ಜಸ್ಟ್ ಪಾಸ್ ಹುಡುಗರ ಸಾಧನೆಗಳು
‘ಜಸ್ಟ್ ಪಾಸ್’ ಚಿತ್ರದ ಕಥೆಯು ಶೀರ್ಷಿಕೆಯ ಸುತ್ತ ಸಾಗುತ್ತದೆ. ರ‍್ಯಾಂಕ್ ಬಂದವರಿಗಷ್ಟೇ ಶಾಲಾ ಕಾಲೇಜುಗಳಲ್ಲಿ ಸೀಟ್ ಕೊಡುತ್ತಾರೆ. ಅಂಥಾ ವಿದ್ಯಾರ್ಥಿಗಳು ಬಂದರೆ ವಿದ್ಯಾಸಂಸ್ಥೆಗಳ ಮೆರಿಟ್ ಹೆಚ್ಚಾಗುವುದು ಖಂಡಿತ. ಆದರೆ ಈ ಸಿನಿಮಾದಲ್ಲಿ ಇದಕ್ಕೆ ವ್ಯತಿರಿಕ್ತವಾದ ಕಾಲೇಜೊಂದನ್ನು ಕಾಣಬಹುದಂತೆ. ಅಂದರೆ ಇಲ್ಲಿ ಕಡಿಮೆ ಅಂಕ ಪಡೆದವರಿಗೆ ಮಾತ್ರ ಸೀಟು ಕೊಡುತ್ತಾರೆ. ಹೀಗೆ ಓದಿಗಿಂತ ಇನ್ನಿತರೆ ಚಟುವಟಿಕೆಗಳೇ ಹೆಚ್ಚು. ಏನಾದರೂ ಮಾಡಿ ಕಾಲೇಜ್‌ನ್ನು ಮುಚ್ಚಿಸಬೇಕೆಂಬ ಎದುರಾಳಿಗಳು. ಇವರೆಡರ ಮಧ್ಯೆ ಶಿಕ್ಷಣ ವ್ಯವಸ್ಥೆ, ಪಠ್ಯೇತರ ಆಸಕ್ತಿಗಳು, ಹುಡುಗರು ಹಾದಿ ತಪ್ಪುವುದು, ಕೊನೆಗೆ ಯಾವ ಸಾಧನೆ ಮಾಡಿ ಹೆಸರು ತರುತ್ತಾರೆ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು.
ಕೆ.ಎಂ.ರಘು ನಿರ್ದೇಶನಲ್ಲಿ ವಿನೂತನ ಅಂಶಗಳನ್ನು ಕಾಣಬಹುದು. ಶ್ರೀನಿ ನಾಯಕ. ಕಿರುತೆರೆಯ ಪ್ರಣತಿ ನಾಯಕಿಯಾಗಿ ಪ್ರಥಮ ಅನುಭವದಲ್ಲೆ ಗಮನ ಸೆಳೆದಿದ್ದಾರೆ. ಪ್ರಾಂಶುಪಾಲರಾಗಿ ರಂಗಾಯಣರಘು ಇಡೀ ಸಿನಿಮಾಕ್ಕೆ ಶೋಭೆ ತಂದಿದ್ದಾರೆ. ಉಳಿದಂತೆ ಸಾಧುಕೋಕಿಲ, ಸುಚೇಂದ್ರಪ್ರಸಾದ್, ನವೀನ್.ಡಿ.ಪಡೀಲ್, ಪ್ರಕಾಶ್‌ತುಮ್ಮಿನಾಡು ಮುಂತಾದವರು ನಟಿಸಿದ್ದಾರೆ. ಸಂಗೀತ ಹರ್ಷವರ್ಧನ್ ರಾಜ್, ಛಾಯಾಗ್ರಹಣ ಸುಜಯ್‌ಕುಮಾರ್, ಸಂಭಾಷಣೆ ರಘುನಿಡುವಳ್ಳಿ ಕೆಲಸ ಅಲ್ಲಲ್ಲಿ ಎದ್ದು ಕಾಣುತ್ತದೆ. ಕೆ.ವಿ.ಶಶಿಧರ್ ಉತ್ತಮ ಸಿನಿಮಾ ನಿರ್ಮಾಣ ಮಾಡಿದ್ದಾರೆ ಎನ್ನಬಹುದು.
****