀತಿಸುವ ಚಿ.ತು.ಸಂಘದ ಉಪಾಧ್ಯಕ್ಷನಿಗೆ ಬರುವ ಅವಘಡಗಳು. ಎಲ್ಲವನ್ನು ಹಾಸ್ಯದ ರೂಪದಲ್ಲಿ ತೋರಿಸಲಾಗಿದೆ. ಕಥೆಯಲ್ಲಿ ಲವ್, ಕಾಮಿಡಿ, ಸಾಧು ಕೈಯಲ್ಲಿ ಮಚ್ಚು. ಒಂದೇ ಮಾತನಲ್ಲಿ ಹೇಳುವುದಾದರೆ ಶುರುವಿನಿಂದ ಕೊನೆವರೆಗೂ ಪ್ರೇಕ್ಷಕನಿಗೆ ಬಾಯಿ ಮುಚ್ಚಿಕೊಳ್ಳಲು ಅವಕಾಶ ನೀಡಿಲ್ಲದೆ ಇರುವುದು ಪ್ಲಸ್ ಪಾಯಿಂಟ್ ಆಗಿದೆ. ಹಿಂದಿನ ಚಿತ್ರದ ಭಾಗವಾಗಲಿಲ್ಲದಿದ್ದರೂ ಅಲ್ಲಿರುವ ಕೆಲವೊಂದು ಪಾತ್ರಗಳು ಮುಂದುವರೆದಿರುವುದು ವಿಶೇಷ. ಒಟ್ಟಾರೆ ಅಧ್ಯಕ್ಷನಂತೆ ಉಪಾಧ್ಯಕ್ಷನಿಗೆ ಜೈ ಕಾರ ಹಾಕಿದ್ದಾರೆ.

      ಮೊದಲಬಾರಿ ಹೀರೋ ಆಗಿರುವ ಚಿಕ್ಕಣ್ಣ ನಗಿಸುವಲ್ಲಿ ಯಶಸ್ವಿಯಾಗಿದ್ದು, ಚಿತ್ರರಂಗಕ್ಕೆ ಹೊಸ ನಾಯಕ ಹುಟ್ಟಿಕೊಂಡಂತೆ ಆಗಿದೆ. ನಾಯಕಿ ಮಲೈಕಾ ಮುದ್ದಾಗಿ ಕಾಣಿಸುತ್ತಾರೆ. ರವಿಶಂಕರ್ ಅಭಿನಯ ಹೇಳುವುದಕ್ಕಿಂತ ನೋಡುವುದೇ ಚೆಂದ. ಶರಣ್ ಎಂಟ್ರಿ ಕಥೆಗೆ ತಿರುವು ಕೊಡುತ್ತದೆ. ಉಳಿದಂತೆ ಕರಿಸುಬ್ಬು, ಧರ್ಮಣ್ಣಕಡೂರು ಗಮನ ಸೆಳೆಯುತ್ತಾರೆ. ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಅನಿಲ್‌ಕುಮಾರ್ ಶ್ರಮ ಪರದೆ ಮೇಲೆ ಕಾಣಿಸುತ್ತದೆ. ಅರ್ಜುನ್‌ಜನ್ಯಾ ಸಂಗೀತದಲ್ಲಿ ಹಾಡುಗಳು ಆಲಿಸುವಂತಿದೆ. ಸ್ಮಿತಾಉಮಾಪತಿ ನಿರ್ಮಾಪಕರು.

****

 

Copyright@2018 Chitralahari | All Rights Reserved. Photo Journalist K.S. Mokshendra,