Ravike Prasanga.Reviews

Friday, February 16, 2024

62

ಹಾಸ್ಯ ಚಿತ್ರ ರವಿಕೆ ಪ್ರಸಂಗ

      ‘ರವಿಕೆ ಪ್ರಸಂಗ’ ಸಿನಿಮಾವು ಹಾಸ್ಯ ಕಥೆಯನ್ನು ಹೊಂದಿದೆ. ಸೀರೆ ಅನ್ನೋದು ಎಲ್ಲಾ ಹೆಂಗಸರು ಇಷ್ಟಪಡುತ್ತಾರೆ. ಸೀರೆ ಒಂದು ಚೆನ್ನಾಗಿದ್ದರೆ ಸಾಲದು. ಅದರ ರವಿಕೆ ಕೂಡ ಅಷ್ಟೇ ಸುಂದರವಾಗಿ ಒಳ್ಳೆ ಫಿಟ್ಟಿಂಗ್‌ದಲ್ಲಿ ಇರಬೇಕು. ಸೀರೆ ಜತೆ ರವಿಕೆ ಸರಿಯಾಗಿಲ್ಲವೆಂದರೆ ಏನೆಲ್ಲಾ ಪ್ರಸಂಗಗಳು ನಡೆಯಬಹುದು ಅನ್ನೋದನ್ನು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.  ಸಂತೋಷ್‌ಕೊಡಂಕೇರಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು ನೋಡುಗರಿಗೆ ಖುಷಿಯನ್ನು ತಂದುಕೊಡುತ್ತದೆ. 

ಗೀತಾಭಾರತಿಭಟ್ ಮುಖ್ಯ ಪಾತ್ರದಲ್ಲಿ ಸರಿಯಾಗಿ ಆಗದ ರವಿಕೆಯಿಂದ ಆಕೆಯ ಜೀವನದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ ಎನ್ನುವ ಸಾನ್ವಿ ಹೆಸರಿನಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಪದ್ಮಜರಾವ್, ಸುಮನ್‌ರಂಗನಾಥ್, ರಾಕೇಶ್‌ಮಯ್ಯಾ, ಸಂಪತ್‌ಮೈತ್ರೇಯಾ, ಕೃಷ್ಣಮೂರ್ತಿಕವತಾರ್, ಪ್ರವೀಣ್‌ಅಥರ್ವ, ರಘುಪಾಂಡೇಶ್ವರ್, ಹನುಮಂತೇಗೌಡ, ಖುಷಿಆಚಾರ್, ಹನುಮಂತರಾವ್ ಮುಂತಾದವರ ಅಭಿನಯವಿದೆ.       ಪಾವನಾಸಂತೋಷ್ ಕಥೆ, ಸಂಭಾಷಣೆ ಕಚಗುಳಿ ತರಿಸುತ್ತದೆ. ದೃಷ್ಟಿ ಮೀಡಿಯಾ ಪ್ರೊಡಕ್ಷನ್ ಅಡಿಯಲ್ಲಿ ಶಂತನುಮಹರ್ಷಿ, ನಿರಂಜನ್‌ಗೌಡ, ಗಿರೀಶ್.ಎಸ್.ಎಂ ಮತ್ತು ಶಿವರುದ್ದಯ್ಯ.ಎಸ್.ವಿ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.

****

 

Copyright@2018 Chitralahari | All Rights Reserved. Photo Journalist K.S. Mokshendra,