Pranayam.Film Reviews

Friday, February 09, 2024

96

ಅತಿ ಮಧುರ ಅನುರಾಗ

        ರೊಮ್ಯಾಂಟಿಕ್, ಕ್ರೈಂ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ‘ಪ್ರಣಯಂ’ ಚಿತ್ರವು ಇನೆಟೆನ್ಸ್ ಪ್ರೇಮಕಥೆಯನ್ನು ಹೊಂದಿದೆ. ಕಾಲೇಜು ದಿನಗಳಲ್ಲಿ ಪ್ರೀತಿಸುತ್ತಿದ್ದ ಆತನು, ಆಕೆ ಬೇರೊಬ್ಬರ ಜೊತೆ ಮದುವೆಯಾದ ಮೇಲೂ ಮರೆಯಲು ಸಾಧ್ಯವಾಗದೆ ಚಡಪಡಿಸುತ್ತಾನೆ. ಪತಿಯೊಂದಿಗೆ ಹನಿಮೂನ್‌ಗೆ ಹೊರಟ ಅವಳಿಗೆ ತಾನು ಅಪಹರಣಗೊಂಡಿದ್ದೇನೆಂದು ತಿಳಿದಿರುವುದಿಲ್ಲ. ಮುಂದೆ ನಡೆಯುವ ಅನಿರೀಕ್ಷಿತ ಘಟನೆಗಳು ನೋಡುಗನಿಗೆ ಶಾಕ್ ಕೊಡುತ್ತಾ ಸಾಗುತ್ತದೆ. ದಂಪತಿಗಳನ್ನು ಹನಿಮೂನ್‌ಗೆ ಕಳುಹಿಸಿದ ಪೋಷಕರು ಮನೆಗೆ ಬಂದಾಗ ನಿಜವಾದ ವರನನ್ನು ಕಟ್ಟಿ ಹಾಕಲಾಗಿರುತ್ತದೆ. ಆದರೆ ವಧು ಜೊತೆ ಹೋದವನು ಯಾರು? ಇದರ ಮಧ್ಯೆ ಹಾಡುಗಳು, ಒಂದರೆಡು ಸಾಹಸಗಳು, ರೊಮ್ಯಾಂಟಿಕ್ ದೃಶ್ಯಗಳು ಬಂದು ಹೋಗುತ್ತದೆ.

       ಮೊದಲ ಬಾರಿ ನಿರ್ದೇಶನ ಮಾಡಿರುವ ಎಸ್.ದತ್ತಾತ್ರೇಯ ಚಿತ್ರಕಥೆಯನ್ನು ಹದವಾಗಿ ಸೃಷ್ಟಿಸಿರುವುದು ಪರದೆ ಮೇಲೆ ಕಾಣಿಸುತ್ತದೆ. ಇವರಿಗೆ ಚಿತ್ರರಂಗದಲ್ಲಿ ಉಜ್ವಲ ಭವಿಷ್ಯವಿದೆ. ನಾಯಕ ರಾಜವರ್ಧನ್ ಎರಡು ಶೇಡ್‌ಗಳಿಗೆ ನ್ಯಾಯ ಒದಗಿಸಿದ್ದಾರೆ. ನಾಯಕಿ ನೈನಾಗಂಗೂಲಿ ಮೈಚಳಿ ಬಿಟ್ಟು ಅಭಿನಯಿಸಿದ್ದು, ಕಣ್ಣಿಗೆ ಕಂಪು ಕೊಡುತ್ತದೆ. ಇವರೊಂದಿಗೆ ಗೋವಿಂದೇಗೌಡ, ಪವನ್‌ಸೂರ್ಯ, ರಾಘವನಾಯಕ್ ತಮಗೆ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಯಿಸಿದ್ದಾರೆ. ಮನೋಮೂರ್ತಿ ಸಂಗೀತದಲ್ಲಿ ಹಾಡುಗಳು ಕೇಳಬಲ್. ಅದೇ ರೀತಿ ನಾಗೇಶ್‌ಆಚಾರ್ಯ ಸುಂದರ ತಾಣಗಳನ್ನು ಸೆರೆಹಿಡಿದ್ದಾರೆ. ‘ಪಿ೨ ಪ್ರೊಡಕ್ಷನ್ಸ್’ ಮತ್ತು ‘ಮಾನ್ಸಿವೆಂಚರ‍್ಸ್’ ಬ್ಯಾನರ್‌ನಲ್ಲಿ ಪರಮೇಶ್ ನಿರ್ಮಾಣವಿದೆ. 

****

 

Copyright@2018 Chitralahari | All Rights Reserved. Photo Journalist K.S. Mokshendra,